ಪ್ರಾರ್ಥನೆ

ರಾಗ – ಕೇದಾರ ಗೌಳ
ತಾಳ – ಆದಿತಾಳ

ಶ್ರೀ ಸಿಂಗದೂರಾಂಬಾ ಪಾಲಿಸು ನಮ್ಮಯ
ಶಂಕರಿ ವರಗೌರಿ ತಾಯೆ ದಯಾಮಯಿ ||ಪ||

ಸಿಂಹವಾಹಿನಿ ಮಹಿಷನ ಮರ್ಧಿನಿ
ಶ್ರೀ ಚೌಡೇಶ್ವರಿ ನೀ ದುಷ್ಟಶಕ್ತಿ ನಿರ್ಮೂಲಿನಿ ||೧||

ಸಾನಿದ ಪಾಮಪ ನಿದಪಮ ಗರಿಸಾ
ಸಾರಿಮ ಗರಿಸರಿ ಮಪನಿದ ಪಮಪನಿ
ಸನಿಸ ರೀ ರಿಸರಿ ಮಗರಿ ಗಾರೀಸ
ನಿಪರೀ ಸಾನಿದ ಪಸಾರೀ ಮಪನಿ

ಬುದ್ಧಿ ಪ್ರದಾಯಿನಿ ಸುಜನರ ಪಾಲಿನಿ
ಸದ್ಭಕ್ತಿಯಲಿ ಸ್ತುತಿಸುವೆ ಜನನೀ
ಶ್ರೀ ದುರ್ಗಾಂಬೆ ನೀ ಮಂಗಳದಾಯಿನಿ
ಸಿಂಗದೂರೇಶ್ವರಿ ನೀ ಶಿಷ್ಟ ಪರಿಪಾಲಿನಿ ಶ್ರೀ ||೨||