ಹದಿಮೂರನೆಯ ಅಧ್ಯಾಯ
ಸುಮೇಧನೆಂದ ಎಲೈ ರಾಜನೇ ಉತ್ತಮವಾದ ದೇವೀ ಮಹಾತ್ಮೆಯು ನನ್ನಿಂದ ನಿನಗೆ ಹೇಳಲ್ಪಟ್ಟಿದೆ ಈ ಜಗತ್ತನ್ನು ಧರಿಸಲ್ಪಟ್ಟಿರುವ ದೇವಿಯು ಇಂಥ ಮಹಿಮೆಯುಳ್ಳವಳು || ೧ || ಭಗವಂತನಾದ ವಿಷ್ಣುವಿನ ಮಾಯೆಯಿಂದ ವರ್ಣಿಸಲ್ಪಡುವ ಮಹಾದೇವಿಯು ಉಪನಿಷತ್ತಿನ ರೂಪದಿಂದ ತತ್ತ್ವ ವಿವೇಕದ ಜ್ಞಾನವನ್ನು ಅನುಗ್ರಹಿಸುವಳು || ೨ || ರಾಜನೇ ನೀನು ಮತ್ತು ವೈಶ್ಯನು ಮಾಯೆಯ ಮೋಹದಲ್ಲಿರುವಿರಿ ವಿವೇಕಿ ಜನರೂ ಮಾಯೆಯಿಂದ ಮೋಹಪಟ್ಟರು ಪಡುತಲಿರುವರು ಇನ್ನು ಮುಂದೆಯೂ ಮೋಹ ಪಡುವರು || ೩ || ಸುರಥ ಮಹಾರಾಜನೇ ನೀನು ಪರಮೇಶ್ವರಿಯ ಶರಣು
ಹನ್ನೆರಡನೆ ಅಧ್ಯಾಯ
ಮಹಾದೇವಿಯು ಹೇಳಿದಳು ಯಾವನು ಭಕ್ತಿ ಶ್ರದ್ಧೆಗಳಿಂದ ಈ ಸ್ತೋತ್ರಗಳಿಂದ ನಿತ್ಯ ನನ್ನನ್ನು ಸ್ತುತಿಸಿದರೆ ಅವನ ಪೀಡೆಗಳನ್ನು ನಿಸ್ಸಂಶಯದಿ ನಾಶ ಮಾಡುವೆನು || ೧ || ಹಾಗೆಯೇ ಮಧು ಕೈಟಭರನ್ನು ನಾಶ ಮಾಡಿರುವ ವಿಷಯವನ್ನು ಮಹಿಷಾಸುರನ ಸಂಹಾರವನ್ನು ಶುಂಭ ನಿಶುಂಭರ ವಧೆಯು ಸೇರಿ ಮೂರು ಚರಿತ್ರೆ ಹೇಳಿ ಸ್ತುತಿಸಲಿ || ೨ || ಮಾನವರು ಭಕ್ತಿ ಶ್ರದ್ಧೆಯಿಂದ ಹಾಗೂ ಏಕಾಗ್ರತೆಯಿಂದ ಅಷ್ಟಮಿ ನವಮಿ ಚತುರ್ದಶಿಗಳಲ್ಲಿ ಸರ್ವೋತ್ತಮವಾಗಿರುವಂತಹ ನನ್ನ ಮಹಾತ್ಮೆಯ ಸ್ತುತಿಸಬೇಕು || ೩ || ಹಾಗೆ ಸ್ತುತಿಸಿದ ಮಾನವರಿಗೆ
ಹನ್ನೊಂದನೆಯ ಅಧ್ಯಾಯ
