ಏಳನೆಯ ಅಧ್ಯಾಯ
ಋಷಿಯೆಂದ ಚಂಡ ಮುಂಡರು
ದೈತ್ಯರೂ ಶುಂಭನಾಜ್ಞೆ ಪಡೆದು
ಚತುರಂಗ ಬಲದ ಸೈನ್ಯದ ಸಹಿತ
ತಮ್ಮ ಆಯುಧಗಳನ್ನು ಎತ್ತಿ ಹಿಡಿದು
ಧಾವಿಸಿದರು ದೇವಿಯು ಇರುವಲ್ಲಿಗೆ || ೧ ||
ಸುವರ್ಣಮಯವಾಗಿರುವಂತ
ಹಿಮಾಲಯ ಪರ್ವತ ಶಿಖರದಲ್ಲಿ
ಸಿಂಹವಾಹನವನ್ನೇರಿ ಕುಳಿತ
ಮಂದಹಾಸವನ್ನು ಬೀರುತ್ತಿರುವ
ದೇವಿಯನ್ನು ಕಂಡರು ಅವರೆಲ್ಲರು || ೨ ||
ದೇವಿಯನ್ನೆತ್ತಿಕೊಂಡು ಹೋಗಲು
ಚಂಡ ಮುಂಡರು ಮತ್ತು ಅಸುರರು
ಹೆದೆಯೇರಿಸಿದ ಬಿಲ್ಲನ್ನು ಕತ್ತಿಯನ್ನು
ಮತ್ತು ಮುಂತಾದ ಆಯುಧಗಳನ್ನು
ಹಿಡಿದು ದೇವಿಯ ಬಳಿಗೆ ಹೋದರು || ೩ ||
ಅಸುರರು ಮುತ್ತಿಗೆ ಹಾಕಿದಾಗ
ಅಂಬಿಕೆಯು ಅಸುರರ ಮೇಲೆ
ಅತ್ಯಂತ ಕೋಪವನ್ನು ತಾಳಿದಳು
ಕೋಪದಿಂದ ದೇವಿಯ ವದನವು
ಕಪ್ಪು ವರ್ಣವಾಯಿತು ಮಸಿಯಂತೆ || ೪ ||
ಹುಬ್ಬನ್ನು ಗಂಟಿಕ್ಕಿದ ದೇವಿಯ
ವಿಶಾಲವಾದ ಹಣೆಯಿಂದ
ಕತ್ತಿಯನ್ನು ಪಾಶವನ್ನು ಧರಿಸಿರುವ
ಕರಾಳ ವದನೆಯಾಗಿರುವಂತ
ಕಾಳಿಯು ಕ್ಷಣದಲ್ಲಿ ಹೊರಬಂದಳು || ೫ ||
ವಿಚಿತ್ರ ಖಟ್ವಾಂಗವ ಧರಿಸಿ
ಕಾಳಿಯು ನರರ ರುಂಡಗಳ
ಮಾಲೆಯಿಂದ ಭೂಷಿತಳಾಗಿ
ಚಿರತೆ ಚರ್ಮ ಧರಿಸಿ ಶುಷ್ಕವಾಗಿ
ಅತ್ಯಂತ ಭಯಂಕರಳಾಗಿದ್ದಳು || ೬ ||
ಅತ್ಯಂತ ವಿಸ್ತಾರ ಬಾಯಿಯುಳ್ಳ
ನಾಲಿಗೆಯನ್ನು ಅಲ್ಲಾಡಿಸುತ್ತ
ಭೀಕರಳಾಗಿ ಇರುವಂತವಳು
ಗುಳಿ ಇಳಿದ ಕೆಂಪು ಕಣ್ಣುಳ್ಳವಳು
ಘರ್ಜಿಸಿ ದಿಕ್ಕುಗಳ ಮೊಳಗಿಸಿದಳು || ೭ ||
ಕಾಳಿದೇವಿಯು ತನ್ನೆದುರಿಗೆ
ಬಂದಿರುವ ಮಹಾಸುರರನ್ನು
ವೇಗದಿಂದ ವಧೆಯ ಮಾಡುತ್ತ
ದೇವ ಶತ್ರು ಸೈನ್ಯದ ಮಧ್ಯಕ್ಕೆ ನುಗ್ಗಿ
ಸೇನಾ ಬಲವನ್ನೆಲ್ಲ ತಿನ್ನುತ್ತಿದ್ದಳು || ೮ ||
