ಆಂಜನೇಯ ಸ್ತುತಿ
ಹೇ ಹನುಮ ಹೇ ಹನುಮ ಪವನ ನಂದನಅಂಜನಾಕುವರ ಆಂಜನೇಯ ನಮನ || ಪ || ಅನುದಿನ ನಿನ್ನನು ಭಜಿಸುವ ಮನವನುದಯದಿಂದೆನಗೆ ಪಾಲಿಸು ದೇವ || ಅ.ಪ || ಶ್ರೀ ಸದ್ಗುರುಗಳ ದಿವ್ಯ ಚರಣಕಮಲಗಳ ಧೂಳಿನಿಂದಲೆ ಎನ್ನ ಮನೋರೂಪಿ ಕನ್ನಡಿಯ ಶ್ರದ್ಧೆಯಿಂದಲಿ ನಿರ್ಮಲಗೊಳಿಸಿ ನಾ ಧರ್ಮ ಅರ್ಥ ಕಾಮ ಮೋಕ್ಷವು ಎಂಬ ಚತುರ್ವಿಧ ಪುರುಷಾರ್ಥರೂಪಿ ಫಲಗಳ ದಯಪಾಲಿಸುವಂತಹ ರಘುವರನ ಮಹಿಮೆಯ ವರ್ಣಿಸಿ ಹಾಡುವೆನು|| ೧ || ಪರಶಿವನೆ ಅವತರಿಸಿದ ವಾಯುಸುತನಾಗಿ ರಾಮಚಂದ್ರನಿಗಾಗಿ ಶಿವನವತಾರಿ ತೇಜಸ್ಸಿಗೆ ಪ್ರತಾಪಕೆ ಜಗತ್ತೆ ನಮಿಸುವುದು
ಗುರು ಸ್ತುತಿ
ರಾಗ : ಮಧ್ಯಮಾವತಿ ತಾಳ : ಏಕ ಗುರುವಿನ ಚರಣ ಮಾಡುವ ಸ್ಮರಣ ಅಪಾರ ಮಹಿಮ ಗುರುಕರುಣ ಓಂ ಗುರುವೇ ಶ್ರೀ ಗುರುವೇ ಕ್ಷಣ ಕ್ಷಣ ನೆನೆಯುವೆ ಸದ್ಗುರುವೇ || ೧ || ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿರೂಪ ಗುರೂವರ ತ್ರಿಗುಣಾತೀತ ತಪೋವರ ಲೋಕೋದ್ಧಾರಕ ದಯಾಸಾಗರ || ೨ || ಆಶ್ರಿತ ಪಾಲನೆ ದಿವ್ಯ ಸ್ವರೂಪ ಪರಮ ಪವಿತ್ರನೆ ಹರಿಹರರೂಪ ವೇದಾಂತಸಾರನೆ ಜ್ಞಾನಪ್ರದೀಪ ನಿತ್ಯ ನಿರಂತರ ಗುರೂಕೃಪ || ೩ || ಅದ್ಭುತ ಚರಿತನೆ ಸದ್ಗುರುನಾಥ ಶಿವಗುರುನಾಥನೆ
ಸುಬ್ರಹ್ಮಣ್ಯ ಸ್ತುತಿ
