ಗಣೇಶ ಸ್ತುತಿ

ರಾಗ : ನಾಟ 
ತಾಳ : ಆದಿ

ವಿಘ್ನೇಶ ತವಶರಣಂ
ವಿಘ್ನವಿನಾಶಕ ತವಶರಣಂ
ಓಂಕಾರೇಶ್ವರ ಶ್ರೀಕರುಣಾಕರ
ಶುಭಕರ ಸಾಗರ ತವಶರಣಂ || ೧ ||

ಆದಿಪೂಜಿತ ಸುರಗಣಸೇವಿತ
ಶ್ರೀಗಣನಾಥ ತವಶರಣಂ
ವಿದ್ಯಾದಾಯಕ ಬುದ್ಧಿಪ್ರದಾಯಕ
ಸಿದ್ಧಿವಿನಾಯಕ ತವಶರಣಂ || ೨ ||

ಶುಕ್ಲಾಂಬರಧರ ಗಜಕರ್ಣೇಶ್ವರ
ಗಣಾಧೀಶ್ವರ ತವಶರಣಂ
ಪಾಂಶಾಂಕುಶಧರ ಪಾಪವಿಮೋಚನ
ಪಾರ್ವತಿ ತನಯ ತವಶರಣಂ || ೩ ||

ಲಂಬೋದರ ಶಂಭು ಕುಮಾರ
ಶರಭಗಣೇಶ ತವಶರಣಂ
ಪಶುಪತಿ ತನಯ ಪರಮ ನಿರಂಜನ
ಪ್ರಣವಾಕಾರ ತವಶರಣಂ || ೪ ||

ಕರಿಮುಖವರದ ಕಾಮಿತಫಲದ
ಕರುಣಾಸಾಗರ ತವಶರಣಂ
ಸುರಮುನಿ ಸೇವಿತ ಮುನಿಜನ ವಂದಿತ
ವಿಶ್ವವಿಧಾತ ತವಶರಣಂ || ೫ ||

ಅಖಂಡ ವಿಗ್ರಹ ಅದ್ಭುತ ಪೂರ್ಣ
ಭದ್ರ ಮೂರುತಿ ತವಶರಣಂ
ವರಮಂಗಲಪುರ ಅಮರಾಧೀಶ್ವರ
ಸದ್ಗುಣಸಾಗರ ತವಶರಣಂ || ೬ ||

ನಾದಾತೀತನೆ ಮಂಗಲದಾತನೆ
ಸುಜ್ಞಾನಪ್ರದನೆ ತವಶರಣಂ
ಏಕದಂತನೆ ಮೋಹನರೂಪನೆ
ಆದ್ಯಪೂಜ್ಯನೆ ತವಶರಣಂ || ೭ ||

ಚಂದಿರವದನನೆ ಸುರಸುಂದರನೆ
ಛಂದೋದ್ಭವನೆ ತವಶರಣಂ
ಉನ್ನತಾನನೆ ಉಪೇಂದ್ರನೆ
ಉತ್ತುಂಗನೇ ತವಶರಣಂ || ೮ ||

ಮಾತಂಗ ವದನ ಆನಂದ ಸದನ
ಹೇ ಶಿವ ನಂದನ ತವಶರಣಂ
ಮೂಷಿಕ ವಾಹನ ಮೋದಕ ಹಸ್ತನೆ
ಷಣ್ಮುಖ ಸೋದರ ತವಶರಣಂ || ೯ ||

ಪರಮ ದಯಾಳು ಪ್ರಸನ್ನ ಗಣಪತಿ
ನಿಜಗತಿ ಗಜಪತಿ ತವಶರಣಂ
ಪರಾತ್ಪರಾಯನೆ ಪರಮಾನಂದನೆ
ಪರಂಪರಾತ್ಮನೆ ತವಶರಣಂ || ೧೦ ||

ಪೀತಾಂಬರಾಯ ಹೇರಂಬರಾಯ
ಶ್ರೀಶುಭರಾಯ ತವಶರಣಂ
ಧೂಮ್ರವರ್ಣನೆ ಕರ್ಮಸಾಕ್ಷಿಣೆ
ಮಹಾಪ್ರಾಣನೆ ತವಶರಣಂ || ೧೧ ||

