ನಾಲ್ಕನೆಯ ಅಧ್ಯಾಯ

ಹೇಳಿದನು ಸುಮೇಧ ಋಷಿಯು ಮಹಿಷನ ವಧೆಯಾದ ಮೇಲೆ ಇಂದ್ರಾದಿ ದೇವತೆಗಳೆಲ್ಲರೂ ಭಕ್ತಿಯಿಂದ ಚಂಡಿಕಾಂಬೆಯ ಸ್ತೋತ್ರವನ್ನು ಮಾಡತೊಡಗಿದರು || ೧ || ಶಕ್ತಿಯುತ ದುರಾತ್ಮ ಮಹಿಷನನ್ನು ಸೈನ್ಯವನ್ನೂ ವಧಿಸಿದ ದೇವಿಗೆ ಇಂದ್ರಾದಿ ದೇವತೆಗಳು ಬಾಗಿ ನಮಿಸಿ ಹರ್ಷದಿ ರೋಮಾಂಚನದಿ ಚಾರುದೇಹದಿ ಸ್ತುತಿ ಮಾಡಿದರು || ೨ || ಸಮಸ್ತ ದೇವತಾದಿಗಳ ಗುಂಪಿನ ಶಕ್ತಿಯ ಸಮೂಹದ ಸಮಷ್ಟಿ ಮೂರ್ತಿಯಾಗಿರುವಂತಹ ಮಹಾದೇವಿಯ ಆತ್ಮಶಕ್ತಿಯು ಜಗತ್ತನ್ನೆಲ್ಲಾ ವ್ಯಾಪಿಸಿರುವುದು ಸಕಲ ದೇವತೆಗಳಿಂದಲೂ ಹಾಗೂ ಮಹರ್ಷಿಗಳಿಂದಲೂ ಪೂಜ್ಯಳಾಗಿರುವ ಅಂಬಿಕೆಯನ್ನು ಭಕ್ತಿಯಿಂದ ನಮಸ್ಕರಿಸುವೆವು ಅಂಬಿಕೆ ಶುಭವನ್ನುಂಟು ಮಾಡಲಿ

ಮೂರನೆಯ ಅಧ್ಯಾಯ

ಋಷಿಯೆಂದ ಚಿಕ್ಷುರನೆಂಬುವ ಸೇನಾಪತಿ ಮಹಾಸುರನು ತನ್ನ ಸೈನ್ಯ ನಾಶವಾಗುವುದನ್ನು ಕಂಡು ಕೋಪದಿಂದ ತಾನೇ ದೇವಿಯೊಡನೆ ಯುದ್ಧಕ್ಕೆ ಬಂದನು || ೧ || ಮೇರುಗಿರಿ ಶಿಖರದ ಮೇಲೆ ಮೇಘವು ಧಾರಾಕಾರದ ಮಳೆಯ ಸುರಿಸುವಂತೆ ಚಿಕ್ಷುರನು ಆ ಯುದ್ಧದಲ್ಲಿ ದೇವಿಯ ಮೇಲೆ ಬಾಣಗಳ ಮಳೆಯನ್ನೇ ಸುರಿಸಿದನು || ೨ || ದೇವಿಯು ಅನಾಯಾಸವಾಗಿ ಚಿಕ್ಷುರ ಬಿಟ್ಟ ಬಾಣರಾಶಿಯನ್ನು ಕತ್ತರಿಸಿ ಪ್ರತಿ ಬಾಣಗಳಿಂದ ಅವನ ಕುದುರೆಗಳ ಮತ್ತು ರಥದ ಸಾರಥಿಯನ್ನು ಸಂಹರಿಸಿದಳು || ೩ || ದೇವಿಯು ಕ್ಷಣದಲ್ಲಿ ಧನುಸ್ಸನ್ನು ಅತ್ಯುನ್ನತವಾಗಿರುವ