ಸದಾ ಬಾಲಕನಂತೆ ತೋರುವ ವಿಘ್ನವಿನಾಶಕನೆ ಗಜಮುಖ ಗಣಪನೆ ಶಿವನಿಂದ ಮಾನ್ಯನೆ ಬ್ರಹ್ಮಾದಿ ವಂದಿತನೆ ಗಣೇಶನೆ ದಿವ್ಯ ಸುಂದರ ಮೂರ್ತಿಯೇ ನಮಗೆಲ್ಲ ಸಂಪತ್ಪ್ರದವಾಗಲಿ || ೧ || ಗದ್ಯಪದ್ಯ ರಚನೆಯ ಶೈಲಿಯು ನನಗೇನೂ ತಿಳಿಯದು ವ್ಯಾಕರಣ ಪಾಂಡಿತ್ಯ ನನಗಿಲ್ಲವಾದರೂ ಎನ್ನಯ ಹೃದಯದಲಿ ಷಣ್ಮುಖನು ಚಿನ್ಮಯ ಶಕ್ತಿ ತುಂಬಿ ನನ್ನ ಮುಖದಿ ಮಾತನ್ನಾಡಿಸುವುದಚ್ಚರಿಯು || ೨ || ಮಯೂರ ವಾಹನನೆ ಸುಂದರನೆ ವೇದವೇದ್ಯನೆ ಸಜ್ಜನರಲ್ಲಿರುವ ಬ್ರಾಹ್ಮಣ ಪ್ರಿಯನೆ ಲೋಕದ ರಕ್ಷಕನೆ ಸದ್ಗುಣನೆ ವೇದರೂಪಿ ದೇವನೆ ಶಿವಪುತ್ರ ಸುಬ್ರಹ್ಮಣ್ಯನೆ ವಂದಿಸುವೆ ||
ಲಕ್ಷ್ಮೀನಾರಾಯಣ ಸ್ತುತಿ
ರಾಗ : ಯಮನ್ ಕಲ್ಯಾಣಿ ತಾಳ : ಆದಿ ಲಕ್ಷ್ಮೀರಮಣ ಪಾಹಿಮಾಂ ಲಕ್ಷ್ಮಿನಾರಾಯಣ ರಕ್ಷಮಾಂ || ಪ || ಶ್ರೀಲಕ್ಷ್ಮಿರಮಣ ಪೂಜಿಪೆ ಚರಣ ಮಾಡುವೆ ಸ್ಮರಣ ಬೇಡುವೆ ಕರುಣ || ಅ.ಪ. || ಪುರಾಣ ಪುರುಷ ಪುಣ್ಯ ಶ್ಲೋಕ ವಾಸುಕಿ ಶಯನ ವೈಕುಂಠ ವಾಸ ಶಂಖಚಕ್ರಧರ ಪೀತಾಂಬರಧರ ಶ್ರೀಕರ ಶುಭಕರ ಕೃಪಾಕರ || ೧ || ಚತುರ್ಬಾಹುವೆ ಚತುರ್ವ್ಯೂಹನೆ ಚತುರ್ವೇದನೆ ಚತುರಾತ್ಮನೆ ಕಮಲ ನಯನ ಸುಂದರ ವದನ ಅಗಣಿತ ಗುಣಗಣ ಜನಾರ್ದನ || ೨ || ಕಸ್ತೂರಿ
ನವಗ್ರಹ ಸ್ತುತಿ
ಸೂರ್ಯ ಗ್ರಹಣಾಮಾದಿರಾದಿತ್ಯ ಅರುಣನ ಸಾರಥ್ಯ ರಥದಲ್ಲಿ ಕಟ್ಟಿರುವೆ ಸಪ್ತ ಅಶ್ವಗಳ ಜ್ಞಾನವನು ಸೌಖ್ಯವನು ಪಾಲಿಸುವ ದೇವನೆ ಅದಿತಿಸುತ ಸೂರ್ಯನೆ ನೀ ಕೃಪೆಯ ತೋರೋ || ೧ || ಗುಂಗುರು ಕೇಶದ ಆಕರ್ಷಕ ರೂಪನೆ ಗಂಭೀರ ನಿಲುವಿನ ಬುದ್ಧಿಚಾತುರ್ಯನೆ ಚೆಲುವಿನ ಕಣ್ಣುಗಳ ಕೆಂಪುಡುಗೆ ಸುಂದರನೆ ಆದ್ಯಗ್ರಹ ಕಿರಣನೆ ನೀ ಕೃಪೆಯ ತೋರೋ || ೨ || ಅತ್ಯಂತ ತೇಜಸ್ವಿ ದಿವಾಕರನೆ ನಿನ್ನ ಭಕ್ತಿಯಲಿ ಸ್ಮರಿಸಿದರೆ ಕ್ಲೇಶ ನಿವಾರಿಸುವೆ ಜಗಕೆಲ್ಲ ನೀನೇ ಬೆಳಕನ್ನು ನೀಡುವೆ ಹೇ ಸೂರ್ಯನಾರಾಯಣನೆ ನೀ ಕೃಪೆಯ
