ಸೂರ್ಯ ಸ್ತುತಿ
ರಾಗ : ಸೌರಾಷ್ಟ್ರ ತಾಳ : ಏಕ ಹೇ ಸೂರ್ಯದೇವನೆ ಜೀವಸಂಕುಲನೆ ಬೆಳಕ ನೀಡುವವನೇ ನಿನಗೆ ವಂದನೆ ಉದಯದ ದರ್ಶನವು ಸದಾ ಸದ್ಭಾವನೆಯು ಸಂಧ್ಯಾದರ್ಶನವು ಮೈಮನವು ಪಾವನವು || ೧ || ಅದಿತಿಸುತನೆ ನಿನ್ನ ಕಣಕಣದಲಿರುವ ಸುವರ್ಣವರ್ಣ ಸಹಸ್ರಕಿರಣ ಹೇ ಪದ್ಮಪ್ರಭನೇ ಅಶ್ವವಾಹನನೆ ಬೀರುವೆ ಕ್ಷಣಕ್ಷಣ ದಿನವು ಹೊಂಗಿರಣ || ೨ || ಋತುಕರ್ತನೇ ನಿನ್ನ ದಿನದ ಆಗಮನವು ತ್ರಿಮೂರ್ತಿಗಳ ಆಜ್ಞೆಪಾಲನೆಯು ಉದಯನೇ ದೇವಾದಿ ದೇವತೆಗಳಿಗೆಲ್ಲ ಸುರಗಣರಿಗೆಲ್ಲಾ ನಿನ್ನಿಂದ ನೆಮ್ಮದಿಯು || ೩ || ಭಾಸ್ಕರನೇ ನಕ್ಷತ್ರ
ಗಣೇಶ ಸ್ತುತಿ
ರಾಗ : ನಾಟ ತಾಳ : ಆದಿ ವಿಘ್ನೇಶ ತವಶರಣಂ ವಿಘ್ನವಿನಾಶಕ ತವಶರಣಂ ಓಂಕಾರೇಶ್ವರ ಶ್ರೀಕರುಣಾಕರ ಶುಭಕರ ಸಾಗರ ತವಶರಣಂ || ೧ || ಆದಿಪೂಜಿತ ಸುರಗಣಸೇವಿತ ಶ್ರೀಗಣನಾಥ ತವಶರಣಂ ವಿದ್ಯಾದಾಯಕ ಬುದ್ಧಿಪ್ರದಾಯಕ ಸಿದ್ಧಿವಿನಾಯಕ ತವಶರಣಂ || ೨ || ಶುಕ್ಲಾಂಬರಧರ ಗಜಕರ್ಣೇಶ್ವರ ಗಣಾಧೀಶ್ವರ ತವಶರಣಂ ಪಾಂಶಾಂಕುಶಧರ ಪಾಪವಿಮೋಚನ ಪಾರ್ವತಿ ತನಯ ತವಶರಣಂ || ೩ || ಲಂಬೋದರ ಶಂಭು ಕುಮಾರ ಶರಭಗಣೇಶ ತವಶರಣಂ ಪಶುಪತಿ ತನಯ ಪರಮ ನಿರಂಜನ ಪ್ರಣವಾಕಾರ ತವಶರಣಂ || ೪ ||
ಕೃತಜ್ಞತೆ
ಉಡುಪಿಯಲ್ಲಿರುವ ಶ್ರೀಯುತ ಸಂಗೀತ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರನ್ನು ಕಂಡು ಗೀತೆ ಗೊಂಚಲು – ದೇವರ ಭಕ್ತಿಗೀತೆಗಳ ಕಿರುಹೊತ್ತಿಗೆಗೆ ರಾಗ-ತಾಳಗಳನ್ನು ಸಂಯೋಜಿಸಿ ಕೊಡಬೇಕೆಂದು ಕೇಳಿಕೊಂಡಾಗ ಸರಳ ಸಜ್ಜನರಾದ ಅವರು ಸಹೃದಯ ಮನದಿಂದ ಒಪ್ಪಿ, ಈ ಎಲ್ಲಾ ಗೀತೆಗಳಿಗೂ ರಾಗ-ತಾಳಗಳ ಸಂಯೋಜನೆಯನ್ನು ಮಾಡಿದ್ದಾರೆ. ಅವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಹಾಗೂ ತುಂಬು ಹೃದಯದ ಕೃತಜ್ಞತೆಗಳು. ಇಂತಿ ಶ್ರೀಮತಿ ವೈಜಯಂತಿ ಶ್ರೀಧರ್