ಎರಡನೇ ಅಧ್ಯಾಯ

ಋಷಿಯೆಂದ ಹಿಂದೆ ಇಂದ್ರನು ದೇವತೆಗಳಿಗೆ ರಾಜನಾದ ಮಹಿಷಾಸುರನು ದೈತ್ಯರ ಪ್ರಭುವಾದ ಆ ಸಮಯ ದೇವ-ದಾನವರಲ್ಲಿ ಸಂಪೂರ್ಣ ನೂರು ವರ್ಷ ಯುದ್ಧವಾಯ್ತು || ೧ || ಮಹಾವೀರ್ಯ ಅಸುರರಿಂದ ಸೋತಿತು ದೇವತೆಗಳ ಸೈನ್ಯ ಸಕಲ ದೇವತೆಗಳನ್ನೂ ಗೆದ್ದು ಅಸುರರ ಪ್ರಭು ಮಹಿಷಾಸುರನು ಇಂದ್ರ ಪದವಿಯನ್ನು ಏರಿದನು || ೨ || ವಿಷ್ಣುವಿನ ನಾಭಿ ಕಮಲದಿಂದ ಹುಟ್ಟಿದ ಬ್ರಹ್ಮನ ನಾಯಕತ್ವದಲ್ಲಿ ಸೋತ ದೇವತೆಗಳೆಲ್ಲರು ಸೇರಿ ಮಹಾವಿಷ್ಣು ಮತ್ತು ಮಹೇಶ್ವರನು ಇಬ್ಬರೂ ಇರುವ ಸ್ಥಳಕ್ಕೆ ಹೋದರು || ೩ || ದೇವತೆಗಳು

ಒಂದನೇ ಅಧ್ಯಾಯ

ದೇವೀ ಮಹಾತ್ಮೆಯ ಅದ್ಭುತ ಚರಿತೆಯ ಹೇಳಿದ ಸುಮೇಧ ಋಷಿ ಸುರಥಗೆ ಸಮಾಧಿಗೆ ಹೇ ಜಗಜ್ಜನನೀ ನಿನ್ನ ಮಹಿಮೆಯ ಪಠಣ ಮಾಡಿದರೆ ಪುಣ್ಯವು ಶ್ರವಣ ಮಾಡಿದರೂ ಪುಣ್ಯವು || ಪ || ಮುನಿವರ ಮಾರ್ಕಂಡೇಯನು ಕ್ರೌಷ್ಟುಕಿಗಳಿಗೆ ಹೇಳಿದನು ಸೂರ್ಯದೇವನ ಪುತ್ರನಾಗಿರುವ ಮಹಾಭಾಗ್ಯವಂತನು ಆದ ಸಾವರ್ಣಿ ಮನುವಿನ ಕಥೆಯನ್ನು || ೧ || ಎಂಟನೆಯ ಮನು ಸಾವರ್ಣಿಯು ಜಗದಂಬೆ ಮಹಾಮಾಯೆಯ ಕೃಪಾಕಟಾಕ್ಷದ ಪ್ರಭಾವದಿಂದ ಮನ್ವಂತರಾಧಿಪ ಪದವಿಗೆ ಬಂದ ವಿವರವ ಹೇಳುವೆನು || ೨ || ಹಿಂದೆ ಸ್ವಾರೋಚಿಷವೆಂಬ ಮನ್ವಂತರದಲ್ಲಿ ಚೈತ್ರರಾಜನ

ಶ್ರೀ ಶಂಕರರು (ಕಿರು ನಾಟಕ)

ದೃಶ್ಯ ೧ : ಕೈಲಾಸ (ಕರ್ಮಭೂಮಿಯಾಗಿರುವ ಭರತ ಖಂಡದಲ್ಲಿ ವೈದಿಕ ಧರ್ಮವು ಶಿಥಿಲವಾಗಿದ್ದ ಒಂದು ಸಮಯದಲ್ಲಿ ಇಂದ್ರಾದಿ ದೇವತೆಗಳು ಋಷಿ ಮುನಿಗಳು ಕೈಲಾಸಕ್ಕೆ ಬಂದು ಶಿವನಿಗೆ ನಮಸ್ಕರಿಸಿ ಪ್ರಾರ್ಥಿಸುತ್ತಾರೆ) ಕೈಲಾಸದಲ್ಲಿ ಶಿವ ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ, ನಂದಿ, ಭೃಂಗಿ ಮತ್ತು ಗಣಗಳು ಇರುತ್ತಾರೆ. ಇಂದ್ರಾದಿ ದೇವತೆಗಳೆಲ್ಲರು :  ಹೇ ಶಿವ ಶಂಕರ ಓಂಕಾರೇಶ್ವರ ಶಂಭೋ ಶಂಕರ ಪಾಹಿಮಾಂ ಹರ ಹರ ಶಂಕರ ಶ್ರೀ ಗೌರೀವರ ಹೇ ಜಗದೀಶ್ವರಾ ರಕ್ಷಮಾಂ ಹೇ ಶಿವನೇ ಸರ್ವಜ್ಞನೇ ಸರ್ವ ಶಕ್ತಾ ಸರ್ವ

