ಅಮ್ಮ ಪಾಲಿಸೆ ನಮ್ಮ

ರಾಗ – ಮಿಶ್ರ ಸಾರಂಗ
ತಾಳ – ಆದಿತಾಳ

ಎಂದೆಂದಿಗೂ ಅಮ್ಮಾ ನೀ ಪಾಲಿಸೆ ನಮ್ಮಾ
ಚೌಡೇಶ್ವರಿಯೇ ನಿನ್ನ ಪ್ರಾರ್ಥಿಸುವಂತಾಯ್ತು ||ಪ||

ಭವದ ಬಲೆಯಲ್ಲಿ ಅಜ್ಞಾನದಿ ಸಿಲುಕಿ ನೊಂದು
ಜ್ಞಾನ ಪ್ರದಾಯಿನಿ ನಿನ್ನ ನೆನೆವಂತಾಯ್ತು ||೧||

ಜೀವನದ ಕರ್ತವ್ಯವಾ ನಿರ್ವಹಿಸಲಾಗದೆ
ನಿನ್ನಯ ಸನ್ನಿಧಿಗೆ ಬರುವಂತಾಯ್ತು ||೨||

ನಿನ್ನ ಸನ್ನಿಧಿಗೆ ಬಂದು ಅಮ್ಮಾ ಎಂದಾಗ
ಕರುಣೆಯ ದೃಷ್ಟಿಯಿಂದ ನೋಡಿದಂತಾಯ್ತು ||೩||

ಕ್ಷಣ ಕ್ಷಣವೂ ನಿನ್ನನ್ನೇ ಸ್ಮರಿಸುತ್ತಲಿರುವಾಗ
ನಾಮಾಮೃತದಿಂದ ವರ್ಣಿಸುವಂತಾಯ್ತು ||೪||

ಭಕ್ತಿಯಿಂದ ನಿನ್ನನ್ನೇ ನೆನವಾಗ ತನುಮನದಲ್ಲಿ
ಹಿತವೆಂದೆನಿಸುತ್ತಾ ಪರಮಾನಂದವಾಯ್ತು ||೫||

ಶ್ರದ್ಧೆಯಿಂದ ನಿನ್ನನ್ನು ಪೂಜಿಸಿ ಆರಾಧಿಸಿ
ನಿನ್ನ ಪ್ರಸಾದವ ಪಡೆದು ಸಂತೃಪ್ತಿಯಾಯ್ತು ||೬||