ಸ್ಕಂದ ಸ್ತುತಿ
ರಾಗ : ಸುರುಟಿ
ತಾಳ : ಮಿಶ್ರಛಾಪು
ನಮೋ ಬ್ರಹ್ಮಣ್ಯ
ನಮೋ ನಮೋ ಸುಬ್ರಹ್ಮಣ್ಯ
ನಮೋ ಸುರಗಣ್ಯ
ನಮೋ ನಮೋ ಉರಗವರೇಣ್ಯ || ೧ ||
ನಮೋ ಶಿವ ಪಾರ್ವತಿ ಪುತ್ರ
ನಮೋ ನಮೋ ಮುಸಲ ಶಸ್ತ್ರ
ನಮೋ ಸ್ತುತಿ ಸಂಪ್ರೀತ
ನಮೋ ನಮೋ ಸರ್ವವಂದಿತ || ೨ ||
ನಮೋ ಜಗತ್ರಾಣ
ನಮೋ ನಮೋ ಸ್ವರ್ಣಭೂಷಣ
ನಮೋ ಸಕಲ ಸದ್ಗುಣ
ನಮೋ ನಮೋ ವಂಶೋದ್ಧರಣ || ೩ ||
ನಮೋ ಷಣ್ಮುಖನೇ
ನಮೋ ನಮೋ ಮಯೂರಾನನೆ
ನಮೋ ಶಕ್ತಿಶೂಲನೆ
ನಮೋ ನಮೋ ದೀಪ್ಯಮಾನನೆ || ೪ ||
ನಮೋ ಸುಕುಮಾರ
ನಮೋ ನಮೋ ರತ್ನಾಕರ
ನಮೋ ನಾಗೇಂದ್ರ
ನಮೋ ನಮೋ ಕೃಪೇಂದ್ರಾ || ೫ ||
ನಮೋ ಕ್ಷೀರಪ್ರಿಯ
ನಮೋ ನಮೋ ಗಾನಪ್ರಿಯ
ನಮೋ ಶುಭರಾಯ
ನಮೋ ನಮೋ ಅಮರಾಯ || ೬ ||
ನಮೋ ಫಣಿವರ್ಣ
ನಮೋ ನಮೋ ಮಣಿಭೂಷಣ
ನಮೋ ನಿಧಿ ರಕ್ಷಣ
ನಮೋ ನಮೋ ಭವ್ಯಗುಣ || ೭ ||
ನಮೋ ಮಹಿದೇವ
ನಮೋ ನಮೋ ಮಹಾಭಾವ
ನಮೋ ಭಕ್ತಪಾಲ
ನಮೋ ನಮೋ ದಯಶೀಲ || ೮ ||
ನಮೋ ದೋಷಹರ
ನಮೋ ನಮೋ ರೋಗಹರ
ನಮೋ ಕೃಪಾಕರ
ನಮೋ ನಮೋ ರಕ್ಷಕರ || ೯ ||
ನಮೋ ಜಯ ಕೀರ್ತಿ
ನಮೋ ನಮೋ ಬಾಲಮೂರ್ತಿ
ನಮೋ ಜ್ಞಾನಶಕ್ತಿ
ನಮೋ ನಮೋ ಮುಕ್ತಿಧಾತ್ರಿ || ೧೦ ||
ನಮೋ ಅವ್ಯಾಜ
ನಮೋ ನಮೋ ರವಿತೇಜ
ನಮೋ ಸಂಭೋಜ
ನಮೋ ನಮೋ ಸಂಪೂಜ್ಯ || ೧೧ ||
ಶ್ರೀ ದೇವೀ ಮಹಾತ್ಮೆ
15 Songs