ಶ್ರೀ ವಿಷ್ಣು ಅವತಾರಗಳು

ರಾಗ : ಹಂಸಧ್ವನಿ  ತಾಳ : ಆದಿತಾಳ ನಮಿಸುವೇ ಹರಿ ಸ್ತುತಿಸುವೇ ನಾರಾಯಣನೆಂಬೋ ನಾಮಾಮೃತವನು ನಮಿಸುವೇ ಹರಿ ಸ್ತುತಿಸುವೇ || ಪ || ಹೇ ಭಗವಂತ ನಿನ್ನ ಚರಣ ಕಮಲಗಳನ್ನು ನಮಿಸಿ ನಾ ಸ್ತುತಿಸುವೆ ನಿನ್ನಯ ಮಹಿಮೆಗಳ ಜಗದೋದ್ಧಾರಕ್ಕೆ ದಶಾವತಾರವ ತಾಳಿದೆ ನೀನೇ ಶ್ರೀಮನ್ಮಹಾವಿಷ್ಣು ನಮಿಸುವೇ ಹರಿ ಸ್ತುತಿಸುವೇ || ಅ.ಪ || ಮತ್ಸ್ಯಾವತಾರ ಬ್ರಹ್ಮದೇವನಿಗೊಂದು ಹಗಲು ಮುಗಿದ ಮೇಲೆ ಗಾಢ ನಿದ್ರೆಯಲ್ಲಿ ರಾತ್ರಿ ಮಲಗಿದನು ಬ್ರಹ್ಮದೇವ ಬ್ರಹ್ಮನ ಉಸಿರಿನಿಂದ ಹೊರಬಂದ ವೇದಗಳ ಹಯಗ್ರೀವನೆಂಬ ಕಪಟ ರಾಕ್ಷಸ

ಗುರುಚರಿತ್ರೆ

ರಾಗ : ಮೋಹನ  ತಾಳ : ಆದಿತಾಳ (ತ್ರಿಶ್ರ ಗತಿ) ಗುರುದೇವ ಗುರುದೇವ ನಿನ್ನಯ ಚರಿತೆಯನು ಪಾರಾಯಣ ಮಾಡಿದರೆ ಜನ್ಮಾಂತರದ ಪಾಪಗಳೆಲ್ಲಾ ನಶಿಸಿ ಹೋಗುವುದು ಗುರುದೇವ ಗುರುದೇವ          || ಪ || ಶ್ರದ್ಧಾ ಭಕ್ತಿಯಲಿ ನಿನ್ನ ಆರಾಧಿಸುವರಿಗೆ ತೋರುವೆ ನೀ ದಯವ ಕರುಣಾ ಸಾಗರನೆ ಗುರುವೇ ನಿನ್ನ ಸ್ಮರಣೆ ನಿರತವು ಮನದಲ್ಲಿ ನೆನವ ಭಕ್ತರು ಪಡೆವರು ಜೀವನ ಸಾರ್ಥಕವ ಗುರುದೇವ ಗುರುದೇವ          || ೧ ||

ಭಗವತ್ಪಾದ ಶ್ರೀ ಶಂಕರಾಚಾರ್ಯರು

ರಾಗ : ಶಿವರಂಜಿನಿ ತಾಳ : ಏಕ ಅವತರಿಸಿದ ಗುರು ಶಿವಸ್ವರೂಪಿಯು ಅಪಾರಮಹಿಮಗುರು ಸರ್ವರಪರಮಗುರು || ಪ || ಶ್ರೀಗುರುವರ್ಯರ ದಿವ್ಯಚರಿತೆಯು ಪಠಣವು ಪುಣ್ಯವು ಶ್ರವಣವು ಪುಣ್ಯವು || ಅ.ಪ || ಕರ್ಮಭೂಮಿಯಾದ ಭರತಖಂಡದಲಿ ವೈದಿಕ ಧರ್ಮವು ಶಿಥಿಲವಾದಾಗ ಇಂದ್ರಾದಿದೇವತೆಗಳು ಋಷಿಮುನಿಗಳು ಕೈಲಾಸಕ್ಕೆ ಬಂದು ನಮಿಸಿ ಪ್ರಾರ್ಥಿಸಿದರು ಶಿವನನ್ನು || ೧ || ಶಿವನೆ ಭೂಲೋಕವು ಶಾಸ್ತ್ರ ಸನ್ಮಾರ್ಗವ ದೂಷಿಸುತಿರುವ ನಾಸ್ತಿಕಾಧಮರಾದ ಪಾಖಂಡಿಗಳಿಂದ ತುಂಬಿಹೋಗಿದೆ ಆತಂಕವಾಗಿದೆ ಶಿವನೇ ಕಾಪಾಡೋ ಜಗದ್ರಕ್ಷಕನೇ || ೨ || ಶ್ರೇಯಸ್ಕರವಾದ ವೈದಿಕ

