ಶ್ರೀದೇವಿ ಸ್ತುತಿ
ರಾಗ – ಸಂಕ್ರಂದನ ಪ್ರಿಯ ತಾಳ – ಏಕತಾಳ ಸಿಗಂದೂರಾಂಬೆ ನೀ ಆದಿಶಕ್ತಿ ನೀ ಚಾಮುಂಡಾಂಬೆ ನೀ ಪರಾಶಕ್ತಿ ನೀ ಜಗನ್ಮಾತೆ ನೀ ಪ್ರಾಣಶಕ್ತಿ ನೀ ಭಕ್ತಪಾಲೆ ನೀ ವಿಶ್ವರೂಪಿಣೀ ||೧|| ಕಲಾಮೂರ್ತಿನೀ ಕಾತ್ಯಾಯಿನೀ ಕೈಲಾಸಿನೀ ಮಹೇಶ್ವರಿಯು ನೀ ತ್ರೈಲೋಚಿನೀ ಜಯದೇವಿ ನೀ ಶ್ರೀ ಸುನೀತೆ ನೀ ಜಗದೋದ್ಧಾರಿಣೀ ||೨| ಪುಷ್ಪಗಂಧಿನೀ ಕುಂಕುಮಾಂಕಿನೀ ಚಂದ್ರವದನೆ ನೀ ಮಂದಗಮನೆ ನೀ ಸ್ವರ್ಣಮಾಲಿನೀ ಜಯ ಭವಾನಿ ನೀ ಮಹಾಶಕ್ತಿನೀ ಮಂತ್ರ ಸ್ವರೂಪಿಣೀ ||೩|| ಮಹಾಪೀಠೆನೀ ಸತ್ಯಸಂಧೆನೀ ಮಹಾಯೋಗಿನೀ ಮಹಾದೇವಿನೀ ಸೌದಾಮಿನೀ
ಬೇಡುವೆ ಪ್ರಸಾದ ನೀಡೇ
ರಾಗ – ಮೋಹನ ತಾಳ – ಏಕತಾಳ ಸಿಗಂದೂರ ತಾಯೇ | ಎಲ್ಲೆಲ್ಲೂ ನಿನ್ನ ಛಾಯೆ || ಕರುಣಾಳು ಜಯ ವಿಜಯೇ | ಸದಾ ನೆನೆವೆ ತಾಯೇ || ದಯಾಭರಿತೆ ಜಗದೀಶ್ವರೀ ಜಗದಾ ಮಾತಾ ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||ಪ|| ಹಣ್ಣು ಕಾಯಿ ಹೂವಾ ಅರಿಶಿನಾ ಕುಂಕುಮವ ತಂದಿರಿಸಿ ನಮಿಸಿರುವ ಭಕ್ತರಾ ಸಮೂಹಾ ಅರ್ಪಿಸಿ ತನುಮನವ ಕಾಣುವರು ನಿನ್ನ ಮೊಗವ ನಿನ್ನ ನಂಬಿ ಬೇಡುವೇ ಪ್ರಸಾದ ನೀಡೇ ||೧|| ಮಾತೆ ನೀ ಸಾಕಾರ ನೀಡೆನಗೆ
ದೇವಿಯೇ ವಂದಿಸುವೆ
ರಾಗ – ಹಂಸಧ್ವನಿ ತಾಳ – ಆದಿತಾಳ ಮೊರೆಯ ಕೇಳು ಸಿಗಂದೂರ ಜನನೀ ಭಕ್ತರ ಪಾಲಿನಿ ವರಪ್ರದಾಯಿನೀ ||ಪ|| ಭಕ್ತಿಯ ಭಾವದಿ ನಿನ್ನನು ನೆನೆಯಲು ಸಿಗುವುದು ನಮಗೇ ನೆಮ್ಮದಿಯೂ ಶ್ರದ್ಧೆಯಿಂದ ನಿನ್ನನು ಪೂಜೆಯ ಮಾಡಿ ಸಿಗಂದೂರೇಶ್ವರೀ ವಂದಿಸುವೇ ||೧|| ನೈವೇದ್ಯ ಆರ್ಪಿಸಿ ಆರತಿ ಬೆಳಗಿಸಿ ಗಂಟೆಯ ಧ್ವನಿಸೀ ಶಂಖವನಾದಿಸಿ ನಿನ್ನ ಮಂದಿರಕೆ ಪ್ರದಕ್ಷಿಣೆ ಮಾಡಿ ಸಿಗಂದೂರೇಶ್ವರೀ ವಂದಿಸುವೇ ||೨|| ಸಕಲರಿಗೂ ನಿಧಿ ನಿನ್ನಯ ಸನ್ನಿಧಿ ಬರುತಾನಂದದಿ ಭಜಿಪರು ಮುದದಿ ತನುಮನದಿಂದ ನಿನ್ನ ಭಜನೆಯ ಮಾಡಿ ಸಿಗಂದೂರೇಶ್ವರೀ ವಂದಿಸುವೇ
ಅಮ್ಮ ಪಾಲಿಸೆ ನಮ್ಮ
ರಾಗ – ಮಿಶ್ರ ಸಾರಂಗ ತಾಳ – ಆದಿತಾಳ ಎಂದೆಂದಿಗೂ ಅಮ್ಮಾ ನೀ ಪಾಲಿಸೆ ನಮ್ಮಾ ಚೌಡೇಶ್ವರಿಯೇ ನಿನ್ನ ಪ್ರಾರ್ಥಿಸುವಂತಾಯ್ತು ||ಪ|| ಭವದ ಬಲೆಯಲ್ಲಿ ಅಜ್ಞಾನದಿ ಸಿಲುಕಿ ನೊಂದು ಜ್ಞಾನ ಪ್ರದಾಯಿನಿ ನಿನ್ನ ನೆನೆವಂತಾಯ್ತು ||೧|| ಜೀವನದ ಕರ್ತವ್ಯವಾ ನಿರ್ವಹಿಸಲಾಗದೆ ನಿನ್ನಯ ಸನ್ನಿಧಿಗೆ ಬರುವಂತಾಯ್ತು ||೨|| ನಿನ್ನ ಸನ್ನಿಧಿಗೆ ಬಂದು ಅಮ್ಮಾ ಎಂದಾಗ ಕರುಣೆಯ ದೃಷ್ಟಿಯಿಂದ ನೋಡಿದಂತಾಯ್ತು ||೩|| ಕ್ಷಣ ಕ್ಷಣವೂ ನಿನ್ನನ್ನೇ ಸ್ಮರಿಸುತ್ತಲಿರುವಾಗ ನಾಮಾಮೃತದಿಂದ ವರ್ಣಿಸುವಂತಾಯ್ತು ||೪|| ಭಕ್ತಿಯಿಂದ ನಿನ್ನನ್ನೇ ನೆನವಾಗ ತನುಮನದಲ್ಲಿ ಹಿತವೆಂದೆನಿಸುತ್ತಾ ಪರಮಾನಂದವಾಯ್ತು
ಶ್ರೀದೇವಿಯೆ ಜಗನ್ಮತಿ
ರಾಗ – ಕಾಮವರ್ಧಿನಿ ತಾಳ – ಆದಿತಾಳ ಶ್ರೀ ದೇವಿಯೆ ಜಗನ್ಮತಿ ತವಕೀರುತಿ ನಿನ್ನಾ ಸ್ಮರಣಾ ನಮ್ಮಾ ಪ್ರಾಣಾ ವೇದ ವಾದ್ಯಮಯಿ ಸಿಗಂದೂರೇಶ್ವರಿ ನಿನ್ನ ಚರಣಕ್ಕೆ ನಮಿಸುವೆನು ನಾ ||ಪ|| ಭಕ್ತಿ ಸುಧಾಮಯಿ ಪೂಜ್ಯೆ ಪ್ರಧಾನಿ ನೀನೇ ಭವ ಭಯ ಹಾರಿಣೀ ಉಮಾ ಮಹೇಶ್ವರಿ ಕೈಲಾಸವಾಸಿನಿ ದೇವಿ ನೀನೇ ವರ ಪ್ರದಾಯಿನಿ ||೧|| ಮಹಾದೇವಿಯೇ ವಿಶ್ವರೂಪಿಣಿ ಪಾಲನಾಶಕ್ತಿ ಸ್ವರೂಪಿಣಿಯೇ ಸರ್ವಶಕ್ತಿ ಸ್ವರೂಪಿ ಅಖಿಲಾತ್ಮಳೆ ಪರಮಶ್ರೇಷ್ಠಳೆ ಪರಮೇಶ್ವರಿಯೆ ||೨|| ಕಾಮಕ್ರೋಧದ ಭಾವಗಳಡಗಿಸಿ ಭಕ್ತಿಯ ಭಾವವ ಅಳವಡಿಸಿ ಮನದಾನಂದವು ಸ್ಥಿರವಾಗಿರುವ
