ಗುರು ಅಷ್ಟಕ

ರಾಗ : ಮೋಹನ ತಾಳ : ಆದಿತಾಳ (ಖಂಡ ಗತಿ) ಸುಂದರ ಶರೀರ ಮನದಿಚ್ಛೆಯ ಪತ್ನಿ ಕೀರ್ತಿಗೌರವ ಸಂಪತ್ತು ಇದ್ದರೂ ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೧ || ಪತ್ನಿ ಪುತ್ರ ಪೌತ್ರರು ಬಂಧು ಬಳಗವಿರಲು ಸುಖಸಂಸಾರಕೆ ಸಂಪತ್ತು ಗಳಿಸಿರಲು ಸದ್ಗುರು ಚರಣದಲಿ ಭಕ್ತಿ ಇಲ್ಲದಿರಲು ಜೀವನ ನಿರರ್ಥಕ ಎಲ್ಲವೂ ವ್ಯರ್ಥ || ೨ || ವೇದವೇದಾಂಗಗಳ ಕಂಠಸ್ಥ ಪಂಡಿತನು ಗದ್ಯಪದ್ಯ ಕಾವ್ಯಗಳ ರಚನಾ ಸಮರ್ಥನು ಸದ್ಗುರು ಚರಣದಲಿ ಭಕ್ತಿ

ಶ್ರೀ ಲಕ್ಷ್ಮೀನೃಸಿಂಹ ಸ್ತುತಿ

ಹೇ ಭಗವಂತ ಹಾಲ್ಗಡಲೊಡೆಯ ದೇವಾ ಸುದರ್ಶನ ಚಕ್ರಧಾರಿ ||ಪ|| ಆದಿಶೇಷನು ತನ್ನ ಹೆಡೆಯಲ್ಲಿರುವ ಮಣಿಯ ಜ್ಯೋತಿಯಿಂದಲೇ ಬೆಳಗುತಲಿಹನು ನಿನ್ನಯ ಪುಣ್ಯಶರೀರವನು ಶರಣರಾಶ್ರಿತ ಯೋಗೀಶ ಅಂತ್ಯವಿಲ್ಲದ ಶಾಶ್ವತನೇ ಭವಸಾಗರವ ದಾಟಿಸುವ ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೧ || ಬ್ರಹ್ಮರುದ್ರ ಇಂದ್ರಾದಿಗಳು ನಿನ್ನ ಪಾದಕೆ ನಮಿಸುವರು ಅವರ ಮುಕುಟದ ಕಾಂತಿಯ ಮೀರಿ ಬೆಳಗುವ ಉಜ್ಜ್ವಲ ತೇಜಸ್ವಿಯೇ ಶ್ರೀಮನ್ನಾರಾಯಣನೇ ಲಕ್ಷ್ಮಿಯ ಎದೆದಾವರೆಯಲ್ಲಿ ನಲಿದಾಡುವ ರಾಜಹಂಸ ಹೇ ದೇವ ಲಕ್ಷ್ಮೀನೃಸಿಂಹ ನಿನ್ನ ಕೈಯಾಸರೆ ನೀಡೆನಗೆ || ೨

ಕನಕಧಾರಾ ಸ್ತೋತ್ರ

ರಾಗ : ಪುನ್ನಾಗವರ್ಳಿ  ತಾಳ : ಆದಿ (ತ್ರಿಶ್ರ ನಡೆ) ಹೇ ದೇವಿ ಮಂಗಳ ದೇವತೆಯೇ ನಿನ್ನ ಕಡೆಗಣ್ಣ ನೋಟವೊಂದು ಲೀಲೆ ಜಗದಲ್ಲಿರುವ ಸಕಲೈಶ್ವರ್ಯವೆಲ್ಲವು ನಿನ್ನ ದಿವ್ಯ ದೃಷ್ಟಿಗೆ ಅಧೀನ ತಾಯೇ || ೧ || ಹೊಂಬಣ್ಣದ ಮೊಗ್ಗಿನ ತಮಾಲ ವೃಕ್ಷವ ಆಶ್ರಯಿಸಿರುವ ಹೆಣ್ಣು ದುಂಬಿಯಂತೆ ರೋಮಾಂಚನಗೊಂಡ ವಿಷ್ಣು ದೇಹವ ಅವಲಂಬಿತಳೇ ನೀಡೆ ಮಂಗಳವ || ೨ || ಹೇ ದೇವಿ ಬೇಡುವೆ ಸಾಗರ ಸಂಭವೆ ನಿನ್ನ ದೃಷ್ಟಿಮಾಲೆ ಐಶ್ವರ್ಯ ನೀಡು ತಾಯೇ ಮುಗ್ಧವಾಗಿರುವುದು ಮುರಾರಿಯ ಮೊಗದಲ್ಲಿ

