ದೇವಿಯೇ ವಂದಿಸುವೆ
ರಾಗ – ಹಂಸಧ್ವನಿ
ತಾಳ – ಆದಿತಾಳ
ಮೊರೆಯ ಕೇಳು ಸಿಗಂದೂರ ಜನನೀ
ಭಕ್ತರ ಪಾಲಿನಿ ವರಪ್ರದಾಯಿನೀ ||ಪ||
ಭಕ್ತಿಯ ಭಾವದಿ ನಿನ್ನನು ನೆನೆಯಲು
ಸಿಗುವುದು ನಮಗೇ ನೆಮ್ಮದಿಯೂ
ಶ್ರದ್ಧೆಯಿಂದ ನಿನ್ನನು ಪೂಜೆಯ ಮಾಡಿ
ಸಿಗಂದೂರೇಶ್ವರೀ ವಂದಿಸುವೇ ||೧||
ನೈವೇದ್ಯ ಆರ್ಪಿಸಿ ಆರತಿ ಬೆಳಗಿಸಿ
ಗಂಟೆಯ ಧ್ವನಿಸೀ ಶಂಖವನಾದಿಸಿ
ನಿನ್ನ ಮಂದಿರಕೆ ಪ್ರದಕ್ಷಿಣೆ ಮಾಡಿ
ಸಿಗಂದೂರೇಶ್ವರೀ ವಂದಿಸುವೇ ||೨||
ಸಕಲರಿಗೂ ನಿಧಿ ನಿನ್ನಯ ಸನ್ನಿಧಿ
ಬರುತಾನಂದದಿ ಭಜಿಪರು ಮುದದಿ
ತನುಮನದಿಂದ ನಿನ್ನ ಭಜನೆಯ ಮಾಡಿ
ಸಿಗಂದೂರೇಶ್ವರೀ ವಂದಿಸುವೇ ||೩||
ದುಷ್ಟರ ಶಿಕ್ಷಕಿ ಶಿಷ್ಟರ ರಕ್ಷಕಿ
ಪೊರೆಯುವ ತಾಯೇ ಮಹಾಮಾಯೇ
ಧ್ಯಾನವ ಮಾಡುತ ಮನದಿಚ್ಚೆಯ ಬೇಡುತ
ಸಿಗಂದೂರೇಶ್ವರೀ ವಂದಿಸುವೇ ||೪||
ದೇವಿ ನಿನ್ನ ದರ್ಶನ ಪರಮಪಾವನ
ಚೌಡೇಶ್ವರಿ ನಿನ್ನ ಮಾಡುವೆ ಸ್ಮರಣ
ನನ್ನ ಜನ್ಮವೇ ನಿನ್ನಯ ಕರುಣ
ಸಿಗಂದೂರೇಶ್ವರೀ ವಂದಿಸುವೇ ||೫||
ಶ್ರೀ ದೇವೀ ಮಹಾತ್ಮೆ
15 Songs