ಗೋವಿಂದ ಸ್ತುತಿ
ಬಂದ ಬಂದ ಗೋವಿಂದ
ಗೋಕುಲದಿಂದ ಯಶೋದನಂದನ ಕಂದ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧ ||
ಕಮಲನಯನ ಸುಂದರವದನ
ಯದುಕುಲ ನಂದನ ಮದನ ಮೋಹನ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೨ ||
ಪೂತನಿ ನಾಶಕ ಪೃಥಿವೀನಾಥ
ಶ್ರೀಹರಿ ವಿಠಲ ಜಯ ಹರಿ ವಿಠಲ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೩ ||
ಹಾಲುಮೊಸರುಗಳ ಪ್ರಿಯನು ಕೃಷ್ಣ
ಬೆಣ್ಣೆಯ ಮೆಲ್ಲುವ ಮುದ್ದುಕೃಷ್ಣ
ಕೊಳಲನ್ನೂದುವ ಚಂದಮುಕುಂದ
ಬಂದ ಗೋವಿಂದ || ೪ ||
ಕಾಳಿಂಗ ಮರ್ಧನ ಜಯ ಜನಾರ್ದನ
ಕೃಷ್ಣನ ನಾಮ ಪರಮ ಪಾವನ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೫ ||
ಗೋಕುಲ ಬಾಲ ಮುರಲೀಲೋಲ
ಗೋಪಿ ಗೋಪಾಲ ರಾಸವಿಲೋಲ
ಕೊಳಲನ್ನೂದುವ ಚಂದಮುಕುಂದ
ಬಂದ ಗೋವಿಂದ || ೬ ||
ಶ್ಯಾಮಸುಂದರ ನವನೀರಜಧರ
ಗೋವರ್ಧನ ಗಿರಿಧರ ಜಗದೋದ್ಧಾರ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೭ ||
ರಾಧಾಮನೋಹರ ಮುರಲೀಧರ
ಯಮುನವಿಹಾರ ವೃಂದಾವನ ಸಂಚಾರ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೮ ||
ಮೃದು ಮಧುರಾನನ ಮಧುಸೂದನ
ತ್ರಿಭುವನ ಪಾಲನ ನಿರತ ನಿರಂಜನ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೯ ||
ಆಪದ್ಭಾಂಧವ ಮುರಹರ ಮಾಧವ
ಅಚ್ಯುತ ಕೇಶವ ವಾಸುದೇವ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೦ ||
ಭಕ್ತಪಾಲ ಅಕ್ರೂರವರದ
ಸುದಾಮಸಖಾಯ ಅನಂತಾಯ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೧ ||
ಬಂದ ಮುಕುಂದ ಕಂಸನಕೊಂದ
ದೇವಕಿ ಕಂದ ವಸುದೇವ ನಂದ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೨ ||
ಶಂಖಚಕ್ರಧರ ವರಕುಂಡಲಧರ
ನಿರ್ವಿಕಾರ ನಿಗಮೋದ್ಧಾರ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೩ ||
ಅಖಿಲಾಧಾರ ಪೀತಾಂಬರಧರ
ಅಭಯವರ ಕರುಣಾಸಾಗರ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೪ ||
ಆಗಮಸಾರ ಯೋಗ ವಿಚಾರ
ಭೋಗ ಶರೀರ ಭುವನಾಧಾರ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೫ ||
ಪುಂಡರಿಕಾಕ್ಷ ಪುಣ್ಯಚರಿತ
ಪುರಾಣಪುರುಷ ಪುಣ್ಯಶ್ಲೋಕ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೬ ||
ಕದನಕಠೋರ ಕಲುಷವಿದೂರ
ಮದನ ಮನೋಹರ ಮದಸಂಹಾರ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೭ ||
ಅನಂತರೂಪ ಅನಂತನಾಮ
ಆದಿಮೂಲ ವೇಣುಗೋಪಾಲ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೮ ||
ಭಗವದ್ಗೀತಾ ಗೀತೋಪದೇಶ
ಧರ್ಮಪರೇಶ ಜ್ಞಾನಕೃಪೇಶ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೧೯ ||
ಕೃಷ್ಣಮುರಾರಿ ಭವಭಯಹಾರಿ
ಹೃದಯವಿಹಾರಿ ದಯಾಮಯ ಶ್ರೀಹರಿ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೨೦ ||
ಪುಷ್ಕರಾಕ್ಷ ವೃಷಭಾಕ್ಷ
ಪುರಂದರಾಯ ಪಾವನಾಯ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೨೧ ||
ಸಹಸ್ರಾಕ್ಷ ಅರವಿಂದಾಕ್ಷ
ವಿಶ್ವರೂಪದರ್ಶಕ ತ್ರೈಲೋಕ್ಯ ರಕ್ಷಕ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೨೨ ||
ಉಡುಪಿಯ ವಾಸ ಶ್ರೀವತ್ಸ
ಸರ್ವರರಕ್ಷ ಸರ್ವರಮೋಕ್ಷ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೨೩ ||
ಮುರಲೀ ಕೃಷ್ಣ ಜಯ ಹರಿ ಕೃಷ್ಣ
ಸರ್ವವ್ಯಾಪಿ ಕೃಷ್ಣ ಜಯ ಜಯ ಕೃಷ್ಣ
ಕೊಳಲನ್ನೂದುವ ಚಂದ ಮುಕುಂದ
ಬಂದ ಗೋವಿಂದ || ೨೪ ||
ಶ್ರೀ ದೇವೀ ಮಹಾತ್ಮೆ
15 Songs