ಶ್ರೀದೇವಿಯ ಪೂಜೆ

ರಾಗ – ಸಿಂಹೇಂದ್ರ ಮಧ್ಯಮ ತಾಳ – ಆದಿತಾಳ ನೋಡ್ವೆನೇ ತಾಯೇ ಪಾಡ್ವೆನೇ ಸಿಗಂದೂರೇಶ್ವರಿ ದೇವಿ ನಿನ್ನ ಪೂಜೆಯ ನೋಡ್ವೆನೇ ತಾಯೇ ಪಾಡ್ವೆನೇ ||ಪ|| ತುಂಬಿಟ್ಟ ಹೂವಿನ ಬುಟ್ಟಿಯು ಸ್ಥಳದಲ್ಲಿದ್ದು | ಚಂದದಿ ಪೋಣಿಸಿದ ಮಾಲೆಯಿದ್ದೂ || ವೇದ ಮಂತ್ರಗಳನ್ನು ಪಠಣವ ಮಾಡುತ್ತ | ಪಂಚಾಮೃತದಿಂದ ಮಾಡ್ವ ಅಭಿಷೇಕಾ ||೧|| ಹೊಳೆಯುವ ರೇಷ್ಮೆಯ ಜರತಾರಿ ಸೀರೆಯಿದ್ದು | ವಜ್ರ ವೈಡೂರ್ಯದ ಸುವರ್ಣಾಭರಣವಿದ್ದು || ಪೂಜಿಪ ಅರ್ಚಕರು ಮಾಡಿದ ಅಲಂಕಾರವ ಕಣ್ತುಂಬಿಕೊಳ್ಳುವ ಭಕ್ತರ ಕೂಟಾ ||೨|| ಬಗೆ ಬಗೆಯಾ

ಅಮ್ಮಾ ನೋಡಮ್ಮ

ರಾಗ – ಕೇದಾರ ತಾಳ – ಆದಿತಾಳ ಭಕ್ತಿಯಿಂದ ನಿನ್ನ ಸನ್ನಿಧಿಗೆ ಬಂದಿರುವೆ ನೋಡಮ್ಮಾ |ಪ|| ತಾಯೇ ನಿನ್ನನ್ನೇ ಸ್ಮರಿಸುತ್ತ ಬಂದೆ ಕೃಪೆಯನು ಮಾಡಮ್ಮಾ ||೧|| ಶಿರಬಾಗಿ ನಮಿಸುವೆ ಚೌಡೇಶ್ವರಿಯೇ ಕರುಣೆಯ ತೋರಮ್ಮಾ ||೨|| ಅಮ್ಮಾ ನೋಡುವೆ ನಿನ್ನಯ ಪೂಜೆಯ ಚಿತ್ತದೊಳ್ ನೆಲೆಸಮ್ಮಾ ||೩|| ನಿನ್ನ ಸೇವೆಗೆ ಮುಡಿಪಾಗಿರುವಾ ಸುಯೋಗ ನೀಡಮ್ಮಾ ||೪|| ನೀನಿತ್ತ ಈ ಜನ್ಮ ನಿನ್ನ ಕೃಪೆಯ ಪಡೆದು ನಿನ್ನ ಪಾದ ಸೇರಲಮ್ಮಾ ||೫|| ಸಿಗಂದೂರಾಂಬೇ ಮುಕ್ತಿಯ ನೀಡಿ ಸಾರ್ಥಕಗೊಳಿಸಮ್ಮಾ ||೬||

ಪ್ರಾರ್ಥನೆ

ರಾಗ – ಕೇದಾರ ಗೌಳ ತಾಳ – ಆದಿತಾಳ ಶ್ರೀ ಸಿಂಗದೂರಾಂಬಾ ಪಾಲಿಸು ನಮ್ಮಯ ಶಂಕರಿ ವರಗೌರಿ ತಾಯೆ ದಯಾಮಯಿ ||ಪ|| ಸಿಂಹವಾಹಿನಿ ಮಹಿಷನ ಮರ್ಧಿನಿ ಶ್ರೀ ಚೌಡೇಶ್ವರಿ ನೀ ದುಷ್ಟಶಕ್ತಿ ನಿರ್ಮೂಲಿನಿ ||೧|| ಸಾನಿದ ಪಾಮಪ ನಿದಪಮ ಗರಿಸಾ ಸಾರಿಮ ಗರಿಸರಿ ಮಪನಿದ ಪಮಪನಿ ಸನಿಸ ರೀ ರಿಸರಿ ಮಗರಿ ಗಾರೀಸ ನಿಪರೀ ಸಾನಿದ ಪಸಾರೀ ಮಪನಿ ಬುದ್ಧಿ ಪ್ರದಾಯಿನಿ ಸುಜನರ ಪಾಲಿನಿ ಸದ್ಭಕ್ತಿಯಲಿ ಸ್ತುತಿಸುವೆ ಜನನೀ ಶ್ರೀ ದುರ್ಗಾಂಬೆ ನೀ ಮಂಗಳದಾಯಿನಿ ಸಿಂಗದೂರೇಶ್ವರಿ ನೀ

ಸಿಗಂದೂರು ಸೇತುವೆ – ಶ್ರೀದೇವಿಯ ಕೃಪೆ

ಶ್ರೀ ಚೌಡೇಶ್ವರಿ ದೇವಿಯು ಸೀಗೇಕಣಿಯಿಂದ ಈಗಿರುವ ಸ್ಥಳಕ್ಕೆ ಪ್ರತಿಷ್ಠಾಪನೆಯಾದ ನಂತರ ಪ್ರಥಮ ಭಕ್ತನ ವಂಶದವರಿಗೂ ಪ್ರಧಾನ ಅರ್ಚಕರಿಗೂ ಶರಾವತಿ ಸಂತ್ರಸ್ತರಾದ ಭಕ್ತರಿಗೂ ಶ್ರೀದೇವಿಯನ್ನು ಆರಾಧಿಸಲು ಅನುಕೂಲವಾಗಿ ಎಲ್ಲರೂ ನೆಮ್ಮದಿ ಪಡೆದರು. 1990 ರಲ್ಲಿ ನಮ್ಮ ಕುಟುಂಬವು ಜಟಿಲವಾದ ಸಮಸ್ಯೆಗೆ ಸಿಲುಕಿತು. ಆ ಸಮಯದಲ್ಲಿ ಸಿಗಂದೂರು ಶ್ರೀ ಚೌಡೇಶ್ವರಿ ದೇವಿಯ ಸನ್ನಿಧಾನಕ್ಕೆ ಹೋಗಿ ಸಮಸ್ಯೆಯನ್ನು ಪರಿಹಾರ ಮಾಡಿಕೊಡು ತಾಯೀ ಎಂದು ಬೇಡಿದೆವು. ಕೆಲವು ದಿನಗಳ ನಂತರ ಶ್ರೀದೇವಿಯ ಅನುಗ್ರಹದಿಂದ ಸಮಸ್ಯೆಯು ಪರಿಹಾರವಾಯಿತು. ಅಂದಿನಿಂದ ಇಂದಿನವರೆಗೂ ಯಾವುದೇ ಸಮಸ್ಯೆಯಾಗಿದ್ದರೂ ಶ್ರೀದೇವಿಯ

ಅರಿಕೆ

ಶ್ರೀ ಸಿಗಂದೂರೇಶ್ವರಿಯ ಚರಣ ಕಮಲಗಳಿಗೆ ನಮಸ್ಕರಿಸುತ್ತಾ ಬರೆಯುತ್ತಿದ್ದೇನೆ. ನನ್ನ ಆರಾಧ್ಯ ದೇವಿ ಶ್ರೀ ಸಿಗಂದೂರೇಶ್ವರಿಯ ಸೇವೆಯೇ ನನ್ನ ಸೌಭಾಗ್ಯ. ಶ್ರೀದೇವಿಯ ಪ್ರೇರಣೆಯಿಂದಲೇ ಈ ಹಾಡನ್ನು ರಚಿಸಿ ಅರ್ಪಿಸುತ್ತಿದ್ದೇನೆ. ನನ್ನ ಗುರುಗಳಾದ ಸಂಗೀತ ವಿದ್ವಾನರಾದ ದಿವಂಗತ ಪ್ರಭಾಕರರಾಯರು ಕಲಿಸಿದ ಕೆಲವೇ ಪಾಠಗಳಿಂದ ಭಕ್ತಿಗೀತೆಗಳನ್ನು ರಚಿಸಲು ಸಾಧ್ಯವಾಯಿತು. ನಾನು ಬರೆದ ಈ ಹಾಡುಗಳಿಗೆ ರಾಗ-ತಾಳವನ್ನು ನನ್ನ ಗುರುಗಳೇ ಸಂಯೋಜಿಸಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಈ ಹಾಡನ್ನು ತಿದ್ದಿ ಸಲಹೆ-ಮಾರ್ಗದರ್ಶನವನ್ನು ನೀಡಿದ ಶ್ರೀಯುತ ಎನ್. ಎನ್. ಮಧ್ಯಸ್ಥರಿಗೆ ನನ್ನ ಹೃತ್ಪೂರ್ವಕ

