ಶುಭ ನುಡಿ

|| ಶ್ರೀ ಗುರು ಗಣಾಧಿಪತಯೇ ನಮಃ ||

ಆತ್ಮೀಯರಾದ ಶ್ರೀಮತಿ ವೈಜಯಂತಿ ಶ್ರೀಧರ್‌ರವರು ಶ್ರೀ ಶೃಂಗೇರಿ ಮಠದ ಪರಮಭಕ್ತರಾಗಿದ್ದು, ಚಿಕ್ಕಂದಿನಿಂದಲೂ ಪ್ರತಿಭಾವಂತರಾಗಿದ್ದು, ನೃತ್ಯ, ಸಂಗೀತ, ಸಾಹಿತ್ಯಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದು, ಇದರ ಪ್ರೇರಣೆಯಿಂದ ಅನೇಕ ಗೀತೆಗಳನ್ನು ರಚಿಸಿದ್ದು, ಅವುಗಳೆಲ್ಲವೂ ಭಕ್ತಿ ಪರವಾದ ಸಾಹಿತ್ಯಗಳಾಗಿದ್ದು, ಮತ್ತು ಪ್ರಾಸಬದ್ಧವಾಗಿ ತಾಳಗಳಿಗೆ ಹೊಂದುವಂತೆ ರಚಿಸಿರುತ್ತಾರೆ.

ಈ ಸಾಹಿತ್ಯಗಳು ಭಜನೆಗಳಲ್ಲಿ ಬಳಸಲು ಸೂಕ್ತವಾಗಿರುತ್ತದೆ. ಗಣೇಶ ಮುಂತಾದ ದೇವರುಗಳ, ನವಗ್ರಹಗಳ ಹಾಗೂ ಗುರುಗಳ ಮೇಲಿನ ರಚನೆಗಳನ್ನು ಮಾಡಿರುತ್ತಾರೆ. ಈ ರಚನೆಗಳಿಂದ ಗುರುಗಳ ಚರಿತ್ರೆಯು ಮನದಟ್ಟಾಗುವಂತೆ ಮಾಡಿರುತ್ತಾರೆ. ಹಾಗೆಯೇ ಶ್ರೀ ಶಂಕರಾಚಾರ್ಯರ ರಚನೆಯಾದ ಸೌಂದರ್ಯ ಲಹರಿಯನ್ನು ಸಾಮಾನ್ಯ ಜನರಿಗೆ ಕೂಡಾ ಅರ್ಥವಾಗುವಂತೆ ಸುಂದರವಾಗಿ ಕನ್ನಡದಲ್ಲಿ ಹಾಡಿನ ರೂಪದಲ್ಲಿ ರಚಿಸಿರುತ್ತಾರೆ. ಅದರೊಂದಿಗೆ ಶ್ರೀ ಶಂಕರಾಚಾರ್ಯರ ಚರಿತ್ರೆಯ ನಾಟಕವನ್ನು ಕೂಡ ರಚಿಸಿರುತ್ತಾರೆ. ಅವರ ಆಸಕ್ತಿ ಹಾಗೂ ಶ್ರಮದಿಂದ ಈ ರಚನೆಗಳೆಲ್ಲವೂ ತುಂಬಾ ಚೆನ್ನಾಗಿ ಮೂಡಿ ಬಂದಿರುತ್ತದೆ.

ಇನ್ನೂ ಮುಂದೆಯೂ ಸರಸ್ವತಿ ಆರಾಧನೆಯನ್ನು ಸಾಂಗವಾಗಿ ಮಾಡುವ ಶಕ್ತಿಯನ್ನು ಕರುಣಿಸಲೆಂದು ಶ್ರೀದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.

ಶುಭವಾಗಲಿ.

ಇಂತಿ
ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ
ಆಸ್ಥಾನ ವಿದ್ವ್ವಾನ್, ಶ್ರೀ ಮಠ, ಹರಿಹರಪುರ
ಅಕಾಡೆಮಿ ಸ್ಕೂಲ್ ಆಫ್ ಮ್ಯೂಸಿಕ್
ಮುಕುಂದ ಕೃಪಾ, ಉಡುಪಿ – 576101