ವಿಷ್ಣು ಸ್ತುತಿ

ರಾಗ : ಬೃಂದಾವನ ಸಾರಂಗ  ತಾಳ : ಆದಿ ಹೇ ದೇವನೆ ನಿನ್ನ ನಾಮಾಮೃತವನು ಅನುದಿನ ಸವಿಯುವ ಮನವನು ಕರುಣಿಸೋ ಶ್ರೀಲಕ್ಷ್ಮೀರಮಣ ಶ್ರೀಮನ್ನಾರಾಯಣ ನಿನ್ನಯ ನಾಮವ ಎನ್ನಲಿ ನುಡಿಸೋ || ೧ || ವೈಕುಂಠ ವಾಸನೆ ಶೇಷಶಯನನೆ ತ್ರಿಗುಣಾತ್ಮಕನೆ ತ್ರಿಲೋಕ ವಂದ್ಯನೆ ಚತುರ್ಭುಜಾಯನೆ ಚತುರ್ವೇದಾತ್ಮನೆ ಸರ್ವತೋಮುಖನೆ ಸಕಲಾಭೀಷ್ಟನೆ || ೨ || ಶಂಖಚಕ್ರಧರ ಪೀತಾಂಬರಧರ ಭುವನಾಧಾರ ದಯಾಸಾಗರ ವಿಶ್ವಂಭರಧರ ಶ್ರೀ ದಾಮೋದರ ನವನೀರಜಧರ ನಿಗಮೋದ್ಧಾರ || ೩ || ಅಷ್ಟಸಿದ್ಧಿಪ್ರದನೆ ಅರವಿಂದಾಕ್ಷನೆ ಅಖಿಲ ಧರಾಯನೆ ಅಭಯಂಕರನೆ ನಿರ್ವಿಕಲ್ಪಾಯನೆ

ಲಕ್ಷ್ಮಿ ಸ್ತುತಿ

ರಾಗ : ಶಂಕರಾನಂದಪ್ರಿಯ  ತಾಳ : ಏಕ ಓಂ ಶ್ರೀಲಕ್ಷ್ಮಿ ಪೂಜ್ಯಲಕ್ಷ್ಮಿ ಶ್ರೀ ಶುಭಲಕ್ಷ್ಮಿ ಮಹಾಲಕ್ಷ್ಮಿ ಶ್ರೀ ಸಿರಿಲಕ್ಷ್ಮಿ ಆದಿಲಕ್ಷ್ಮಿ ಶ್ರೀ ವರಲಕ್ಷ್ಮಿ ಪ್ರಧಾನಲಕ್ಷ್ಮಿ || ೧ || ಶ್ರೀದೇವಿಲಕ್ಷ್ಮಿ ಐಶ್ವರ್ಯಲಕ್ಷ್ಮಿ ಶ್ರೀಪೀಠಲಕ್ಷ್ಮಿ ಸ್ಥಾಪಿತೆಲಕ್ಷ್ಮಿ ಶ್ರೀಪದ್ಮಲಕ್ಷ್ಮಿ ವೈಕುಂಠಲಕ್ಷ್ಮಿ ಶ್ರೀಪ್ರಾಣಲಕ್ಷ್ಮಿ ಮಹಾವಿಷ್ಣುಲಕ್ಷ್ಮಿ || ೨ || ಶ್ರೀವೇದಲಕ್ಷ್ಮಿ ವೇದಾಂತಲಕ್ಷ್ಮಿ ಶ್ರೀವೇದ್ಯಲಕ್ಷ್ಮಿ ಸನ್ಮಾರ್ಗಲಕ್ಷ್ಮಿ ಶ್ರೀಜ್ಞಾನಲಕ್ಷ್ಮಿ ಸದ್ಗುಣೆಲಕ್ಷ್ಮಿ ಶ್ರೀಕರಲಕ್ಷ್ಮಿ ಅನಂತಲಕ್ಷ್ಮಿ || ೩ || ಶ್ರೀಸತ್ಯಲಕ್ಷ್ಮಿ ಜ್ಯೇಷ್ಠಲಕ್ಷ್ಮಿ ಶ್ರೀಧರ್ಮಲಕ್ಷ್ಮಿ ಶ್ರೇಷ್ಠಲಕ್ಷ್ಮಿ ಶ್ರೀಅರ್ಥಲಕ್ಷ್ಮಿ ಧೈರ್ಯಲಕ್ಷ್ಮಿ ಶ್ರೀಕಾಮ್ಯಲಕ್ಷ್ಮಿ ಭಾಗ್ಯಲಕ್ಷ್ಮಿ || ೪ || ಶ್ರೀಸಿದ್ಧಿಲಕ್ಷ್ಮಿ

