ಶ್ರೀದೇವಿ ಸ್ತುತಿ
ರಾಗ – ಸಂಕ್ರಂದನ ಪ್ರಿಯ
ತಾಳ – ಏಕತಾಳ
ಸಿಗಂದೂರಾಂಬೆ ನೀ ಆದಿಶಕ್ತಿ ನೀ
ಚಾಮುಂಡಾಂಬೆ ನೀ ಪರಾಶಕ್ತಿ ನೀ
ಜಗನ್ಮಾತೆ ನೀ ಪ್ರಾಣಶಕ್ತಿ ನೀ
ಭಕ್ತಪಾಲೆ ನೀ ವಿಶ್ವರೂಪಿಣೀ ||೧||
ಕಲಾಮೂರ್ತಿನೀ ಕಾತ್ಯಾಯಿನೀ
ಕೈಲಾಸಿನೀ ಮಹೇಶ್ವರಿಯು ನೀ
ತ್ರೈಲೋಚಿನೀ ಜಯದೇವಿ ನೀ
ಶ್ರೀ ಸುನೀತೆ ನೀ ಜಗದೋದ್ಧಾರಿಣೀ ||೨|
ಪುಷ್ಪಗಂಧಿನೀ ಕುಂಕುಮಾಂಕಿನೀ
ಚಂದ್ರವದನೆ ನೀ ಮಂದಗಮನೆ ನೀ
ಸ್ವರ್ಣಮಾಲಿನೀ ಜಯ ಭವಾನಿ ನೀ
ಮಹಾಶಕ್ತಿನೀ ಮಂತ್ರ ಸ್ವರೂಪಿಣೀ ||೩||
ಮಹಾಪೀಠೆನೀ ಸತ್ಯಸಂಧೆನೀ
ಮಹಾಯೋಗಿನೀ ಮಹಾದೇವಿನೀ
ಸೌದಾಮಿನೀ ವಾಗ್ದೇವಿನೀ
ಶುಭಸುಕೀರ್ತಿನೀ ಶ್ರೀಸುಷೇಷಿಣೀ ||೪||
ಜನನಿ ಜಾಹ್ನವಿನೀ ಶಿಷ್ಟಪಾಲಿನೀ
ಶಂಭು ಶಾಂಭವಿನೀ ದುಷ್ಟನಾಶಿನೀ
ತ್ರಿಮೂರ್ತಿ ಶಕ್ತಿನೀ ಮಹಾಮಹೇಂದ್ರಿನೀ
ಅಸುರ ಮರ್ಧಿನೀ ಶೂಲಧಾರಿಣೀ ||೫||
ಪರಮಪೂಜಿನೀ ಪೊರೆವದೇವಿನೀ
ಭಾರ್ಗವೀಯುನೀ ಭಾರತೀಯುನೀ
ಭಾವಭಂಜಿನೀ ಭುವನರಂಜಿನೀ
ಶುದ್ದಮನಸ್ವಿನೀ ಸುಗುಣೆ ಸದ್ಗುಣೀ ||೬||
ಶೈಲನಂದಿನೀ ವಿಂಧ್ಯವಾಸಿನೀ
ಉಮೇಶ್ವರಿಯುನೀ ಅರ್ಧನಾರಿನೀ
ಭೂದೇವಿಯುನೀ ಸತ್ಯಶಾಂತಿನೀ
ವಾಸವಾಂಬೆನೀ ಬಹುರೂಪಿಣೀ ||೭||
ಆತ್ಮಶಕ್ತಿನೀ ಏಕಾಗ್ರೆನೀ
ವೇದ ಶಕ್ತಿನೀ ಧರ್ಮದೇವಿನೀ
ದಿವ್ಯ ಶೋಭಿನೀ ಮಹಾಶಾಂತಿನೀ
ಜಗದ ಜನನಿನೀ ಬ್ರಹ್ಮಸ್ವರೂಪಿಣೀ ||೮||
ವಿದ್ಯೆದೇವಿನೀ ಶಾಸ್ತ್ರವೇದ್ಯೆ ನೀ
ಸರ್ವಜ್ಞಾನಿ ನೀ ಶ್ರೀ ಸುಜ್ಞಾನಿ ನೀ
ಜಗಜ್ಯೇಷ್ಟೆ ನೀ ಸಂಜೀವಿನೀ
ಜ್ಞಾನದಾಯಿನೀ ಜ್ಞಾನ ಸ್ವರೂಪಿಣೀ ||೯||
ಅಂಬಿಕೆಯು ನೀ ಮೂಕಾಂಬಿಕೆಯು ನೀ
ಶ್ರೀದುರ್ಗಾಂಬೆ ನೀ ಜೈಜಗದಂಬೆ ನೀ
ನಿತ್ಯ ನಿರಂಜಿನೀ ಸರ್ವಾಂತರ್ಯಾಮಿ ನೀ
ಸಿದ್ಧಿಸಿದ್ಧಿನೀ ಭಕ್ತ ಪೋಷಿಣೀ ||೧೦||
ಸಕಲೈಶ್ವರ್ಯೆ ನೀ ಸುನಿರ್ಮಲೆಯು ನೀ
ಶುಭಸುಭದ್ರೆ ನೀ ಬುದ್ಧಿ ಪ್ರದಾಯಿನೀ
ನಿತ್ಯ ಪೂಜಿನೀ ಫಲಪ್ರದಾಯಿನೀ
ಅಂಬುಜಾಕ್ಷಿ ನೀ ಅಖಿಲ ಗುಣಮಣೀ ||೧೧||
ಬಹುಗುಣಾಢ್ಯೆ ನೀ ಸುಗುಣಾಕರಿಯು ನೀ
ನಾರಾಯಣಿಯು ನೀ ಪರಿಪೂರ್ಣೆಯು ನೀ
ಪುಷ್ಕರಣಿಯು ನೀ ಕಣ್ಮಣಿಯು ನೀ
ಅನ್ನಪೂರ್ಣೆ ನೀ ಶ್ರೀ ಶರ್ವಾಣೀ ||೧೨||
ಹೇ ಪ್ರಕೃತಿ ನೀ ಹೇ ಸರೋಜಿನೀ
ಗಂಗೆ ತುಂಗೆ ನೀ ಕಪಿಲೆ ಭದ್ರೆ ನೀ
ಕಾವೇರಿಯು ನೀ ಕಾಳಿನದಿಯು ನೀ
ಶರಾವತಿಯು ನೀ ಶ್ರೀ ಕಲ್ಯಾಣೀ ||೧೩||
ಆದ್ಯ ಪೂಜಿನೀ ವರದಮಾತೆನೀ
ಚೌಡೇಶ್ವರಿಯು ನೀ ಪಾರಮಾರ್ಥೆ ನೀ
ಮೇಧಾಶಕ್ತಿಯು ನೀ ಪಾವನಾತ್ಮೆ ನೀ
ಮಂಗಳಾಂಗಿ ನೀ ಮುಕ್ತಿ ಸ್ವರೂಪಿಣೀ ||೧೪||
ಶ್ರೀ ದೇವೀ ಮಹಾತ್ಮೆ
15 Songs