ದಯವನು ಮಾಡೇ
ರಾಗ – ಬಹಾರ್
ತಾಳ – ಆದಿತಾಳ
ಸಿಗಂದೂರ ಶ್ರೀ ದೇವಿಯೇ ತಾಯೇ |
ದಯವನು ಮಾಡೇ ವರವನು ನೀಡೇ ||ಪ||
ಪರಮ ಭಕ್ತರು ನಿನ್ನ ನೆನೆದು ಬೇಡುವರು
ಸಿಗಂದೂರ ಶ್ರೀ ದೇವಿಯೇ ತಾಯೇ ||ಅಪ||
ಸದ್ಭಕ್ತರು ನವ ಪುಷ್ಪವನೇರಿಸಿ |
ಅರಿಸಿನ ಕುಂಕುಮವನ್ನೇ ಅರ್ಚಿಸಿ ||೧||
ಫಲಗಳ ತಂದಿಟ್ಟು ನೈವೇದ್ಯವನಾ |
ಭಕ್ತಾಗ್ರಣಿಗಳು ಗೈವರು ನಮನಾ ||೨||
ತುಪ್ಪದ ದೀಪವ ಬೆಳಗುತಲಿಹರು |
ಪಚ್ಚಕರ್ಪೂರದ ಆರತಿಯೆತ್ತುವರು ||೩||
ವೇದ ಘೋಷವು ಮೊಳಗುತಲಿರಲು |
ಮಂಗಳ ವಾದ್ಯವ ನುಡಿಸುತಲಿರಲು ||೪||
ಜಯ ಜಯ ನಿನಗೇ ಹೇ ಭಗವತಿಯೇ |
ಜಯ ಮಂಗಳಾದೇವಿ ಸನ್ಮಂಗಳೆಯೇ ||೫||
ಶ್ರೀ ದೇವೀ ಮಹಾತ್ಮೆ
15 Songs