ಹನುಮಾನ್ ಸ್ತುತಿ

ರಾಗ : ಕಾಪಿ  ತಾಳ : ಏಕ ಜೈ ಜೈ ಹನುಮಾನ್ ಜೈ ಹನುಮಾನ್ ಪರಮ ಶ್ರೇಷ್ಠ ಭಕ್ತನು ಹನುಮಾನ್ ರಾಮನಿಗಾಗಿ ಅವತಾರವೆತ್ತಿದ ಪರಮೇಶ್ವರನೇ ಖ್ಯಾತ ಹನುಮಾನ್ || ೧ || ದುಷ್ಟಸಂಹಾರಕೆ ರಾಮನ ನೆರವಿಗೆ ಕಪಿ ಜನ್ಮ ತಳೆದ ಕಪಿಶ್ರೇಷ್ಠ ಹನುಮಾನ್ ವಾಯುದೇವನ ಅನುಗ್ರಹದಿಂದ ಜನಿಸಿ ಬಂದ ಪುತ್ರ ಹನುಮಾನ್ || ೨ || ಬಾಲ್ಯದಲ್ಲೇ ಸಾಹಸತೋರಿ ತಾಯಿಗೆ ಹರ್ಷವ ತಂದ ಹನುಮಾನ್ ರಾಮಲಕ್ಷ್ಮಣಗೆ ವನವಾಸದಲ್ಲಿ ಸಹಾಯ ಮಾಡಿದ ಸದ್ಗುಣ ಹನುಮಾನ್ || ೩ ||

ಸ್ಕಂದ ಸ್ತುತಿ

ರಾಗ : ಸುರುಟಿ  ತಾಳ : ಮಿಶ್ರಛಾಪು ನಮೋ ಬ್ರಹ್ಮಣ್ಯ ನಮೋ ನಮೋ ಸುಬ್ರಹ್ಮಣ್ಯ ನಮೋ ಸುರಗಣ್ಯ ನಮೋ ನಮೋ ಉರಗವರೇಣ್ಯ || ೧ || ನಮೋ ಶಿವ ಪಾರ್ವತಿ ಪುತ್ರ ನಮೋ ನಮೋ ಮುಸಲ ಶಸ್ತ್ರ ನಮೋ ಸ್ತುತಿ ಸಂಪ್ರೀತ ನಮೋ ನಮೋ ಸರ್ವವಂದಿತ || ೨ || ನಮೋ ಜಗತ್ರಾಣ ನಮೋ ನಮೋ ಸ್ವರ್ಣಭೂಷಣ ನಮೋ ಸಕಲ ಸದ್ಗುಣ ನಮೋ ನಮೋ ವಂಶೋದ್ಧರಣ || ೩ || ನಮೋ ಷಣ್ಮುಖನೇ ನಮೋ ನಮೋ ಮಯೂರಾನನೆ

