ಅರ್ಪಣೆ

|| ಓಂ ಶ್ರೀ ಗಣೇಶಾಯ ನಮಃ ||
|| ಓಂ ಶ್ರೀ ಸಿಗಂದೂರು ಮಾತಾ ||
|| ಓಂ ಶ್ರೀ ಗುರುಭ್ಯೋ ನಮಃ ||

ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಮತ್ತು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರ ದಿವ್ಯ ಚರಣ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧೆಯಿಂದ ಸಾಷ್ಟಾಂಗ ಪ್ರಣಾಮಗಳು.

ಶ್ರೀ ದೇವೀ ಮಹಾತ್ಮೆಯನ್ನು ಪದ್ಯರೂಪದಲ್ಲಿ ಬರೆದಿದ್ದೇನೆ. ಗದ್ಯರೂಪದಲ್ಲೂ ಓದಬಹುದಾಗಿದೆ. ಪೂಜ್ಯ ಗುರುವರ್ಯರು ನಾನು ಬರೆದಿರುವ ಶ್ರೀ ದೇವೀ ಮಹಾತ್ಮೆ ಪುಸ್ತಕಕ್ಕೆ ‘ಆಶೀರ್ವಾದ ನುಡಿ ನೀಡಿದ್ದಾರೆ. ಸಂಸ್ಥಾನಕ್ಕೆ ನಾನೆಂದಿಗೂ ಚಿರಋಣಿ.

ಇಂತಿ ತಮ್ಮ ಪಾದಪದ್ಮಗಳಲ್ಲಿ ಅರ್ಪಿಸುವ
ಶ್ರೀಮತಿ ವೈಜಯಂತಿ ಶ್ರೀಧರ್