ವಿಷ್ಣು ಸ್ತುತಿ
ರಾಗ : ಬೃಂದಾವನ ಸಾರಂಗ
ತಾಳ : ಆದಿ
ಹೇ ದೇವನೆ ನಿನ್ನ ನಾಮಾಮೃತವನು
ಅನುದಿನ ಸವಿಯುವ ಮನವನು ಕರುಣಿಸೋ
ಶ್ರೀಲಕ್ಷ್ಮೀರಮಣ ಶ್ರೀಮನ್ನಾರಾಯಣ
ನಿನ್ನಯ ನಾಮವ ಎನ್ನಲಿ ನುಡಿಸೋ || ೧ ||
ವೈಕುಂಠ ವಾಸನೆ ಶೇಷಶಯನನೆ
ತ್ರಿಗುಣಾತ್ಮಕನೆ ತ್ರಿಲೋಕ ವಂದ್ಯನೆ
ಚತುರ್ಭುಜಾಯನೆ ಚತುರ್ವೇದಾತ್ಮನೆ
ಸರ್ವತೋಮುಖನೆ ಸಕಲಾಭೀಷ್ಟನೆ || ೨ ||
ಶಂಖಚಕ್ರಧರ ಪೀತಾಂಬರಧರ
ಭುವನಾಧಾರ ದಯಾಸಾಗರ
ವಿಶ್ವಂಭರಧರ ಶ್ರೀ ದಾಮೋದರ
ನವನೀರಜಧರ ನಿಗಮೋದ್ಧಾರ || ೩ ||
ಅಷ್ಟಸಿದ್ಧಿಪ್ರದನೆ ಅರವಿಂದಾಕ್ಷನೆ
ಅಖಿಲ ಧರಾಯನೆ ಅಭಯಂಕರನೆ
ನಿರ್ವಿಕಲ್ಪಾಯನೆ ನೀರಜಾಕ್ಷನೆ
ನಿರಾಕಾರನೆ ನಿರಂಜನನೆ || ೪ ||
ಅಚ್ಯುತ ಕೇಶವ ಮುರಹರ ಮಾಧವ
ದೇವಾದಿದೇವ ಶ್ರೀವಾಸುದೇವ
ಸರ್ವಶಾಸ್ತ್ರತತ್ಪರ ಪರಮಾರ್ಥಪ್ರದ
ವೇದಗಳ ವೇದ್ಯ ಮಹಾವಿಷ್ಣು ದೇವ || ೫ ||
ಹೇ ಗೋವಿಂದ ದೇವ ಮುಕುಂದ
ನಿನ್ನ ಧ್ಯಾನದಿಂದ ಪರಮಾನಂದ
ವೇದಾಂತಸಾರ ಪರಂಪರಾತ್ಪರ
ಕರುಣಾಸಾಗರ ಜಗದೋದ್ಧಾರ || ೬ ||
ತ್ರಿಲೋಕನಾಯಕ ಕ್ಲೇಶನಿವಾರಕ
ಪ್ರಧಾನಪುರುಷ ಪುಣ್ಯಪ್ರದಾಯಕ
ಧರ್ಮಪ್ರವರ್ತಕ ಶರಣರ ರಕ್ಷಕ
ಪಾಪವಿಮೋಚಕ ಮಂಗಳದಾಯಕ || ೭ ||
ಅನಂತರೂಪನೆ ಸರಸಿಜನಾಭನೆ
ಭವಭಯಹರಣನೆ ಸರ್ವಕಾಮಪ್ರದನೆ
ಮಹಾಪುರುಷನೇ ಮಹಾಶಕ್ತ್ಯಾಯನೆ
ಮಧುಸೂದನನೆ ಮುಕ್ತಿದಾಯಕನೆ || ೮ ||
ಶ್ರೀ ದೇವೀ ಮಹಾತ್ಮೆ
15 Songs