ಅಮ್ಮಾ ನೋಡಮ್ಮ

ರಾಗ – ಕೇದಾರ
ತಾಳ – ಆದಿತಾಳ

ಭಕ್ತಿಯಿಂದ ನಿನ್ನ ಸನ್ನಿಧಿಗೆ
ಬಂದಿರುವೆ ನೋಡಮ್ಮಾ ಅಮ್ಮಾ |ಪ||

ತಾಯೇ ನಿನ್ನನ್ನೇ ಸ್ಮರಿಸುತ್ತ ಬಂದೆ
ಕೃಪೆಯನು ಮಾಡಮ್ಮಾ ಅಮ್ಮಾ ||೧||

ಶಿರಬಾಗಿ ನಮಿಸುವೆ ಚೌಡೇಶ್ವರಿಯೇ
ಕರುಣೆಯ ತೋರಮ್ಮಾ ಅಮ್ಮಾ ||೨||

ಅಮ್ಮಾ ನೋಡುವೆ ನಿನ್ನಯ ಪೂಜೆಯ
ಚಿತ್ತದೊಳ್ ನೆಲೆಸಮ್ಮಾ ಅಮ್ಮಾ ||೩||

ನಿನ್ನ ಸೇವೆಗೆ ಮುಡಿಪಾಗಿರುವಾ
ಸುಯೋಗ ನೀಡಮ್ಮಾ ಅಮ್ಮಾ ||೪||

ನೀನಿತ್ತ ಈ ಜನ್ಮ ನಿನ್ನ ಕೃಪೆಯ ಪಡೆದು
ನಿನ್ನ ಪಾದ ಸೇರಲಮ್ಮಾ ಅಮ್ಮಾ ||೫||

ಸಿಗಂದೂರಾಂಬೇ ಮುಕ್ತಿಯ ನೀಡಿ
ಸಾರ್ಥಕಗೊಳಿಸಮ್ಮಾ ಅಮ್ಮಾ ||೬||