ಹನುಮಾನ್ ಸ್ತುತಿ
ರಾಗ : ಕಾಪಿ
ತಾಳ : ಏಕ
ಜೈ ಜೈ ಹನುಮಾನ್ ಜೈ ಹನುಮಾನ್
ಪರಮ ಶ್ರೇಷ್ಠ ಭಕ್ತನು ಹನುಮಾನ್
ರಾಮನಿಗಾಗಿ ಅವತಾರವೆತ್ತಿದ
ಪರಮೇಶ್ವರನೇ ಖ್ಯಾತ ಹನುಮಾನ್ || ೧ ||
ದುಷ್ಟಸಂಹಾರಕೆ ರಾಮನ ನೆರವಿಗೆ
ಕಪಿ ಜನ್ಮ ತಳೆದ ಕಪಿಶ್ರೇಷ್ಠ ಹನುಮಾನ್
ವಾಯುದೇವನ ಅನುಗ್ರಹದಿಂದ
ಜನಿಸಿ ಬಂದ ಪುತ್ರ ಹನುಮಾನ್ || ೨ ||
ಬಾಲ್ಯದಲ್ಲೇ ಸಾಹಸತೋರಿ
ತಾಯಿಗೆ ಹರ್ಷವ ತಂದ ಹನುಮಾನ್
ರಾಮಲಕ್ಷ್ಮಣಗೆ ವನವಾಸದಲ್ಲಿ
ಸಹಾಯ ಮಾಡಿದ ಸದ್ಗುಣ ಹನುಮಾನ್ || ೩ ||
ಲಂಕೆಗೆ ಹಾರಿ ಸೀತಾಮಾತೆಯ
ಸುಳಿವು ತಂದ ದೂತ ಹನುಮಾನ್
ರಾಮ ಸುಗ್ರೀವಗು ಸ್ನೇಹವ ಮಾಡಿಸಿ
ಕಪಿಸೈನ್ಯ ಪಡೆದ ಚತುರನು ಹನುಮಾನ್ || ೪ ||
ಲಂಕೆಗೆ ಯುದ್ಧಕೆ ಹೋಗಲು ಸೇತುವೆ
ಕಪಿಸೈನ್ಯದಿಂದ ಕಟ್ಟಿಸಿದ ಹನುಮಾನ್
ಯುದ್ಧದಲಿ ಲಕ್ಷ್ಮಣ ಪ್ರಜ್ಞೆ ತಪ್ಪಿದಾಗ
ಸಂಜೀವಿನಿ ಪರ್ವತ ತಂದನು ಹನುಮಾನ್ || ೫ ||
ರಾಮರಾವಣರ ಯುದ್ಧ ನಡೆಯುವಾಗ
ರಾಮನಿಗೆ ನೆರವಾದ ವೀರ ಹನುಮಾನ್
ಶ್ರೀರಾಮಚಂದ್ರನು ರಾವಣನ ಕೊಂದು
ಸೀತಾ ಸಹಿತ ಬರುವಾಗ ತೃಪ್ತನಾದ ಹನುಮಾನ್ || ೬ ||
ಅಯೋಧ್ಯೆಯಲ್ಲಿ ರಾಮರಾಜ್ಯಕೆ
ಮೆರಗುತಂದ ಕೀರ್ತಿವಂತ ಹನುಮಾನ್
ದೃಢಭಕ್ತಿಯಿಂದ ಶ್ರೀರಾಮ ಜಯ ರಾಮ
ಎನ್ನುತ ನಿರತವು ಜಪಿಸುವ ಹನುಮಾನ್ || ೭ ||
ಶ್ರೀರಾಮಚಂದ್ರನನ್ನು ತನ್ನ ಹೃದಯದಲಿ
ನೆಲೆ ಮಾಡಿಕೊಂಡ ಪರಮಭಕ್ತ ಹನುಮಾನ್
ಜೈ ಶಿವ ಸ್ವರೂಪಿ ಜೈ ಜೈ ಮಾರುತಿ
ಜೈ ಆಂಜನೇಯ ಜೈ ಹನುಮಾನ್ || ೮ ||
ಶ್ರೀ ದೇವೀ ಮಹಾತ್ಮೆ
15 Songs