ಕಾಪಾಡು ತಾಯೇ
ರಾಗ – ಪುನ್ನಾಗವರ್ಳಿ ತಾಳ – ಆದಿತಾಳ ತಾಯೆ ತಾಪ ತಾಳಲಾರೆ ತಾಳೆನೆಂದೇ ಕಾಯೆ ಕಾತ್ಯಾಯನಿಯೆ ಕಾಪಾಡೆಂದೇ ||ಪ|| ಪಾರು ಮಾಡೆ ಪಾವನೆಯೆ ಪಾದಕೆರಗಿದೆ ಪಾಲಿಸೆ ಪಾರಮಾರ್ಥೆ ಪಾಡಿ ಬೇಡುವೇ ||೧|| ಮಾಲೆ ಮಾಲೆ ಮಾಳ್ಪೆ ಅಂಬೆ ಮಾತೆಗೆಂದೇ ಮಹಾದೇವಿ ಮಾರ್ಗವೆಂದೆ ಮಾನ್ಯವೆಂದೇ ||೨|| ಶ್ರೀ ದೇವಿಯೇ ನಿನ್ನ ನಿತ್ಯ ಪೂಜಿಸುವೆ ಸಿಗಂದೂರೇಶ್ವರಿ ನಿನ್ನ ನಿರತ ಸ್ಮರಿಸುವೆ ||೩|| ಬಾರೆ ಬಾರೆ ಭಾರ್ಗವಿಯೇ ಭಾಗ್ಯವತಿಯೇ ಭಾವಿಸೆನ್ನ ಭಾನುಮತಿಯೆ ಭಾಗೀರಥಿಯೇ ||೪|| ದಾರಿ ಕಾಣೆ ದಾಕ್ಷಾಯಣಿಯೆ ದಾರಿ ತೋರಿಸೇ
ಶ್ರೀ ದೇವಿಯೇ ಆರಾಧಿಸುವೆ
ರಾಗ – ಜೀವನ ಪುರಿ ತಾಳ – ಆದಿತಾಳ ಸಿಗಂದೂರೇಶ್ವರಿ ನಿನ್ನ ಆರಾಧಿಸುವೇ ಕರುಣದಿ ಎನ್ನನು ರಕ್ಷಿಸೇ ||ಪ|| ಸತತವು ಧರೆಯಾ ಪೊರೆವ ತಾಯಿಯೇ ಶ್ರದ್ಧೆಯಿಂದ ಪೂಜಿಪೆ ಸ್ವೀಕರಿಸೇ ||೧|| ಪಾವನ ಚರಿತೆ ಪರಮಪೂಜಿತೇ ಭಕ್ತಿಯಿಂದ ಪ್ರಾರ್ಥಿಸುವೆ ಆಲಿಸೇ ||೨|| ಭವ ಬಂಧನದಲ್ಲಿ ಸಿಲುಕಿದೆ ನಾನು | ಎನ್ನ ಸಂಕಷ್ಟವ ನೀಗಿಸೇ ||೩|| ಸೇವೆಯ ಮಾಡುವೆ ತಾಯೇ ವರದೆಯೇ | ಜ್ಞಾನದ ಮಾರ್ಗವ ತೋರಿಸೇ ||೪|| ನಿನ್ನಯ ಸನ್ನಿಧಿ ಮನದೊಳು ನೆಮ್ಮದಿ ತಾಯೇ ಮುಕ್ತಿಯ ಕರುಣಿಸೇ ||೫||
ಪಾದಕೆ ಎರಗುವೆ
ರಾಗ – ಹಿಂದುಸ್ಥಾನಿ ಕಾಫಿ ತಾಳ – ಆದಿತಾಳ ಸಿಗಂದೂರೇಶ್ವರಿಯೇ ನಿನ್ನ ಪಾದಕೆ ಎರಗುವೆ ನಾ ||ಪ|| ಪಾದಕ್ಕೆ ಎರಗುವೆನು ನಾ ನೀನೇ ಗತಿ ಎನ್ನುತ್ತಾ ನಂಬಿಬಂದಿರುವೆನು ನಾ ||ಅ.ಪ.