ಹೇಳಿದನು ಸುಮೇಧ ಋಷಿಯು ಮಹಾ ಅಸುರರ ರಾಜನಾದ ಶುಂಭಾಸುರನು ಆ ಯುದ್ಧದಲ್ಲಿ ದೇವಿಯಿಂದ ಹತನಾದಾಗ ಇಂದ್ರಾದಿ ದೇವತೆಗಳೆಲ್ಲರೂ || ೧ || ತಮ್ಮಿಷ್ಟಾರ್ಥ ನೆರವೇರಿತೆಂದು ಅರಳಿದ ಮುಖ ಕಮಲಗಳಿಂದ ಸಮಸ್ತ ದಿಕ್ಕುಗಳನ್ನು ಬೆಳಗುತ್ತ ಅಗ್ನಿಯನ್ನು ಮುಂದು ಮಾಡಿಕೊಂಡು ಬಂದು ಕಾತ್ಯಾಯನಿಯ ಸ್ತುತಿಸಿದರು ಹೇ ದೇವೀ ಶರಣಾಗತರ ಪೀಡೆಯ ಪರಿಹರಿಸುವವಳೇ ದೇವೀ ನಮಗೆ ಪ್ರಸನ್ನಳಾಗು ಚರಾಚರ ಸಹಿತವಾಗಿರುವ ಈ ಪ್ರಪಂಚಕ್ಕೆ ನೀನೇ ಜನನಿ || ೨ || ಹೇ ದೇವೀ ಪ್ರಸನ್ನಳಾಗು ಚರಾಚರ ಜಗತ್ತಿಗೆ ಈಶ್ವರಿ ದೇವೀ ವಿಶ್ವದ
ಹತ್ತನೆಯ ಅಧ್ಯಾಯ
ಹೇಳಿದನು ಸುಮೇಧ ಋಷಿಯು ತನ್ನ ಪ್ರಾಣಕ್ಕೆ ಸಮನಾಗಿರುವ ತಮ್ಮ ನಿಶುಂಭನು ಸತ್ತಿದ್ದು ನೋಡಿ ಸೈನ್ಯದ ವಧೆಯನ್ನೂ ಕಂಡ ಶುಂಭನು ಕೋಪಗೊಂಡು ಹೀಗೆ ಹೇಳಿದನು || ೧ || ಬಲದಿ ಮದಿಸಿದ ದುಷ್ಟ ದುರ್ಗೆಯೇ ಈಗ ಗರ್ವವ ಹೊಂದಬೇಡ ಅತ್ಯಂತ ಅಹಂಕಾರಿಯು ನೀನು ಬ್ರಹ್ಮಾಣಿ ಮತ್ತು ಇತರರ ಬಲವನ್ನು ಆಶ್ರಯಿಸಿ ಯುದ್ಧವನ್ನು ಮಾಡುತ್ತಿರುವೆ || ೨ || ದೇವಿಯೆಂದಳು ದುಷ್ಟ ರಕ್ಕಸನೇ ಜಗತ್ತಲ್ಲಿರುವುದು ನಾನೊಬ್ಬಳೇ ದ್ವಿತೀಯಳಾಗಿ ಯಾರಿರುವಳು ನನ್ನ ಈ ಮಹಿಮಾ ಶಕ್ತಿಗಳೆಲ್ಲವೂ ನನ್ನಲ್ಲಿಯೇ ಪ್ರವೇಶಿಸುವುದು ನೋಡು ||
ಒಂಭತ್ತನೇ ಅಧ್ಯಾಯ
ರಾಜನೆಂದ ಭಗವಂತನೇ ವಿಚಿತ್ರವಾದ ರಕ್ತಬೀಜನ ಸಂಹಾರವನ್ನು ಅವಲಂಬಿಸಿದ ಆ ದೇವಿಯ ಚರಿತ್ರೆಯ ಮಹಿಮೆಯು ನಿಮ್ಮಿಂದ ನನಗೆ ವರ್ಣಿಸಲ್ಪಟ್ಟಿದೆ || ೧ || ರಕ್ತ ಬೀಜನ ವಧೆಯ ನಂತರ ಅತ್ಯಂತ ಕೋಪ ಸ್ವಭಾವದ ಶುಂಭ-ನಿಶುಂಭರ ಸಾಹಸವೇನು ಕೇಳಲು ಇಚ್ಛಿಸಿರುವೆ ಎಂದನು ಸುರಥರಾಜನು ಸುಮೇಧ ಮುನಿಗೆ || ೨ || ಹೇಳಿದನು ಸುಮೇಧ ಋಷಿಯು ರಕ್ತಬೀಜನು ಸತ್ತ ಹಾಗೆಯೆ ಯುದ್ಧದಲ್ಲಿ ಅನೇಕ ರಾಕ್ಷಸರು ಸತ್ತ ನಂತರ ಶುಂಭ ನಿಶುಂಭರು ಅತ್ಯಂತ ಕೋಪವನ್ನು ತಾಳಿದರು || ೩ || ಪ್ರತಿಕ್ಷಣವೂ ತನ್ನ
ಎಂಟನೆಯ ಅಧ್ಯಾಯ
ಹೇಳಿದನು ಸುಮೇಧ ಋಷಿಯು ದೇವಿಯೊಡನೆ ಯುದ್ಧ ಮಾಡಿದ ಚಂಡಾಸುರನು ಮುಂಡಾಸುರನು ಅವರಿಬ್ಬರೂ ಮರಣ ಹೊಂದಿದರು ಬಹು ಭಾಗ ಸೈನ್ಯ ಕ್ಷಯಿಸಿ ಹೋಯಿತು || ೧ || ಪರಾಕ್ರಮಿ ಶುಂಭಾಸುರನು ಕೋಪಾಧೀನ ಮನಸ್ಸಿನಿಂದ ದೇವಿಯ ಎದುರು ಯುದ್ಧ ಮಾಡಲು ಸಮಸ್ತ ಸೈನ್ಯವು ಸಿದ್ಧವಾಗುವಂತೆ ಆಜ್ಞೆಯನ್ನು ಮಾಡಿದ ದೈತ್ಯರಿಗೆ || ೨ || ಈಗಲೆ ಸರ್ವ ಸೈನ್ಯ ಬಲಸಹಿತ ಎಂಬತ್ತಾರು ದೈತ್ಯ ಪ್ರಧಾನರು ಹಾಗೂ ಎಂಬತ್ನಾಲ್ಕು ಬಗೆಯ ಕಂಬು ಎಂಬ ರಾಕ್ಷಸರು ಸೇರಿ ಶಸ್ತ್ರವನ್ನು ಎತ್ತಿ ಸೈನ್ಯವು ಹೊರಡಲಿ ||
ಏಳನೆಯ ಅಧ್ಯಾಯ
ಋಷಿಯೆಂದ ಚಂಡ ಮುಂಡರು ದೈತ್ಯರೂ ಶುಂಭನಾಜ್ಞೆ ಪಡೆದು ಚತುರಂಗ ಬಲದ ಸೈನ್ಯದ ಸಹಿತ ತಮ್ಮ ಆಯುಧಗಳನ್ನು ಎತ್ತಿ ಹಿಡಿದು ಧಾವಿಸಿದರು ದೇವಿಯು ಇರುವಲ್ಲಿಗೆ || ೧ || ಸುವರ್ಣಮಯವಾಗಿರುವಂತ ಹಿಮಾಲಯ ಪರ್ವತ ಶಿಖರದಲ್ಲಿ ಸಿಂಹವಾಹನವನ್ನೇರಿ ಕುಳಿತ ಮಂದಹಾಸವನ್ನು ಬೀರುತ್ತಿರುವ ದೇವಿಯನ್ನು ಕಂಡರು ಅವರೆಲ್ಲರು || ೨ || ದೇವಿಯನ್ನೆತ್ತಿಕೊಂಡು ಹೋಗಲು ಚಂಡ ಮುಂಡರು ಮತ್ತು ಅಸುರರು ಹೆದೆಯೇರಿಸಿದ ಬಿಲ್ಲನ್ನು ಕತ್ತಿಯನ್ನು ಮತ್ತು ಮುಂತಾದ ಆಯುಧಗಳನ್ನು ಹಿಡಿದು ದೇವಿಯ ಬಳಿಗೆ ಹೋದರು || ೩ || ಅಸುರರು ಮುತ್ತಿಗೆ