ಶುಭ ನುಡಿ
|| ಶ್ರೀ ಗುರು ಗಣಾಧಿಪತಯೇ ನಮಃ || ಆತ್ಮೀಯರಾದ ಶ್ರೀಮತಿ ವೈಜಯಂತಿ ಶ್ರೀಧರ್ರವರು ಶ್ರೀ ಶೃಂಗೇರಿ ಮಠದ ಪರಮಭಕ್ತರಾಗಿದ್ದು, ಚಿಕ್ಕಂದಿನಿಂದಲೂ ಪ್ರತಿಭಾವಂತರಾಗಿದ್ದು, ನೃತ್ಯ, ಸಂಗೀತ, ಸಾಹಿತ್ಯಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದು, ಇದರ ಪ್ರೇರಣೆಯಿಂದ ಅನೇಕ ಗೀತೆಗಳನ್ನು ರಚಿಸಿದ್ದು, ಅವುಗಳೆಲ್ಲವೂ ಭಕ್ತಿ ಪರವಾದ ಸಾಹಿತ್ಯಗಳಾಗಿದ್ದು, ಮತ್ತು ಪ್ರಾಸಬದ್ಧವಾಗಿ ತಾಳಗಳಿಗೆ ಹೊಂದುವಂತೆ ರಚಿಸಿರುತ್ತಾರೆ. ಈ ಸಾಹಿತ್ಯಗಳು ಭಜನೆಗಳಲ್ಲಿ ಬಳಸಲು ಸೂಕ್ತವಾಗಿರುತ್ತದೆ. ಗಣೇಶ ಮುಂತಾದ ದೇವರುಗಳ, ನವಗ್ರಹಗಳ ಹಾಗೂ ಗುರುಗಳ ಮೇಲಿನ ರಚನೆಗಳನ್ನು ಮಾಡಿರುತ್ತಾರೆ. ಈ ರಚನೆಗಳಿಂದ ಗುರುಗಳ ಚರಿತ್ರೆಯು ಮನದಟ್ಟಾಗುವಂತೆ
ಅರ್ಪಣೆ
|| ಓಂ ಶ್ರೀ ಗಣೇಶಾಯ ನಮಃ || || ಓಂ ಶ್ರೀ ಸಿಗಂದೂರು ಮಾತಾ || || ಓಂ ಶ್ರೀ ಗುರುಭ್ಯೋ ನಮಃ || ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಮತ್ತು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರ ದಿವ್ಯ ಚರಣ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧೆಯಿಂದ ಸಾಷ್ಟಾಂಗ ಪ್ರಣಾಮಗಳು. ಶ್ರೀ ದೇವೀ ಮಹಾತ್ಮೆಯನ್ನು ಪದ್ಯರೂಪದಲ್ಲಿ ಬರೆದಿದ್ದೇನೆ. ಗದ್ಯರೂಪದಲ್ಲೂ ಓದಬಹುದಾಗಿದೆ. ಪೂಜ್ಯ ಗುರುವರ್ಯರು ನಾನು ಬರೆದಿರುವ ಶ್ರೀ
ಅರ್ಪಣೆ