|| ಬದುಕಿಗೇ ಚೇತನದಾ ನಿಶ್ಚಲ ನಿಲುವಿನಾ ಮನದ ಮಹಾಶಕ್ತಿಯೇ ತಾಯೇ ||೧|| ಮಹಾ ಪೀಠಾಸನೆಯೇ ಮಹಾ ಮಹಾ ಮಹಿಮೆಯೇ ಅದ್ಭುತ ಶಕ್ತಿಯೇ ತಾಯೇ ||೨|| ಪರಮ ಪೂಜಿತೆಯೇ ಪಾರಮಾರ್ಥಳೆಯೇ ಪಾವನಾತ್ಮಳೆಯೇ ತಾಯೇ ||೩|| ನಿಶ್ಚಲ ಭಕ್ತಿಗೇ ಉಜ್ವಲ ಶಕ್ತಿಯೇ ಮುಕ್ತಿಯ ನೀಯುವಳೇ ತಾಯೇ ||೪|| ಪುಣ್ಯಭೂಮಿಯಾ ಸಿಗಂದೂರಿನಾ
ಆರತಿ ಬೆಳಗುವೆ
ರಾಗ – ಮಧ್ಯಮಾವತಿ ತಾಳ – ಆದಿತಾಳ ತಾಯೇ ಶರಣು ವಂದೇ ಮನದಿಂ ಮಾಡುವೆ ನಾ ನಿನ್ನ ಸ್ಮರಣೇ || ಸಿಗಂದೂರಾಂಬೇ ಚಾಮುಂಡಾಂಬೇ ತುಪ್ಪದಾರತಿಯ ಬೆಳಗುವೆನು ||ಪ|| ಶಿಲೆಯಾಕಾರೀ ಚೌಡೇಶ್ವರೀ ದೀನ ದಯಾಕರೀ ಜಗದೀಶ್ವರೀ ಮಹಾಮಹೇಶ್ವರೀ ಕರುಣಾಸಾಗರೀ ತುಪ್ಪದಾರತಿಯ ಬೆಳಗುವೆನು ||೧|| ಭವಭಯಹಾರಿಣಿ ಹೇ ವಾಣೀ ಸುಗುಣೆ ಸದ್ಗುಣಿ ಹಿತೈಷಿಣೀ ವಿಶ್ವರೂಪಿಣೀ ಶರ್ವಾಣೀ ತುಪ್ಪದಾರತಿಯ ಬೆಳಗುವೆನು ||೨|| ಭಕ್ತೋದ್ಧಾರಿ ಸಚ್ಚರಿತೇ ಲೋಕ ವಿಹಾರಿ ಸಂಚರಿತೇ ಶಿವೇಸರ್ವೇಶ್ವರಿ ಜಗನ್ಮಾತೇ ತುಪ್ಪದಾರತಿಯ ಬೆಳಗುವೆನು ||೩|| ಕಲಿಯುಗ ಕಲ್ಮಶ ನಾಶಿನಿಯೇ ಮಂತ್ರ
ದಯವನು ಮಾಡೇ
ರಾಗ – ಬಹಾರ್ ತಾಳ – ಆದಿತಾಳ ಸಿಗಂದೂರ ಶ್ರೀ ದೇವಿಯೇ ತಾಯೇ | ದಯವನು ಮಾಡೇ ವರವನು ನೀಡೇ ||ಪ|| ಪರಮ ಭಕ್ತರು ನಿನ್ನ ನೆನೆದು ಬೇಡುವರು ಸಿಗಂದೂರ ಶ್ರೀ ದೇವಿಯೇ ತಾಯೇ ||ಅಪ|| ಸದ್ಭಕ್ತರು ನವ ಪುಷ್ಪವನೇರಿಸಿ | ಅರಿಸಿನ ಕುಂಕುಮವನ್ನೇ ಅರ್ಚಿಸಿ ||೧|| ಫಲಗಳ ತಂದಿಟ್ಟು ನೈವೇದ್ಯವನಾ | ಭಕ್ತಾಗ್ರಣಿಗಳು ಗೈವರು ನಮನಾ ||೨|| ತುಪ್ಪದ ದೀಪವ ಬೆಳಗುತಲಿಹರು | ಪಚ್ಚಕರ್ಪೂರದ ಆರತಿಯೆತ್ತುವರು ||೩|| ವೇದ ಘೋಷವು ಮೊಳಗುತಲಿರಲು | ಮಂಗಳ ವಾದ್ಯವ