ನದಿ ದೇವಿಯರ ಸ್ತುತಿ
ರಾಗ : ಯಮನ್ ಕಲ್ಯಾಣಿ ತಾಳ : ಆದಿ ಗಂಗಾ ಯಮುನೇ ಜನ್ಮಪಾವನೆ ನರ್ಮದೆ ಸಿಂಧು ನದಿಕಾಳಿಂದಿ ತುಂಗಾಭದ್ರೆಯೆ ಪೂರ್ಣಾನದಿಯೆ ನದಿದೇವಿಯರೆ ಸ್ತುತಿಸುವೆವು || ೧ || ನದಿನಂದಿನಿಯೆ ಸೀತಾನದಿಯೆ ಕೋಸಿಕಾವೇರಿ ಮಲಹಾಪಾರಿ ಮಾನಸ ನದಿಯೇ ಕೃಷ್ಣಾ ನದಿಯೆ ನದಿದೇವಿಯರೆ ಸ್ತುತಿಸುವೆವು || ೨ || ಘಟಪ್ರಭಾ ನದಿ ಕಪಿಲಾ ನದಿಯೆ ತಾಮ್ರಪರ್ಣೀ ಅಘನಾಶಿನಿ ಮೇಘನ ನದಿಯೆ ನದಿ ಸರಸ್ವತಿಯೆ ನದಿದೇವಿಯರೆ ಸ್ತುತಿಸುವೆವು || ೩ || ಗೋದಾವರಿಯೆ ಭಾಗಮತಿಯೆ ಗಂಡಕಿ ತಪತಿ ನದಿ ನೇತ್ರಾವತಿ ಶೋಣಾ
ಶಿವ ಸ್ತುತಿ
ರಾಗ : ರೇವತಿ ತಾಳ : ಏಕ ಓಂ ಜಗದೀಶ ಹರೇ ಶಿವಶಿವ ಓಂ ಮಹೇಶ ಹರೇ || ಪ || ಭಕ್ತರ ಸಂಕಟ ಕ್ಷಣದಲಿ ನೀಗುವ ಜೈ ಜಗದೀಶ ಹರೇ || ಅ.ಪ. || ಕೈಲಾಸವಾಸ ಉಮಾ ಮಹೇಶ ಭವ ಭಯ ನಾಶ ಜಗದೀಶ ಭವ ಭಯ ನಾಶ ಜಗದೀಶ ಸಕಲವ ನೀಡುವ ಗಿರಿಜೇಶ || ೧ || ಓಂಕಾರೇಶ್ವರ ವಿಶ್ವೇಶ್ವರ ನಟನ ಮನೋಹರ ಗೌರೀವರ ನಟನ ಮನೋಹರ ಗೌರೀವರ ಮೃತ್ಯುಂಜಯಾ ಪರಮೇಶ್ವರ || ೨
ಶ್ರೀದೇವಿ ಸ್ತುತಿ
ರಾಗ : ಷಣ್ಮುಖಪ್ರಿಯ ತಾಳ : ಏಕ ಶ್ರೀದೇವಿ ಹೇ ದೇವಿ ಜಯದೇವಿ ಮಾತೆ ಶ್ರೀ ಲಲಿತೆ ಜಗನ್ಮಾತೆ || ಪ || ಶಿವೆಯೇ ಉಮೆಯೇ ಪರಮೇಶ್ವರಿಯೆ ತಾಯೇ ನಿನ್ನ ಪ್ರಾರ್ಥಿಸುವೆ || ಅ.