ಶ್ರೀ ದೇವಿಯೇ ಆರಾಧಿಸುವೆ

ರಾಗ – ಜೀವನ ಪುರಿ
ತಾಳ – ಆದಿತಾಳ

ಸಿಗಂದೂರೇಶ್ವರಿ ನಿನ್ನ ಆರಾಧಿಸುವೇ
ಕರುಣದಿ ಎನ್ನನು ರಕ್ಷಿಸೇ ||ಪ||

ಸತತವು ಧರೆಯಾ ಪೊರೆವ ತಾಯಿಯೇ
ಶ್ರದ್ಧೆಯಿಂದ ಪೂಜಿಪೆ ಸ್ವೀಕರಿಸೇ ||೧||

ಪಾವನ ಚರಿತೆ ಪರಮಪೂಜಿತೇ
ಭಕ್ತಿಯಿಂದ ಪ್ರಾರ್ಥಿಸುವೆ ಆಲಿಸೇ ||೨||

ಭವ ಬಂಧನದಲ್ಲಿ ಸಿಲುಕಿದೆ ನಾನು |
ಎನ್ನ ಸಂಕಷ್ಟವ ನೀಗಿಸೇ ||೩||

ಸೇವೆಯ ಮಾಡುವೆ ತಾಯೇ ವರದೆಯೇ |
ಜ್ಞಾನದ ಮಾರ್ಗವ ತೋರಿಸೇ ||೪||

ನಿನ್ನಯ ಸನ್ನಿಧಿ ಮನದೊಳು ನೆಮ್ಮದಿ
ತಾಯೇ ಮುಕ್ತಿಯ ಕರುಣಿಸೇ ||೫||