ಶಾರದಾ ಸ್ತುತಿ
ರಾಗ : ಶುದ್ಧಸಾವೇರಿ
ತಾಳ : ಆದಿ
ಜಯದೇವಿ ಶಾರದೆ ವಿದ್ಯಾವಿಶಾರದೆ
ಸರ್ವವಿದ್ಯಾ ಬುದ್ಧಿಪ್ರದೆ
ಹೇ ಶುಭದೇ.. ಹೇ ವರದೇ.. || ಪ ||
ತುಂಗಾತೀರದ ಕ್ಷೇತ್ರದಲಿ
ವಾಸವಾಗಿರುವೆ ಶೃಂಗೇರಿಯಲಿ
ಬ್ರಹ್ಮಹೃದಯೇಶ್ವರಿ ದೇವಿವಾಗೀಶ್ವರಿ
ವಿದ್ಯಾವಾರಿಧಿ ಶ್ರೀಚಕ್ರಾಧೀಶ್ವರಿ || ೧ ||
ವೇದಸ್ವರೂಪಿಣಿ ಪುಸ್ತಕಧಾರಿಣಿ
ಪ್ರಶಾಂತರೂಪಿಣಿ ಅಖಿಲಗುಣಮಣಿ
ಮಂತ್ರಸ್ವರೂಪಿಣಿ ಜ್ಞಾನಪ್ರದಾಯಿನಿ
ತ್ರಿಭುವನ ಪೋಷಿಣಿ ಶ್ರೀಕಲ್ಯಾಣಿ || ೨ ||
ಹಂಸವಾಹಿನಿ ವೀಣಾವಿನೋದಿನಿ
ಭಾವ ರಾಗ ಲಯ ತಾಳ ಸುಬೋಧಿನಿ
ಮಂದಹಾಸಿನಿ ಮೋಹವಿನಾಶಿನಿ
ಸುಶೋಭಿನೀ ಸುರವರದಾಯಿನಿ || ೩ ||
ಪಲ್ಲವಪಾಣಿ ವಿಶ್ವರೂಪಿಣಿ
ಕರುಣಾಮಣಿ ಜಗದೋದ್ಧಾರಿಣಿ
ಭಗವತ್‌ಪಾದ ಶ್ರೀಶಂಕರರ
ಆರಾಧ್ಯದೇವಿ ಶಾರದೆದೇವಿ || ೪ ||
ಮಾತೆ ಲಲಿತೆ ಶ್ವೇತ ಸುಶೋಭಿತೆ
ವಿಶ್ವವಿಖ್ಯಾತೆ ಜಯಶುಭದಾತೆ
ಶ್ರೀ ಸುಜ್ಞಾನಿನಿ ಭಕ್ತರ ಪಾಲಿನಿ
ಆನಂದದಾಯಿನಿ ಮುಕ್ತಿಪ್ರದಾಯಿನಿ || ೫ ||
ಶ್ರೀ ದೇವೀ ಮಹಾತ್ಮೆ
15 Songs