ಪ. || ರಜತಾದ್ರಿಯ ಶೃಂಗಗಿರಿ ನಂದಿಯ ಸಹಿತ ಶಂಕರಗೌರಿ ಅವ್ಯಾಜಕರುಣಾ ಪೂರಾವಾರಿ ತಾಯೇ ನಿನ್ನ ಪ್ರಾರ್ಥಿಸುವೆ || ೧ || ಹೇ ಪೃಥ್ವಿಯೇ ಮೂಲ ಪ್ರಕೃತಿಯೆ ಜೀವಸಂಕುಲೆ ಭೂಮಿದೇವಿಯೆ ಪ್ರಣತಾರ್ಥಿಯೇ ಪಾರಮಾರ್ಥೆಯೆ ತಾಯೇ ನಿನ್ನ ಪ್ರಾರ್ಥಿಸುವೆ || ೨ || ಆದ್ಯಪೂಜಿನಿ ಮಂತ್ರಸ್ವರೂಪಿಣಿ
ಸಿಗಂದೂರಾಂಬೆ ಸ್ತುತಿ
ರಾಗ : ಬೆಹಾಗ್ ತಾಳ : ಆದಿ ದೇವೀ ನೀ ಪಾಲಿಸಮ್ಮಾ ಪ್ರಸಾದವ ದೇವೀ ನೀ ಪಾಲಿಸಮ್ಮಾ… || ಪ || ದೇವೀ ನೀ ಪಾಲಿಸು ಪರಮ ಪ್ರಸಾದವ ದೇವೀ ನೀ ಪಾಲಿಸಮ್ಮಾ… || ಅ.ಪ || ಶ್ರೀಕ್ಷೇತ್ರ ಸಿಗಂದೂರಲಿ ನೆಲೆಸಿರುವೆ ನಿನ್ನ ಭಕ್ತರ ಪೊರೆಯುತಲಿ ದೃಢಭಕ್ತಿಯಲಿ ಬೇಡುವೆ ನಿನ್ನಾ ಪರಮಪ್ರಸಾದವ ನೀ ನೀಡಮ್ಮಾ || ೧ || ಎನ್ನ ಪ್ರಾರ್ಥನೆಯಾ ಆಲಿಸಿ ಕರುಣಿಸಮ್ಮಾ ಕಾಮನೆಯ ನಂಬಿದೆ ನಿನ್ನಾ ಕಾಪಾಡಮ್ಮಾ ಪರಮಪ್ರಸಾದವ ನೀ ನೀಡಮ್ಮಾ || ೨
ಶಾರದಾ ಸ್ತುತಿ
ರಾಗ : ಶುದ್ಧಸಾವೇರಿ ತಾಳ : ಆದಿ ಜಯದೇವಿ ಶಾರದೆ ವಿದ್ಯಾವಿಶಾರದೆ ಸರ್ವವಿದ್ಯಾ ಬುದ್ಧಿಪ್ರದೆ ಹೇ ಶುಭದೇ.. ಹೇ ವರದೇ.. || ಪ || ತುಂಗಾತೀರದ ಕ್ಷೇತ್ರದಲಿ ವಾಸವಾಗಿರುವೆ ಶೃಂಗೇರಿಯಲಿ ಬ್ರಹ್ಮಹೃದಯೇಶ್ವರಿ ದೇವಿವಾಗೀಶ್ವರಿ ವಿದ್ಯಾವಾರಿಧಿ ಶ್ರೀಚಕ್ರಾಧೀಶ್ವರಿ || ೧ || ವೇದಸ್ವರೂಪಿಣಿ ಪುಸ್ತಕಧಾರಿಣಿ ಪ್ರಶಾಂತರೂಪಿಣಿ ಅಖಿಲಗುಣಮಣಿ ಮಂತ್ರಸ್ವರೂಪಿಣಿ ಜ್ಞಾನಪ್ರದಾಯಿನಿ ತ್ರಿಭುವನ ಪೋಷಿಣಿ ಶ್ರೀಕಲ್ಯಾಣಿ || ೨ || ಹಂಸವಾಹಿನಿ ವೀಣಾವಿನೋದಿನಿ ಭಾವ ರಾಗ ಲಯ ತಾಳ ಸುಬೋಧಿನಿ ಮಂದಹಾಸಿನಿ ಮೋಹವಿನಾಶಿನಿ ಸುಶೋಭಿನೀ ಸುರವರದಾಯಿನಿ || ೩ ||