|| ಓಂ ಶ್ರೀ ಗಣೇಶಾಯ ನಮಃ || || ಓಂ ಶ್ರೀ ಸಿಗಂದೂರು ಮಾತಾ || || ಓಂ ಶ್ರೀ ಗುರವೇ ನಮಃ || ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಮತ್ತು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರ ದಿವ್ಯ ಚರಣ ಸನ್ನಿಧಿಯಲ್ಲಿ ಭಕ್ತಿ ಶ್ರದ್ಧೆಯಿಂದ ಸಾಷ್ಟಾಂಗ ಪ್ರಣಾಮಗಳೊಂದಿಗೆ ಸಮರ್ಪಿಸುತ್ತಿದ್ದೇನೆ. ಭಗವತ್ಪಾದ ಶ್ರೀ ಶಂಕರಾಚಾರ್ಯರ ಜೀವನ ಚರಿತ್ರೆ, ಸೌಂದರ್ಯ ಲಹರಿ, ಶ್ರೀ ಗುರು
ಶ್ರೀ ಸಿಗಂದೂರೇಶ್ವರಿ ಮಹಿಮೆ
ರಾಗ – ದೇಶಿತೋಡಿ ತಾಳ- ಏಕತಾಳ ಸಿಗಂದೂರಲೀ ನೆಲೆಯಾಗಿರುವ ಜಗನ್ಮಾತೆಯ ಮುಕ್ತಿಯದಾತೆಯ ಮಹಿಮೆಯ ನಾನು ಪಾಡುವೇ ||ಪ|| ಮಲೆಯ ನಾಡಿನ ಗುಡ್ಡಗಾಡಲಿ ಶರಾವತಿ ನದಿಯ ದಡದ ಬುಡದಲಿ ಹಸಿರು ಹಸಿರಿನಾ ಬನದ ಸಿರಿಯಲಿ ತಂಪು ತಂಪಿನಾ ಬೆಟ್ಟದ ತಗ್ಗಲಿ ಪುಣ್ಯ ಭೂಮಿಯು ಈ ಊರೂ ತಾಯಿ ನೆಲೆಸಿದ ಸಿಗಂದೂರು ||೧||| ಅನಾದಿಯಲಿ ನೀ ಮೂಲದಲಿ ನಿನ್ನಯ ಭಕ್ತನ ಕನಸಿನಲಿ ದರ್ಶನವಾಗಿ ಪೇಳುತಲಿ ಪೂಜಿಸು ಸೀಗೇ ಕಣಿಯಲ್ಲೀ ಅನುಜ್ಞೆಯನಿತ್ತೆ ಸುಜ್ಞಾನನಿಗೆ ನಿಷ್ಟಾವಂತ ಭಕ್ತನಿಗೆ ||೨|| ಶ್ರದ್ಧಾ ಭಕ್ತಿಲಿ ಜ್ಞಾನವಂತನು
ಶ್ರೀದೇವಿಯ ಸನ್ನಿಧಿ
ರಾಗ – ಸಂಕ್ರಂದನ ಪ್ರಿಯ ತಾಳ – ಆದಿತಾಳ ಭಕ್ತರ ಪೊರೆಯಲು ಸಿಗಂದೂರಲಿ | ನೆಲೆಸಿಹ ಭಗವತಿಯೂ || ನಮ್ಮೀ ದೇವತೆಯೂ | ತಾಯೇ ನಿನ್ನಯ ಮಹಾ ಮಹಿಮೆಯಾ || ವರ್ಣಿಸಲಸದಳವೂ | ವರ್ಣಿಸಲಸದಳವೂ ||೧|| ಮಲೆಯ ನಾಡಿನ ಗಿರಿಗಳ ನಡುವಲಿ ಹಸಿರು ಕಾಡಿನ ಅಂದದ ಮೆರಗಲಿ ಗುಡ್ಡಾ ಗಾಡಿನ ತಗ್ಗಿನ ತಂಪಲಿ ಶ್ರೀ ಚೌಡೇಶ್ವರಿಯಾ ದೇವಿಯ ಆಲಯವೂ ||೧|| ನಿತ್ಯವು ಬರುವವರು ಭಕ್ತ ಜನಾ ಪಡೆವರೆಲ್ಲರು ದೇವಿಯ ದರ್ಶನ ಸಿಗಂದೂರಿನಾ ತಾಯಿಯ ಧ್ಯಾನಾ ಮಾಡ್ವರು ಎಲ್ಲ