ಗುರು ಸ್ತುತಿ

ರಾಗ : ಮಧ್ಯಮಾವತಿ
ತಾಳ : ಏಕ

ಗುರುವಿನ ಚರಣ ಮಾಡುವ ಸ್ಮರಣ
ಅಪಾರ ಮಹಿಮ ಗುರುಕರುಣ
ಓಂ ಗುರುವೇ ಶ್ರೀ ಗುರುವೇ
ಕ್ಷಣ ಕ್ಷಣ ನೆನೆಯುವೆ ಸದ್ಗುರುವೇ || ೧ ||

ಬ್ರಹ್ಮ ವಿಷ್ಣು ಮಹೇಶ್ವರ
ತ್ರಿಮೂರ್ತಿರೂಪ ಗುರೂವರ
ತ್ರಿಗುಣಾತೀತ ತಪೋವರ

ಲೋಕೋದ್ಧಾರಕ ದಯಾಸಾಗರ || ೨ ||
ಆಶ್ರಿತ ಪಾಲನೆ ದಿವ್ಯ ಸ್ವರೂಪ
ಪರಮ ಪವಿತ್ರನೆ ಹರಿಹರರೂಪ
ವೇದಾಂತಸಾರನೆ ಜ್ಞಾನಪ್ರದೀಪ
ನಿತ್ಯ ನಿರಂತರ ಗುರೂಕೃಪ || ೩ ||

ಅದ್ಭುತ ಚರಿತನೆ ಸದ್ಗುರುನಾಥ
ಶಿವಗುರುನಾಥನೆ ವಿಶ್ವವಿಧಾತ
ಸುಜ್ಞಾನ ಭರಿತನೆ ಜಗದ್ವಿಖ್ಯಾತ
ಭಗವತ್ಪಾದಾ ಶಂಕರ ಚರಿತ || ೪ ||

ಸಚ್ಚಿದಾನಂದನೆ ಸದಾನಂದ
ಆತ್ಮಾನಂದನೆ ಶಿವಾನಂದ
ಜ್ಞಾನಾನಂದನೆ ಬ್ರಹ್ಮಾನಂದ
ಗುರುವಿನ ಸ್ಮರಣೆ ಪರಮಾನಂದ || ೫ ||

ಧರ್ಮೋದ್ಧಾರಕ ಧರ್ಮ ಬೋಧಕ
ಜ್ಞಾನ ಪ್ರಕಾಶಕ ಸಿದ್ಧಿದಾಯಕ
ತಾಮಸಹಾರಕ ಕ್ಲೇಶನಿವಾರಕ
ಸೌಖ್ಯಪ್ರದಾಯಕ ಸಂರಕ್ಷಕ || ೬ ||

ಋಷಿಕುಲತಿಲಕ ಆದಿನಾಥ
ನಿತ್ಯ ಪ್ರಶಾಂತ ದೀನನಾಥ
ಚಿನ್ಮಯ ರೂಪ ಮಮ ಗುರುನಾಥ
ನಿರ್ಮಲ ಹೃದಯ ಗುರುದತ್ತ || ೭ ||

ಕಾಷಾಯ ವಸ್ತ್ರಧಾರಿ ಗುರು
ಕೊರಳೊಳು ರುದ್ರಾಕ್ಷಿ ಧರಿಸಿಹರು
ದಂಡಕಮಂಡಲ ಹಿಡಿದಿಹರು
ಭಕ್ತರಿಗನುಗ್ರಹ ನೀಡುವರು || ೮ ||

ಪರಬ್ರಹ್ಮ ಗುರು ಚಿದಾಕಾರ ಗುರು
ಪರಮಹಂಸಗುರು ಪರಾತ್ಪರಾಗುರು
ಪರಿಪೂರ್ಣ ಸಾಧಕ ಶ್ರೀಧರ ಸದ್ಗುರು
ಪರಿವ್ರಾಜಕಾಚಾರ್ಯ ಭಗವಾನ್ ಗುರು || ೯ ||

ಸತ್ಯಧರ್ಮ ಶಾಂತಿಯುತ
ಭಾವಾತೀತ ಭಾಗ್ಯವಿಧಾತ
ಭಕ್ತವತ್ಸಲ ತ್ರಿಲೋಕನಾಥ
ಸಕಲ ಜೀವಕೆ ಮುಕ್ತಿಯದಾತ || ೧೦ ||