ಲಕ್ಷ್ಮೀನಾರಾಯಣ ಸ್ತುತಿ

ರಾಗ : ಯಮನ್ ಕಲ್ಯಾಣಿ
ತಾಳ : ಆದಿ

ಲಕ್ಷ್ಮೀರಮಣ ಪಾಹಿಮಾಂ
ಲಕ್ಷ್ಮಿನಾರಾಯಣ ರಕ್ಷಮಾಂ || ಪ ||

ಶ್ರೀಲಕ್ಷ್ಮಿರಮಣ ಪೂಜಿಪೆ ಚರಣ
ಮಾಡುವೆ ಸ್ಮರಣ ಬೇಡುವೆ ಕರುಣ || ಅ.ಪ. ||

ಪುರಾಣ ಪುರುಷ ಪುಣ್ಯ ಶ್ಲೋಕ
ವಾಸುಕಿ ಶಯನ ವೈಕುಂಠ ವಾಸ
ಶಂಖಚಕ್ರಧರ ಪೀತಾಂಬರಧರ
ಶ್ರೀಕರ ಶುಭಕರ ಕೃಪಾಕರ || ೧ ||

ಚತುರ್ಬಾಹುವೆ ಚತುರ್ವ್ಯೂಹನೆ
ಚತುರ್ವೇದನೆ ಚತುರಾತ್ಮನೆ
ಕಮಲ ನಯನ ಸುಂದರ ವದನ
ಅಗಣಿತ ಗುಣಗಣ ಜನಾರ್ದನ || ೨ ||

ಕಸ್ತೂರಿ ತಿಲಕಾ ಲಲಾಟ ಫಲಕಾ
ವಕ್ಷಸ್ತಲ ಕೌಸ್ತುಭ
ಶುಭ ಶುಭೇಕ್ಷಣ ವಿಶ್ವದಕ್ಷಿಣ
ಸುಗುಣ ಸುಷೇಣ ನಾರಾಯಣ || ೩ ||

ಬ್ರಹ್ಮಕೃತಾಯನೆ ಬ್ರಹ್ಮಣ್ಯಾಯನೆ
ಬ್ರಾಹ್ಮಣ ಪ್ರಿಯನೆ ಬ್ರಹ್ಮಜ್ಞಾನನೆ
ಪದ್ಮನಿಭೇಕ್ಷಣ ಪದ್ಮಾಕಾಂತ
ಪದ್ಮನಾಭ ಪಾವನ ಚರಿತ || ೪ ||

ಸರ್ವತೋಮುಖನೆ ಸರ್ವೋತ್ತಮನೆ
ಸರ್ವಾಂತರ್ಯಾಮಿ ಸರ್ವಾತ್ಮನೆ
ಸತ್ವಗುಣನೆ ನಿಶ್ಚಲತತ್ವನೆ
ದುರ್ಗುಣ ಹತ್ವನೆ ಜೀವ ಮುಕ್ತನೆ || ೫ ||

ಪುಣ್ಯಧಾತ್ರನೆ ಪರಂಧಾಮನೆ
ಪುಣ್ಯಚರಿತನೆ ಪರಿಪೂರ್ಣನೆ
ಅಚ್ಯುತಾನಂತ ಸದ್ಗುಣವಂತ
ಹೃದಯವಂತ ಭಗವಂತ || ೬ ||

ಶ್ರೀವತ್ಸಾಕಿಂತ ಶ್ರಿತಜನವತ್ಸಲ
ಸರ್ವರಕ್ಷಿತ ತ್ರಿಭುವನಪಾಲ
ಅಂಬುಜಲೋಚನ ಪತಿತ ಪಾವನ
ಸಾಮಗಾನ ಪುರುಷೋತ್ತಮ || ೭ ||

ಮುರಹರ ಶುಭವರ ದಯಾಸಾಗರ
ಶಾಸ್ತ್ರಾಸಾರ ವೇದೋದ್ಧಾರ
ಕಲಿಯುಗ ವರದನೆ ಯಜ್ಞಪ್ರಿಯನೆ
ಯಶಸ್ಕರನೆ ವಿಷ್ಣುದೇವನೆ || ೮ ||

ಹೇ ಕೇಶವ ಹೇ ಮಾಧವ
ಆದ್ಯ ದೇವ ವಾಸುದೇವ
ಪುಂಡರೀಕಾಕ್ಷ ಪಾಂಡುರಂಗ
ಸುರಾಧ್ಯಕ್ಷ ವೇದವೇದಾಂಗ || ೯ ||

ಧರಣೀಧರ ದಾಮೋದರ
ಮನೋಹರ ಸುಖಸಾಗರ
ಶ್ರೀನಿವಾಸ ಶೋಕವಿನಾಶ
ಶ್ರೀಶಹರೀಶ ಶ್ರೀಕೃಪೇಶ || ೧೦ ||

ಮಧುರಾನನ ಮಧುಸೂದನ
ಮದಭಂಜನ ನಿರಂಜನ
ಸುರಾನಂದ ಗೋವಿಂದ
ಸತ್ಯಸಂಧ ಶ್ರೀಮುಕುಂದ || ೧೧ ||

ವೆಂಕಟರಮಣ ಸಂಕಟ ಹರಣ
ಪಾಪ ನಿವಾರಣ ಕರುಣಾಭರಣ
ಹೇ ಅರವಿಂದ ಧ್ಯಾನದಿಂದ
ಬಂದ ಆನಂದ ಪರಮಾನಂದ || ೧೨ ||

ಸುರವಂದಿತ ಪದ ಕಾಮಿತಾರ್ಥಪ್ರದ
ಪರಮಪುರುಷ ವೆಂಕಟೇಶ
ಆನಂದಾಮೃತ ಅದ್ಭುತಚರಿತ
ಅಮಿತ ಪ್ರತಾಪ ಅನಂತರೂಪ || ೧೩ ||

ಕ್ಲೇಶವಿನಾಶಕ ಅನಾಥ ರಕ್ಷಕ
ಲೋಕನಾಯಕ ಜಗದೋದ್ಧಾರಕ
ಸದಾಸದ್ಭಾವಿತ ಕಲ್ಯಾಣಾದ್ಭುತ
ಲಕ್ಷ್ಮೀಕಾಂತ ಮುಕ್ತಿಯದಾತ || ೧೪ ||