ಅರಿಕೆ
ಶ್ರೀ ಸಿಗಂದೂರೇಶ್ವರಿಯ ಚರಣ ಕಮಲಗಳಿಗೆ ನಮಸ್ಕರಿಸುತ್ತಾ ಬರೆಯುತ್ತಿದ್ದೇನೆ. ನನ್ನ ಆರಾಧ್ಯ ದೇವಿ ಶ್ರೀ ಸಿಗಂದೂರೇಶ್ವರಿಯ ಸೇವೆಯೇ ನನ್ನ ಸೌಭಾಗ್ಯ. ಶ್ರೀದೇವಿಯ ಪ್ರೇರಣೆಯಿಂದಲೇ ಈ ಹಾಡನ್ನು ರಚಿಸಿ ಅರ್ಪಿಸುತ್ತಿದ್ದೇನೆ.
ನನ್ನ ಗುರುಗಳಾದ ಸಂಗೀತ ವಿದ್ವಾನರಾದ ದಿವಂಗತ ಪ್ರಭಾಕರರಾಯರು ಕಲಿಸಿದ ಕೆಲವೇ ಪಾಠಗಳಿಂದ ಭಕ್ತಿಗೀತೆಗಳನ್ನು ರಚಿಸಲು ಸಾಧ್ಯವಾಯಿತು. ನಾನು ಬರೆದ ಈ ಹಾಡುಗಳಿಗೆ ರಾಗ-ತಾಳವನ್ನು ನನ್ನ ಗುರುಗಳೇ ಸಂಯೋಜಿಸಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಈ ಹಾಡನ್ನು ತಿದ್ದಿ ಸಲಹೆ-ಮಾರ್ಗದರ್ಶನವನ್ನು ನೀಡಿದ ಶ್ರೀಯುತ ಎನ್. ಎನ್. ಮಧ್ಯಸ್ಥರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಸಿಗಂದೂರೇಶ್ವರಿಯ ಕೃಪೆಯಿಂದ ಪದ್ಯದ ರೂಪದಲ್ಲಿ ರಚಿಸಿರುವ ಈ ಗೀತೆಗಳನ್ನು ಗದ್ಯದ ರೂಪದಲ್ಲೂ ಓದಬಹುದಾಗಿದೆ.
ಸರಿಯಾಗಿ ಅಂದವಾಗಿ ಸಕಾಲಕ್ಕೆ ಮುದ್ರಿಸಿಕೊಟ್ಟ ವನರಾಜ ಮುದ್ರಣಾಲಯದವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಹಾಡನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀ ಸಿಗಂದೂರೇಶ್ವರಿ ದೇವಿಯ ಪ್ರಥಮ ಭಕ್ತನ ವಂಶದವರಿಗೆ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ಶ್ರೀ ದೇವೀ ಮಹಾತ್ಮೆ
15 Songs