ಗುರು ಅಷ್ಟಕ
ರಾಗ : ಮೋಹನ
ತಾಳ : ಆದಿತಾಳ (ಖಂಡ ಗತಿ)
ಸುಂದರ ಶರೀರ ಮನದಿಚ್ಛೆಯ ಪತ್ನಿ
ಕೀರ್ತಿಗೌರವ ಸಂಪತ್ತು ಇದ್ದರೂ
ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು
ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೧ ||
ಪತ್ನಿ ಪುತ್ರ ಪೌತ್ರರು ಬಂಧು ಬಳಗವಿರಲು
ಸುಖಸಂಸಾರಕೆ ಸಂಪತ್ತು ಗಳಿಸಿರಲು
ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು
ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೨ ||
ವೇದವೇದಾಂಗಗಳ ಕಂಠಸ್ಥ ಪಂಡಿತನು
ಗದ್ಯಪದ್ಯ ಕಾವ್ಯಗಳ ರಚನಾ ಸಮರ್ಥನು
ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು
ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೩ ||
ವಿದೇಶದಲಿ ಮಾನ್ಯನು ದೇಶದಲಿ ಧನ್ಯನು
ಸದಾಚಾರ ಪಾಲಿಸುವ ಶ್ರೇಷ್ಠ ಮನುಜನು
ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು
ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೪ ||
ಭೂಮಂಡಲರಾಜ ಮಹಾರಾಜರಿಂದ
ಪಾದ ಪೂಜಿಸಿಕೊಳುವ ಮೇರು ವ್ಯಕ್ತಿತ್ವದವನು
ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು
ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೫ ||
ಜಗತ್ತಿನೆಲ್ಲೆಡೆ ಕೀರ್ತಿ ದಾನಧರ್ಮದಿ ಗಳಿಸಿ
ಜಗತ್ತನ್ನೆ ಗೆದ್ದು ಪ್ರಭುತ್ವ ಪಡೆದವನು
ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು
ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೬ ||
ಪತ್ನಿಯಲಿ ಅನಾಸಕ್ತನು ಲೌಕಿಕ ಸುಖಮುಕ್ತನು
ಸಮಸ್ತ ಸಂಬಂಧವ ತೊರೆದುಕೊಂಡವನು
ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು
ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೭ ||
ಎಲ್ಲವನು ತೊರೆದು ಅರಣ್ಯವಾಸದಲ್ಲಿದ್ದು
ಅಮೂಲ್ಯ ಶರೀರದ ಅಭಿಮಾನ ಬಿಟ್ಟವನು
ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು
ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೮ ||
ಗುರ್ವಷ್ಟಕ ಪಠಿಸುವ ಮನುಜ ಪುಣ್ಯವಂತನು
ಮತಿಯು ಬ್ರಹ್ಮಚಾರಿಯು ರಾಜನು ಗೃಹಸ್ಥನು
ಸದಾ ಶ್ರದ್ಧೆ ಭಕ್ತಿಯಲಿ ಪಠಿಸುವ ಸಕಲರೂ
ಇಷ್ಟಾರ್ಥ ಪಡೆವರು ಮೋಕ್ಷ ಹೊಂದುವರು || ೯ ||
ಶ್ರೀ ದೇವೀ ಮಹಾತ್ಮೆ
15 Songs