ಶ್ರೀ ಸಿಗಂದೂರು ಕ್ಷೇತ್ರದ ಇತಿಹಾಸ

ಸಿಗಂದೂರು ಸಾಗರ ತಾಲ್ಲೂಕಿನ ಕರೂರು ಹೋಬಳಿಯಲ್ಲಿದೆ. ಇದು ಸಾಗರದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ಶರಾವತಿಯ ದಡದಲ್ಲಿರುವ ಈ ಕ್ಷೇತ್ರ ಮೂರು ತಲೆಮಾರುಗಳ ಹಿಂದೆ ಕುಗ್ರಾಮವಾಗಿತ್ತು. ಅಲ್ಲಿಯ ಭಕ್ತನೊಬ್ಬನ ಕನಸಿನಲ್ಲಿ ಶ್ರೀದೇವಿ ಕಾಣಿಸಿಕೊಂಡು ಭಕ್ತನ ಮನೆಯ ಹತ್ತಿರವಿರುವ ಸೀಗೇಕಣಿ ಎಂಬ ಗುಡ್ಡದಲ್ಲಿ ತನ್ನನ್ನು ಸ್ಥಾಪಿಸಿ ಪೂಜಿಸೆಂದು ತಿಳಿಯಪಡಿಸಿದಳು. ಶ್ರೀದೇವಿಯ ಅಣತಿಯಂತೆ ಆ ಭಕ್ತನು ಸೀಗೇಕಣಿ ಗುಡ್ಡಕ್ಕೆ ಹೋಗಿ ಒಂದು ಶಿಲೆಯನ್ನು ಇರಿಸಿ ಭಕ್ತಿಯಿಂದ ಶ್ರೀದೇವಿಯನ್ನು ನೆನೆಯುತ್ತಾ ಆರಾಧಿಸಿದನು. ಆ ಶಿಲಾರೂಪಿಯಾದ ಶ್ರೀದೇವಿಯನ್ನು ಭಕ್ತಿಯಿಂದ ಅರ್ಚಿಸಿ, ಪ್ರಸಾದವನ್ನು ಬೇಡಲು

ಪ್ರಸ್ತಾವನೆ

|| ಓಂ ಶ್ರೀ ಗಣೇಶಾಯ ನಮಃ || || ಓಂ ಶ್ರೀ ಸಿಗಂದೂರು ಮಾತಾ || || ಓಂ ಶ್ರೀ ಗುರುಭ್ಯೋ ನಮಃ || ಸಂಸಾರದ ಹಲವಾರು ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ, ಉದ್ಯೋಗ, ಸಂಬಂಧ, ಸಂಪತ್ತು, ಸಂತಾನ, ಆರೋಗ್ಯ ಮುಂತಾದ ಕಾಮಿತಾರ್ಥಗಳ ಪ್ರಾಪ್ತಿ, ಎಲ್ಲಾ ಬಗೆಯ ಭೀತಿ ನಿವಾರಣೆ, ಮನೆ-ಮಾರು, ಹೊಲ-ತೋಟ ಮುಂತಾದವುಗಳ ರಕ್ಷಣೆ ಈ ಎಲ್ಲದಕ್ಕೂ ಕಾಲಾನುಸಾರ ಏಕೈಕ ಆಶ್ರಯ ಸ್ಥಾನವಾಗಿ ಸಿಗಂದೂರಿನ ದೇವಿ ಸಾನಿಧ್ಯ ಪ್ರಸಿದ್ಧವಾಗಿದೆ. ಕಾರಣೀಕವಾದ ಈ ಕ್ಷೇತ್ರಕ್ಕೆ ಅಸಂಖ್ಯಾತ ಭಕ್ತರು ಜಾತಿ-ಮತಗಳ

Hello world!

Welcome to WordPress. This is your first post. Edit or delete it, then start writing!