ಕಾಪಾಡು ತಾಯೇ

ರಾಗ – ಪುನ್ನಾಗವರ್ಳಿ
ತಾಳ – ಆದಿತಾಳ

ತಾಯೆ ತಾಪ ತಾಳಲಾರೆ ತಾಳೆನೆಂದೇ
ಕಾಯೆ ಕಾತ್ಯಾಯನಿಯೆ ಕಾಪಾಡೆಂದೇ ||ಪ||

ಪಾರು ಮಾಡೆ ಪಾವನೆಯೆ ಪಾದಕೆರಗಿದೆ
ಪಾಲಿಸೆ ಪಾರಮಾರ್ಥೆ ಪಾಡಿ ಬೇಡುವೇ ||೧||

ಮಾಲೆ ಮಾಲೆ ಮಾಳ್ಪೆ ಅಂಬೆ ಮಾತೆಗೆಂದೇ
ಮಹಾದೇವಿ ಮಾರ್ಗವೆಂದೆ ಮಾನ್ಯವೆಂದೇ ||೨||

ಶ್ರೀ ದೇವಿಯೇ ನಿನ್ನ ನಿತ್ಯ ಪೂಜಿಸುವೆ
ಸಿಗಂದೂರೇಶ್ವರಿ ನಿನ್ನ ನಿರತ ಸ್ಮರಿಸುವೆ ||೩||

ಬಾರೆ ಬಾರೆ ಭಾರ್ಗವಿಯೇ ಭಾಗ್ಯವತಿಯೇ
ಭಾವಿಸೆನ್ನ ಭಾನುಮತಿಯೆ ಭಾಗೀರಥಿಯೇ ||೪||

ದಾರಿ ಕಾಣೆ ದಾಕ್ಷಾಯಣಿಯೆ ದಾರಿ ತೋರಿಸೇ
ದಾಸಿ ನಾನು ಧಾತೆ ನೀನು ಧಾವಿಸಿ ದಾಟಿಸೇ ||೫||

ಸಾರವಿಲ್ಲ ಸಾಕು ಬದುಕು ಸಾರ ಸಾಕ್ಷಿ ನೋಡೇ
ಸಾಧ್ಯೆ ಸಿಗಂದೂರಾಂಬೇ ಸಾರ್ಥಕ ಮಾಡೇ ||೬||