ಕೃತಜ್ಞತೆ

ಉಡುಪಿಯಲ್ಲಿರುವ ಶ್ರೀಯುತ ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಂಡು ಗೀತೆ ಗೊಂಚಲು – ದೇವರ ಭಕ್ತಿಗೀತೆಗಳ ಕಿರುಹೊತ್ತಿಗೆಗೆ ರಾಗ-ತಾಳಗಳನ್ನು ಸಂಯೋಜಿಸಿ ಕೊಡಬೇಕೆಂದು ಕೇಳಿಕೊಂಡಾಗ ಸರಳ ಸಜ್ಜನರಾದ ಅವರು ಸಹೃದಯ ಮನದಿಂದ ಒಪ್ಪಿ, ಈ ಎಲ್ಲಾ ಗೀತೆಗಳಿಗೂ ರಾಗ-ತಾಳಗಳ ಸಂಯೋಜನೆಯನ್ನು ಮಾಡಿದ್ದಾರೆ. ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಹಾಗೂ ತುಂಬು ಹೃದಯದ ಕೃತಜ್ಞತೆಗಳು.

ಇಂತಿ
ಶ್ರೀಮತಿ ವೈಜಯಂತಿ ಶ್ರೀಧರ್