ಶಿವ ಸ್ತುತಿ

ರಾಗ : ರೇವತಿ
ತಾಳ : ಏಕ

ಓಂ ಜಗದೀಶ ಹರೇ ಶಿವಶಿವ
ಓಂ ಮಹೇಶ ಹರೇ || ಪ ||

ಭಕ್ತರ ಸಂಕಟ ಕ್ಷಣದಲಿ ನೀಗುವ
ಜೈ ಜಗದೀಶ ಹರೇ || ಅ.ಪ. ||

ಕೈಲಾಸವಾಸ ಉಮಾ ಮಹೇಶ
ಭವ ಭಯ ನಾಶ ಜಗದೀಶ
ಭವ ಭಯ ನಾಶ ಜಗದೀಶ
ಸಕಲವ ನೀಡುವ ಗಿರಿಜೇಶ || ೧ ||

ಓಂಕಾರೇಶ್ವರ ವಿಶ್ವೇಶ್ವರ
ನಟನ ಮನೋಹರ ಗೌರೀವರ
ನಟನ ಮನೋಹರ ಗೌರೀವರ
ಮೃತ್ಯುಂಜಯಾ ಪರಮೇಶ್ವರ || ೨ ||

ಭಸ್ಮವಿಭೂಷಿತ ತ್ರಿಶೂಲಧಾರಿ
ಚಂದ್ರ ಚೂಡಾ ಗಂಗಾಧಾರಿ
ಚಂದ್ರ ಚೂಡಾ ಗಂಗಾಧಾರಿ
ತಾಂಡವ ಪ್ರಿಯ ಶಿವ ಡಮರುಗಧಾರಿ || ೩ ||

ವ್ಯಾಘ್ರಚರ್ಮಾಂಬರ ವಿಶ್ವಂಬರ
ತ್ರ್ಯಂಬಕ ರೂಪೀ ಮಹೇಶ್ವರ
ತ್ರ್ಯಂಬಕ ರೂಪೀ ಮಹೇಶ್ವರ
ಹೇ ಪ್ರಳಯಂಕರ ಚಿದಂಬರ || ೪ ||

ಪಾರ್ವತಿ ರಮಣ ಪರಮಶಿವ
ಪರಮ ಪವಿತ್ರ ಹೃದಯಶಿವ
ಪರಮ ಪವಿತ್ರ ಹೃದಯಶಿವ
ಪಶುಪತಿನಾಥ ಸಾಂಬಶಿವ || ೫ ||

ಕೇದಾರನಾಥ ವಿಶ್ವವಿಧಾತ
ನೀಲಕಂಠ ಭೂತನಾಥ
ನೀಲಕಂಠ ಭೂತನಾಥ
ಚಂದ್ರಶೇಖರ ಜಗನ್ನಾಥ || ೬ ||

ಮುನಿಜನ ವಂದಿತ ಅಭಯಂಕರ
ಪನ್ನಗಭೂಷಣ ಪರಾತ್ಪರ
ಪನ್ನಗಭೂಷಣ ಪರಾತ್ಪರ
ಪರಮ ಪರೇಶ ಶಿವಶಂಕರ || ೭ ||

ಸ್ಮಶಾನ ವಾಸ ಕಾಶಿ ವಿಶ್ವೇಶ
ರಾಮೇಶ್ವರಂ ರಾಮೇಶ
ರಾಮೇಶ್ವರಂ ರಾಮೇಶ
ಮಹಾಬಲೇಶ ಗೋಕರ್ಣೇಶ || ೮ ||

ಅಘೋರೇಶ ರುದ್ರತ್ರಿನೇತ್ರ
ಕಾಮದಹನ ಫಾಲನೇತ್ರ
ಕಾಮದಹನ ಫಾಲನೇತ್ರ
ಜನ್ಮಪಾವನ ಶಿವ ನಿನ್ನ ಕ್ಷೇತ್ರ || ೯ ||

ನಾಗನಾಥ ವೈದ್ಯನಾಥ
ಭಂ ಭಂ ಭಂ ಭಂ ಭೋಲೆನಾಥ
ಭಂ ಭಂ ಭಂ ಭಂ ಭೋಲೆನಾಥ
ಶಂಭೋ ಶಂಕರ ಸೋಮನಾಥ || ೧೦ ||

ಪಾಹಿ ಪಾಹಿ ಶಕ್ತಿ ಶಿವ
ಹರ ಹರ ಶಂಕರ ಮಹದೇವ
ಹರ ಹರ ಶಂಕರ ಮಹದೇವ
ಮುಕ್ತಿದಾಯಕ ಜಯದೇವ || ೧೧ ||