ಸರ್ವಲಕ್ಷಣ ಸರ್ವಶೋಭಿತ
ಸರ್ವಾಭರಣ ತವಶರಣಂ
ಶುಭವರ ಚರಣ ವಿಶ್ವಂಭರಣ
ಸುರಗುಣಭೂಷಣ ತವಶರಣಂ || ೧೨ ||

ರಕ್ತಚಂದನ ಲೇಪನಧಾರಿ
ದೂರ್ವಾಧಾರಿ ತವಶರಣಂ
ಸಂಪ್ರಮೋದನ ಪ್ರಮೋದನ
ಪ್ರಥಮ ಪೂಜನ ತವಶರಣಂ || ೧೩ ||

ಘಂಟಾ ಘರ್ಘರಿ ಘಟೋಧರನೆ
ಘಟ ಕುಂಭಾನನೆ ತವಶರಣಂ
ಡುಂಡಿವಿನಾಯಕ ಡಿಂಡಿಮಾಪ್ರಿಯ
ಡಾಕಿನಿಶಾಯ ತವಶರಣಂ || ೧೪ ||

ಧಿಮಿಕಿಟ ಧಿಮಿಕಿಟ ಬಾಜಮೃದಂಗ
ತಾಂಡವ ನರ್ತನ ತವಶರಣಂ
ಭೂತ ಭವ್ಯನೆ ಭವೋದ್ಭವನೆ
ಸಿದ್ಧೋದ್ಭವನೆ ತವಶರಣಂ || ೧೫ ||

ಚತುರ್ಭುಜನೆ ಚತುರಾತ್ಮನೆ
ಚತುರ್ಥಿ ಪೂಜನ ತವಶರಣಂ
ಪಂಚಾಕ್ಷರ ಪರಾಯಣಾಯ
ಪಂಚವರ್ಣಾಯ ತವಶರಣಂ || ೧೬ ||

ಸಹಸ್ರನಾಮನೆ ಸಹಸ್ರಶೀರ್ಷನೆ
ಸಹಸ್ರಾಕ್ಷನೆ ತವಶರಣಂ
ದಿವ್ಯ ವಿಭವನೆ ಭವ್ಯ ಪ್ರಭವನೆ
ದೇವಾದಿದೇವನೆ ತವಶರಣಂ || ೧೭ ||

ಬ್ರಹ್ಮಾರ್ಚಿತ ಪದ ಬ್ರಹ್ಮಪರಾಯ
ಬೃಹತ್ತರಾಯ ತವಶರಣಂ
ಅದ್ವೈತಾಯ ಅಪ್ರಮೇಯ
ದಯಾಮಯ ತವಶರಣಂ || ೧೮ ||

ಯಜ್ಞಪ್ರಿಯನೆ ಯಶಸ್ಕರನೆ
ಫಲಪ್ರದನೆ ತವಶರಣಂ
ಅಷ್ಟದ್ರವ್ಯದ ಹವಿಪ್ರಿಯನೆ
ಅಷ್ಟೈಶ್ವರ್ಯನೆ ತವಶರಣಂ || ೧೯ ||

ಸತ್ಸಸಂಕಲ್ಪನೆ ಸ್ವದಕ್ಷಿಣನೆ
ಸುಸಂವೇದ್ಯನೆ ತವಶರಣಂ
ಕ್ಷಮಾಭರಿತನೆ ಕ್ಷೇಮಕರನೆ
ಸಂರಕ್ಷಕನೆ ತವಶರಣಂ || ೨೦ ||

ಹೇ ಗಜವದನ ಪಾಹಿ ಗಜಾನನ
ಜಯ ಶುಭಾನನ ತವಶರಣಂ
ಜಯ ಗಣನಾಯಕ ಮಂಗಳದಾಯಕ
ಮೋಕ್ಷಪ್ರದಾಯಕ ತವಶರಣಂ || ೨೧ ||