ನದಿ ದೇವಿಯರ ಸ್ತುತಿ

ರಾಗ : ಯಮನ್ ಕಲ್ಯಾಣಿ 
ತಾಳ : ಆದಿ

ಗಂಗಾ ಯಮುನೇ ಜನ್ಮಪಾವನೆ
ನರ್ಮದೆ ಸಿಂಧು ನದಿಕಾಳಿಂದಿ
ತುಂಗಾಭದ್ರೆಯೆ ಪೂರ್ಣಾನದಿಯೆ
ನದಿದೇವಿಯರೆ ಸ್ತುತಿಸುವೆವು || ೧ ||

ನದಿನಂದಿನಿಯೆ ಸೀತಾನದಿಯೆ
ಕೋಸಿಕಾವೇರಿ ಮಲಹಾಪಾರಿ
ಮಾನಸ ನದಿಯೇ ಕೃಷ್ಣಾ ನದಿಯೆ
ನದಿದೇವಿಯರೆ ಸ್ತುತಿಸುವೆವು || ೨ ||

ಘಟಪ್ರಭಾ ನದಿ ಕಪಿಲಾ ನದಿಯೆ
ತಾಮ್ರಪರ್ಣೀ ಅಘನಾಶಿನಿ
ಮೇಘನ ನದಿಯೆ ನದಿ ಸರಸ್ವತಿಯೆ
ನದಿದೇವಿಯರೆ ಸ್ತುತಿಸುವೆವು || ೩ ||

ಗೋದಾವರಿಯೆ ಭಾಗಮತಿಯೆ
ಗಂಡಕಿ ತಪತಿ ನದಿ ನೇತ್ರಾವತಿ
ಶೋಣಾ ನದಿಯೆ ಮಹಾ ನದಿಯೆ
ನದಿದೇವಿಯರೆ ಸ್ತುತಿಸುವೆವು || ೪ ||

ಕಾಳಿ ನದಿಯೆ ನದಿ ಮಾಲತಿಯೆ
ಅರ್ಕಾವತಿ ಸಬರಮತಿ
ಭೀಮಾ ನದಿಯೆ ಭಾಗೀರಥಿಯೆ
ನದಿದೇವಿಯರೆ ಸ್ತುತಿಸುವೆವು || ೫ ||