ಶ್ರೀದೇವಿ ಸ್ತುತಿ

ರಾಗ : ಷಣ್ಮುಖಪ್ರಿಯ
ತಾಳ : ಏಕ

ಶ್ರೀದೇವಿ ಹೇ ದೇವಿ ಜಯದೇವಿ
ಮಾತೆ ಶ್ರೀ ಲಲಿತೆ ಜಗನ್ಮಾತೆ || ಪ ||

ಶಿವೆಯೇ ಉಮೆಯೇ ಪರಮೇಶ್ವರಿಯೆ
ತಾಯೇ ನಿನ್ನ ಪ್ರಾರ್ಥಿಸುವೆ || ಅ.ಪ. ||

ರಜತಾದ್ರಿಯ ಶೃಂಗಗಿರಿ
ನಂದಿಯ ಸಹಿತ ಶಂಕರಗೌರಿ
ಅವ್ಯಾಜಕರುಣಾ ಪೂರಾವಾರಿ
ತಾಯೇ ನಿನ್ನ ಪ್ರಾರ್ಥಿಸುವೆ || ೧ ||

ಹೇ ಪೃಥ್ವಿಯೇ ಮೂಲ ಪ್ರಕೃತಿಯೆ
ಜೀವಸಂಕುಲೆ ಭೂಮಿದೇವಿಯೆ
ಪ್ರಣತಾರ್ಥಿಯೇ ಪಾರಮಾರ್ಥೆಯೆ
ತಾಯೇ ನಿನ್ನ ಪ್ರಾರ್ಥಿಸುವೆ || ೨ ||

ಆದ್ಯಪೂಜಿನಿ ಮಂತ್ರಸ್ವರೂಪಿಣಿ
ದಿವ್ಯಶೋಭಿನಿ ಅಖಿಲಗುಣಮಣಿ
ಪರಿಪೂರ್ಣೆಯೆ ನೀ ಶ್ರೀ ಕಲ್ಯಾಣಿ
ತಾಯೇ ನಿನ್ನ ಪ್ರಾರ್ಥಿಸುವೆ || ೩ ||

ಬೃಹತ್ ಸೌವರ್ಣ ಸೌಂದರ್ಯವದನೆ
ದಿವ್ಯಭೂಷಣ ಪ್ರಕಾಶಿನೇ
ಸುವರ್ಣ ಪೀಠದೊಳು ಸ್ಥಾಪಿತೆಯೇ
ತಾಯೇ ನಿನ್ನ ಪ್ರಾರ್ಥಿಸುವೆ || ೪ ||

ವಜ್ರಮಾಣಿಕ್ಯದ ಕಿರೀಟಧಾರ್ಯೆ
ರತ್ನಾಭರಣ ಮಾಲಿನಿಯೇ
ಭಸ್ಮರೇಖಾಂಕಿತೆ ಹರನಪ್ರಿಯೇ
ತಾಯೇ ನಿನ್ನ ಪ್ರಾರ್ಥಿಸುವೆ || ೫ ||

ವಿಶ್ವರೂಪೇ ವೈಶ್ವಾನರಿಯೆ
ವಾಗ್ದೇವಿಯೇ ವಾಗೇಶ್ವರಿಯೆ
ವಂದ್ಯೇ ವಿನುತೇ ಶ್ರೀ ಚಕ್ರಾಧಿತೆ
ತಾಯೇ ನಿನ್ನ ಪ್ರಾರ್ಥಿಸುವೆ || ೬ ||

ರಾಜರಾಜೇಶ್ವರಿ ಅಖಿಲಾಂಡೇಶ್ವರಿ
ಹಿಮಗಿರೀಶ್ವರಿ ಶಶಾಂಖ ಶೇಖರಿ
ಶಿವೆ ಸರ್ವೇಶ್ವರಿ ಚಾಮುಂಡೇಶ್ವರಿ
ತಾಯೇ ನಿನ್ನ ಪ್ರಾರ್ಥಿಸುವೆ || ೭ ||

ದುಷ್ಟಶಿಕ್ಷಕಿ ಶಂಭುಶಾಂಭವಿಯೆ
ಶಿಷ್ಟರಕ್ಷಕಿ ಅಂಬಭವಾನಿಯೆ
ಇಷ್ಟಾರ್ಥಸಿದ್ಧಿಯೆ ಶ್ರೀ ದುರ್ಗಾಂಬೆ
ತಾಯೇ ನಿನ್ನ ಪ್ರಾರ್ಥಿಸುವೆ || ೮ ||

ಸರ್ವೋಪಾದಿ ವಿನಿರ್ಮುಕ್ತೆ
ಸನಕಾದಿ ಸಮಾರಾಧ್ಯೆ
ಅನಾದ್ಯಂತ ದಿವ್ಯಮೂರ್ತೆ
ತಾಯೇ ನಿನ್ನ ಪ್ರಾರ್ಥಿಸುವೆ || ೯ ||