ಆರನೆಯ ಅಧ್ಯಾಯ
ಋಷಿಯೆಂದ ದೂತ ಸುಗ್ರೀವನು ದೇವಿಯ ಮಾತುಗಳನ್ನು ಕೇಳಿ ಕುಪಿತನಾಗಿ ಆವೇಶದಿಂದ ಹೊರಟು ದೈತ್ಯರಾಜನ ಬಳಿ ಬಂದು ವಿಸ್ತಾರವಾಗಿ ನಿವೇದಿಸಿದನು || ೧ || ದೈತ್ಯರಾಜ ಶುಂಭಾಸುರನು ದೂತ ಹೇಳಿದ ಮಾತು ಕೇಳಿ ಕೋಪದಿಂದ ಆವೇಶಗೊಂಡು ದೈತ್ಯ ಗಣಗಳಿಗೆ ಪ್ರಭುವಾಗಿರುವ ಧೂಮ್ರಲೋಚನನಿಗೆ ಹೇಳಿದನು || ೨ || ಧೂಮ್ರಲೋಚನನೇ ನೀನು ನಿನ್ನ ಸೈನ್ಯದೊಡನೆ ಅಲ್ಲಿಗೆ ಹೋಗಿ ದುಷ್ಟಳಾದ ಅವಳನ್ನು ಮುಡಿ ಹಿಡಿದು ಎಳೆದುಕೊಂಡು ಅಳುವಂತೆ ಮಾಡಿ ಕರೆದುಕೊಂಡು ಬಾ ಇಲ್ಲಿಗೆ ಬೇಗ || ೩ || ಬಲವಂತದಿ ಆಕೆಯನ್ನೆಳೆದು
ಐದನೇ ಅಧ್ಯಾಯ
ಹೇಳಿದನು ಸುಮೇಧ ಋಷಿಯು ಹಿಂದೆ ಶುಂಭ-ನಿಶುಂಭರೆಂಬ ಅಸುರರು ಮದಬಲದಿಂದ ಇಂದ್ರನ ಯಜ್ಞ ಭಾಗವ ಮತ್ತು ಮೂರ್ಲೋಕಗಳ ಅಧಿಪತ್ಯವನ್ನು ಅಪಹರಿಸಿದರು || ೧ || ನಂತರ ಶುಂಭ-ನಿಶುಂಭರು ಸೂರ್ಯ ಇಂದ್ರ ಮತ್ತು ಕುಬೇರನ ಹಾಗೂ ಯಮ ವರುಣ ಎಂಬುವ ಲೋಕಪಾಲಕರ ಅಧಿಕಾರದ ಪದವಿಗಳನ್ನು ಆಕ್ರಮಿಸಿದರು || ೨ || ಶುಂಭ-ನಿಶುಂಭರು ವಾಯವಿನ ಅಧಿಕಾರ ಮತ್ತು ವೈಭವವನ್ನು ಮತ್ತು ಅಗ್ನಿದೇವನು ಪಡೆದಿರುವ ಅಧಿಕಾರ ಗೌರವಗಳನ್ನು ಕೂಡ ಬಲವಂತವಾಗಿ ಕಿತ್ತುಕೊಂಡರು || ೩ || ಶುಂಭ ನಿಶುಂಭ ಮಹಾಸುರರು ದೇವತೆಗಳ ಅಧಿಕಾರವನ್ನು