ಅರ್ಪಣೆ

|| ಓಂ ಶ್ರೀ ಗಣೇಶಾಯ ನಮಃ ||
|| ಓಂ ಶ್ರೀ ಸಿಗಂದೂರು ಮಾತಾ ||
|| ಓಂ ಶ್ರೀ ಗುರವೇ ನಮಃ ||

ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಮತ್ತು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರ ದಿವ್ಯ ಚರಣ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧೆಯಿಂದ ಸಾಷ್ಟಾಂಗ ಪ್ರಣಾಮಗಳೊಂದಿಗೆ ಸಮರ್ಪಿಸುತ್ತಿದ್ದೇನೆ.

ಭಗವತ್ಪಾದ ಶ್ರೀ ಶಂಕರಾಚಾರ್ಯರ ಜೀವನ ಚರಿತ್ರೆ, ಸೌಂದರ್ಯ ಲಹರಿ, ಶ್ರೀ ಗುರು ಚರಿತ್ರೆ, ಸುಬ್ರಹ್ಮಣ್ಯ ಕವಚ, ಹನುಮಾನ್ ಸ್ತುತಿ, ನವಗ್ರಹಗಳ ಬಗ್ಗೆ ಓದಿ ಸಂಕ್ಷಿಪ್ತವಾಗಿ ಗೀತೆಯ ಮೂಲಕ ಹಾಡನ್ನು ಬರೆದಿದ್ದೇನೆ. ಭಗವತ್ಪಾದ ಶ್ರೀ ಶಂಕರಾಚಾರ್ಯರ ಜೀವನ ಚರಿತ್ರೆಯ ಕಿರು ನಾಟಕವನ್ನು ಬರೆದಿದ್ದೇನೆ. ದೇವರ ಭಕ್ತಿಗೀತೆಯನ್ನೂ ಬರೆದಿದ್ದೇನೆ. ಪೂಜ್ಯ ಗುರುವರ್ಯರಿಂದ ಆಶೀರ್ವಾದ ನುಡಿಗಾಗಿ ಪ್ರಾರ್ಥಿಸುತ್ತೇನೆ.

ಇಂತಿ ತಮ್ಮ ಪಾದಪದ್ಮಗಳಲ್ಲಿ ಅರ್ಪಿಸುವ
ಶ್ರೀಮತಿ ವೈಜಯಂತಿ ಶ್ರೀಧರ್