ಸುಧೇ ವಸುಧೇ ವಸುಂಧರಿ
ಶುಭೆ ಶುಭಾಂಶು ಬಿಂಬಾಧರಿ
ಪರಂಜ್ಯೋತಿ ಪರಾತ್ಪರಿ
ತಾಯೇ ನಿನ್ನ ಪ್ರಾರ್ಥಿಸುವೆ || ೧೦ ||

ವೇದಪ್ರಕಾಶಿನಿ ವೇದಪ್ರಿಯೆ
ಸರ್ವಜ್ಞಾನಿ ಸುಬೋಧಿನಿಯೆ
ಸರ್ವಾರ್ಥ ಸಾಧಕೆ ತ್ರಯಂಬಿಕೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೧ ||

ಧರ್ಮಶಾಸ್ತ್ರೆ ಧರ್ಮ ಜ್ಞಾನೆ
ಧರ್ಮಾಶಕ್ತೆ ಧರ್ಮೋದ್ಧಾರೆ
ಧಾರ್ಮಿಕಾವಿಧಿ ವರಪ್ರದಾಯೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೨ ||

ಸದ್ಭಕ್ತವರದೆ ಸುಶೋಭಿತೆ
ಸರ್ವವಂದ್ಯೆ ಶಿವಶಕ್ತಿಯೆ
ಸುನಿರ್ಮಲೆಯೆ ಸುಭದ್ರೆಯೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೩ ||

ವಿಂಧ್ಯನಿವಾಸಿನಿ ಸಿಂಹಾಸಿನಿಯೆ
ಅನೀತಿನಾಶಿನಿ ನೀತಿಪಾಲಿನಿಯೆ
ಭಕ್ತಿಗೆ ಒಲಿವೆ ಮಹಾಶಕ್ತಿಯೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೪ ||

ಕಲಾಮೂರ್ತಿಯೆ ಕಾತ್ಯಾಯನಿಯೆ
ಸೌಭಾಗ್ಯದಾಯೆ ಸೌದಾಮಿನಿಯೆ
ಆತ್ಮಶಕ್ತಿಯೆ ಮಹಿಮಾನ್ವಿತೆಯೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೫ ||

ಸ್ವಯಂಭೂತ್ಯೈ ಭುವನೇಶ್ವರಿಯೆ
ಅಪಾಂಯೋನಯೆ ತ್ರೈಲೋಚನೆಯೆ
ಅಂಬಿಕೇಶ್ವರಿಯೆ ಜಗದಾಂಬಿಕೆಯೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೬ ||

ಲೀಲಾಕಲ್ಪಿತೆ ಸುರಾರ್ಚಿತೆ
ಸರ್ವಶಕ್ತೆ ಕಲುಷ ನಾಶಿತೆ
ಭಕ್ತರಕ್ಷಿತೆ ದಯಾಭರಿತೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೭ ||

ಇಚ್ಛಾಶಕ್ತೆ ಕ್ರಿಯಾಶಕ್ತೆ
ನಿತ್ಯಮುಕ್ತೆ ಸರ್ವಾತ್ಮಿಕೆ
ಜಾಗೃತಶಕ್ತೆ ಮೂಕಾಂಬಿಕೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೮ ||

ಕರುಣಾವರುಣಾ ಹೇ ಸಾಗರಿಯೆ
ಭವಭಯ ನಾಶಿನಿ ಈಶ್ವರಿಯೆ
ಪ್ರಾಣ ಸ್ವರೂಪಿಣಿ ಸರ್ವೇಶ್ವರಿಯೆ
ತಾಯೇ ನಿನ್ನ ಪ್ರಾರ್ಥಿಸುವೆ || ೧೯ ||

ಮಹಾಪೀಠೆ ಮಾಹೇಶ್ವರಿಯೆ
ಮಹಾಮಾಯೆ ಮಹಾದೇವಿಯೆ
ಮೋಕ್ಷದಾಯೆ ನವಶಕ್ತಿಯೆ
ತಾಯೇ ನಿನ್ನ ಪ್ರಾರ್ಥಿಸುವೆ || ೨೦ ||

ಜಯ ಜಯ ಮಂಗಳ ಸಿರಿಗೌರಿ
ಜಯ ಶುಭ ಮಂಗಳ ವರ ಗೌರಿ
ಶುಭ ಜಯ ವರಸಿರಿ ಮಂಗಳಗೌರಿ
ತಾಯೇ ನಿನ್ನ ಪ್ರಾರ್ಥಿಸುವೆ || ೨೧ ||