ಆರತಿ ಬೆಳಗುವೆ

ರಾಗ – ಮಧ್ಯಮಾವತಿ
ತಾಳ – ಆದಿತಾಳ

ತಾಯೇ ಶರಣು ವಂದೇ ಮನದಿಂ
ಮಾಡುವೆ ನಾ ನಿನ್ನ ಸ್ಮರಣೇ ||
ಸಿಗಂದೂರಾಂಬೇ ಚಾಮುಂಡಾಂಬೇ
ತುಪ್ಪದಾರತಿಯ ಬೆಳಗುವೆನು ||ಪ||

ಶಿಲೆಯಾಕಾರೀ ಚೌಡೇಶ್ವರೀ
ದೀನ ದಯಾಕರೀ ಜಗದೀಶ್ವರೀ
ಮಹಾಮಹೇಶ್ವರೀ ಕರುಣಾಸಾಗರೀ
ತುಪ್ಪದಾರತಿಯ ಬೆಳಗುವೆನು ||೧||

ಭವಭಯಹಾರಿಣಿ ಹೇ ವಾಣೀ
ಸುಗುಣೆ ಸದ್ಗುಣಿ ಹಿತೈಷಿಣೀ
ವಿಶ್ವರೂಪಿಣೀ ಶರ್ವಾಣೀ
ತುಪ್ಪದಾರತಿಯ ಬೆಳಗುವೆನು ||೨||

ಭಕ್ತೋದ್ಧಾರಿ ಸಚ್ಚರಿತೇ
ಲೋಕ ವಿಹಾರಿ ಸಂಚರಿತೇ
ಶಿವೇಸರ್ವೇಶ್ವರಿ ಜಗನ್ಮಾತೇ
ತುಪ್ಪದಾರತಿಯ ಬೆಳಗುವೆನು ||೩||

ಕಲಿಯುಗ ಕಲ್ಮಶ ನಾಶಿನಿಯೇ
ಮಂತ್ರ ಸ್ವರೂಪಿಣಿ ವೇದಮಯೇ
ಜಗದೋದ್ಧಾರಿಣಿ ಮಹಾತಾಯೇ
ತುಪ್ಪದಾರತಿಯ ಬೆಳಗುವೆನು ||೪||

ತಾಳಲಾರೆನು ಬಾಳಿನ ಬವಣೆ
ಪಠಿಸುವೆ ಅನುದಿನ ನಿನ್ನ ಸ್ಮರಣೆ
ನೀಡೇ ತಾಯೇ ನಿನ್ನ ಕರುಣೆ
ತುಪ್ಪದಾರತಿಯ ಬೆಳಗುವೆನು ||೫||

ಶೋಕ ವಿನಾಶಿನಿ ಜ್ಞಾನಮಯೇ
ಮೋಕ್ಷದಾಯಿನೀ ವಿಶ್ವಮಯೇ
ಜಯ ಜಯ ಮಂಗಳ ದರ್ಶಿನಿಯೇ
ತುಪ್ಪದಾರತಿಯ ಬೆಳಗುವೆನು ||೬||