ಗೋವಿಂದ ಸ್ತುತಿ

ಬಂದ ಬಂದ ಗೋವಿಂದ ಗೋಕುಲದಿಂದ ಯಶೋದನಂದನ ಕಂದ ಕೊಳಲನ್ನೂದುವ ಚಂದ ಮುಕುಂದ ಬಂದ ಗೋವಿಂದ || ೧ || ಕಮಲನಯನ ಸುಂದರವದನ ಯದುಕುಲ ನಂದನ ಮದನ ಮೋಹನ ಕೊಳಲನ್ನೂದುವ ಚಂದ ಮುಕುಂದ ಬಂದ ಗೋವಿಂದ || ೨ || ಪೂತನಿ ನಾಶಕ ಪೃಥಿವೀನಾಥ ಶ್ರೀಹರಿ ವಿಠಲ ಜಯ ಹರಿ ವಿಠಲ ಕೊಳಲನ್ನೂದುವ ಚಂದ ಮುಕುಂದ ಬಂದ ಗೋವಿಂದ || ೩ || ಹಾಲುಮೊಸರುಗಳ ಪ್ರಿಯನು ಕೃಷ್ಣ ಬೆಣ್ಣೆಯ ಮೆಲ್ಲುವ ಮುದ್ದುಕೃಷ್ಣ ಕೊಳಲನ್ನೂದುವ ಚಂದಮುಕುಂದ ಬಂದ ಗೋವಿಂದ ||

ಶಿವಮಾನಸ ಪೂಜಾ ಸ್ತುತಿ

ಹೇ ಭಗವಾನ್ ಶಂಭೋ ಶಂಕರನೆ ದಯಾನಿಧಿಯೆ ಪಶುಪತಿ ಪರಮೇಶ್ವರನೆ ಮನಸಂಕಲ್ಪದಿ ಪೂಜಿಪೆ ದೇವನೆ ಕೃಪೆ ತೋರಿ ಸ್ವೀಕರಿಸು ಮಹೇಶ್ವರನೆ || ೧ || ರತ್ನಗಳಿಂದ ನಿರ್ಮಿಸಿದ ಆಸನವು ಹಿಮದಂತಹ ತಂಪು ನೀರಿನ ಸ್ನಾನ ಕಸ್ತೂರಿ ಸುಗಂಧದಿ ಬೆರೆತ ಚಂದನ ನವರತ್ನ ವಿಭೂಷಿತ ದಿವ್ಯ ವಸ್ತ್ರಗಳು || ೨ || ಜಾಜಿ ಸಂಪಿಗೆ ಮತ್ತು ಬಿಲ್ವಪತ್ರೆಗಳ ಸೇರಿಸಿ ಮಾಡಿದ ಪುಷ್ಪಾಂಜಲಿಯು ಧೂಪ ದೀಪದ ಮನನಿರ್ಮಿತ ಪೂಜೆಯ ಕೃಪೆ ತೋರಿ ಸ್ವೀಕರಿಸು ಮಹೇಶ್ವರನೆ || ೩ || ನವರತ್ನ ಖಂಡ

ಶನೈಶ್ಚರ ಸ್ತುತಿ

ರಾಗ : ಮೋಹನ  ತಾಳ : ಆದಿ (ಮಿಶ್ರ ನಡೆ) ಭಕ್ತವಂದ್ಯನೆ ಶನೈಶ್ಚರನೆ ನಿನ್ನ ಸ್ಮರಿಸುತ ನಮಿಸುವೆ ಛಾಯಾ ಸೂರ್ಯನ ಪುತ್ರನೆ ಎನ್ನ ಕಾಯೋ ದೇವನೆ || ೧ || ಸತ್ಯಧರ್ಮವ ನಿರತ ಪಾಲಿಸಿ ನೀತಿ ನಿಯಮ ಆದರಿಸಿದೆ ಕಷ್ಟಸುಖದ ಅರಿವು ಮೂಡಿಸಿ ನಾಸ್ತಿಕರ ಮದವ ಮಣಿಸಿದೆ || ೨ || ದ್ವಾದಶಾದಿ ರಾಶಿಯೊಳಗೆ ಬಿಡದೆ ನೀ ಸಂಚರಿಸುವೆ ನಿನ್ನ ಪ್ರವೇಶದ ರಾಶಿಯವರು ಭಕ್ತಿಯಿಂದ ನೆನೆವರು || ೩ || ದೇವಾದಿ ದೇವತೆಗಳಿಗೂ ನಿನ್ನ ಸ್ವಭಾವ ತೋರಿದೆ