ಪಾದಕೆ ಎರಗುವೆ

ರಾಗ – ಹಿಂದುಸ್ಥಾನಿ ಕಾಫಿ
ತಾಳ – ಆದಿತಾಳ

ಸಿಗಂದೂರೇಶ್ವರಿಯೇ
ನಿನ್ನ ಪಾದಕೆ ಎರಗುವೆ ನಾ ||ಪ||
ಪಾದಕ್ಕೆ ಎರಗುವೆನು ನಾ
ನೀನೇ ಗತಿ ಎನ್ನುತ್ತಾ
ನಂಬಿಬಂದಿರುವೆನು ನಾ ||ಅ.ಪ.||

ಬದುಕಿಗೇ ಚೇತನದಾ ನಿಶ್ಚಲ ನಿಲುವಿನಾ
ಮನದ ಮಹಾಶಕ್ತಿಯೇ ತಾಯೇ ||೧||

ಮಹಾ ಪೀಠಾಸನೆಯೇ ಮಹಾ ಮಹಾ ಮಹಿಮೆಯೇ
ಅದ್ಭುತ ಶಕ್ತಿಯೇ ತಾಯೇ ||೨||

ಪರಮ ಪೂಜಿತೆಯೇ ಪಾರಮಾರ್ಥಳೆಯೇ
ಪಾವನಾತ್ಮಳೆಯೇ ತಾಯೇ ||೩||

ನಿಶ್ಚಲ ಭಕ್ತಿಗೇ ಉಜ್ವಲ ಶಕ್ತಿಯೇ
ಮುಕ್ತಿಯ ನೀಯುವಳೇ ತಾಯೇ ||೪||

ಪುಣ್ಯಭೂಮಿಯಾ ಸಿಗಂದೂರಿನಾ
ಶ್ರೀ ಚೌಡೇಶ್ವರಿಯೇ ತಾಯೇ ||೫||