ದೇವ್ಯಾಪರಾಧ ಕ್ಷಮಾಪನ ಸ್ತೋತ್ರ

ದೇವೀ ನಾ ನಿನ್ನ ಮಂತ್ರಯಂತ್ರದ ಸ್ತುತಿಯನು ಆವಾಹನ ಧ್ಯಾನ ಮುದ್ರೆ ವಿಲಾಪಗಳ ಅರಿಯೆನು ಎಲ್ಲಾ ಕ್ಲೇಶಗಳನ್ನು ಪರಿಹರಿಸುವ ನಿನ್ನನು ಮೊರೆ ಹೋಗುವುದು ಮಾತ್ರ ನಾ ಬಲ್ಲೆನು || ೧ || ಜಗದೋದ್ಧಾರಿಣಿ ಕಲ್ಯಾಣಿ ನಿನ್ನ ಪೂಜಾ ವಿಧಿಯನರಿಯೆ ಧನದ ಅಭಾವದ ಜೊತೆಗೆ ಆವರಿಸಿದೆ ಆಲಸ್ಯದ ಮಾಯೆ ನಿನ್ನ ಚರಣ ಸೇವೆಯ ಕೊರತೆಯ ಕ್ಷಮಿಸಿ ನೀ ಕಾಯೇ ದುರ್ಗುಣ ಮಗ ಜನಿಸಬಹುದು ತಾಯಿ ಎಂದಿಗೂ ಸದ್ಗುಣಿಯೇ || ೨ || ಮಾತೇ ಭೂಮಂಡಲದಲ್ಲಿ ನಿನ್ನಯ ಪುತ್ರರು ಹಲವರು ಅವರೆಲ್ಲಾ

ಸೌಂದರ್ಯಲಹರಿ ಗೀತೆ

ಹೇ ದೇವಿ ಜಗಜ್ಜನನಿ ಜಗನ್ನಿರ್ಮಾಣಶಕ್ತಿ ಭಗವತಿ ದೇವನಾದ ಶಿವನು ನಿನ್ನೊಡಗೂಡಿದರೆ ಶಕ್ತಿಸ್ವರೂಪಿ ಪರಮಪೂಜ್ಯಳೇ ನಿನ್ನ ಹರಿಹರಾದಿಬ್ರಹ್ಮ ಸ್ತುತಿಪರು ಜನ್ಮಾಂತರದ ಪುಣ್ಯವನು ಪಡೆದಿರುವ ಭಕ್ತರು ಪೂಜಿಸುವರು || ೧ || ಹೇ ಭಗವತಿಯೆ ನಿನ್ನ ಮಹಿಮೆಯೇನೆಂದು ಹೇಳಲಿ ಶಿವೇ ಜಗನ್ಮಾತೆ ನಿನ್ನ ಪಾದಪದ್ಮಗಳಲ್ಲಿ ಇರುವಂಥಹ ಧೂಳಿಕಣವಶೇಖರಿಸಿ ರಾಶಿಯನು ಮಾಡುತ್ತ ಬ್ರಹ್ಮನು ಈ ಪ್ರಪಂಚವೆಂಬ ಬ್ರಹ್ಮಾಂಡವ ಸೃಷ್ಠಿ ಮಾಡಿರುವನು ಹೇ ಶಿವೆ ಭಗವತಿಯೇ ಪ್ರಪಂಚಾಕಾರದ ಧೂಳಿಕಣವ ಶೇಷರೂಪದಲಿ ವಿಷ್ಣು ಸಹಸ್ರಾರು ಹೆಡೆಯಲಿ ಹೊತ್ತಿರುವನು ಹೊತ್ತಿರುವ ಪ್ರಪಂಚವೆಂಬ ಈ ಧೂಳಿಕಣವ ಹರನು