ಕಾಳಿಯು ಪಾರ್ಶ್ವ ರಕ್ಷಕರನ್ನು
ಅಂಕುಶಧಾರಿಗಳನ್ನು ಮತ್ತು
ಘಂಟೆಗಳ ಸಹಿತ ಆನೆಗಳನ್ನು
ಒಂದೇ ಕೈಯಿಂದ ತೆಗೆದುಕೊಂಡು
ಬಾಯೊಳಗೆ ಹಾಕಿ ನುಂಗಿದಳು || ೯ ||
ನಂತರ ಕಾಳಿಕಾ ದೇವಿಯು
ಕುದುರೆಗಳೊಡನೆ ಯೋಧರನ್ನು
ಸಾರಥಿಗಳೊಡನೆ ರಥಗಳನ್ನೂ
ಬಾಯಲ್ಲಿಟ್ಟುಕೊಂಡು ಹಲ್ಲುಗಳಿಂದ
ಭಯಂಕರವಾಗಿ ಅಗಿಯುತ್ತಿದ್ದಳು || ೧೦ ||
ಕಾಳಿ ದೇವಿಯು ಅಸುರ ಸೈನ್ಯದ
ಒಬ್ಬನ ಕೂದಲನ್ನು ಹಿಡಿದು ಜಗ್ಗಿ
ಮತ್ತೊಬ್ಬನ ಕತ್ತನ್ನು ಹಿಡಿದೆಳೆದಳು
ಇನ್ನೊಬ್ಬನನ್ನು ಕಾಲಿನಿಂದ ತುಳಿದು
ಮಗದೊಬ್ಬನ ಎದೆಗೆ ಗುದ್ದಿಕೊಂದಳು || ೧೧ ||
ರಾಕ್ಷಸರೆಲ್ಲಾ ಪ್ರಯೋಗಿಸಿದ
ಶಸ್ತ್ರಗಳನ್ನು ಮಹಾಸ್ತ್ರಗಳನ್ನು
ಕಾಳೀ ದೇವಿಯು ಕೋಪದಿಂದ
ಬಾಯಿಯಿಂದಲೇ ಕಚ್ಚಿ ಹಿಡಿದು
ಹಲ್ಲುಗಳಿಂದ ಪುಡಿ ಮಾಡಿದಳು || ೧೨ ||
ಬಲಿಷ್ಠರಾದ ನೀಚ ಅಸುರರ
ಸೈನ್ಯದ ಕೆಲವರನ್ನು ಮರ್ದಿಸಿದಳು
ಕೆಲವರನ್ನು ತಿಂದು ಹಾಕಿದಳು
ಇನ್ನು ಕೆಲವರನ್ನು ಪ್ರಹರಿಸುತ್ತ
ಸೈನ್ಯವ ಸಂಹರಿಸಲು ತೊಡಗಿದಳು || ೧೩ ||
ಕೆಲವರು ಖಟ್ವಾಂಗದಿಂದ
ಹೊಡೆಯಲ್ಪಟ್ಟು ಅಲ್ಲೇ ಬಿದ್ದು ಸತ್ತರು
ಕತ್ತಿಯಿಂದ ಸತ್ತರು ಅನೇಕರು
ಕೆಲವರು ಕೋರೆ ಹಲ್ಲುಗಳಿಂದ
ಚುಚ್ಚಲ್ಪಟ್ಟು ಅಲ್ಲೇ ನಾಶವಾದರು || ೧೪ ||
ಸ್ವಲ್ಪ ಹೊತ್ತಿನಲ್ಲಿಯೇ ರಾಕ್ಷಸರ
ಭಾರಿಯಾಗಿರುವ ಸೈನ್ಯವೆಲ್ಲಾ
ಕೆಡವಲ್ಪಟ್ಟಿದ್ದನ್ನು ಕಂಡ ಚಂಡನು
ಅತ್ಯಂತ ಭಯಂಕರಳಾಗಿರುವ
ಆ ಕಾಳಿಯ ಬಳಿಗೆ ನುಗ್ಗಿದನು || ೧೫ ||
ಮಹಾಸುರನಾದ ಚಂಡನು
ಬಾಣಗಳ ಮಳೆಯನ್ನು ಸುರಿಸಿ
ಮುಂಡನು ಸಹಸ್ರ ಚಕ್ರಗಳ ಎಸೆದು
ಭಯಂಕರವಾದ ಕಣ್ಣುಗಳುಳ್ಳ
ಆ ಕಾಳಿ ದೇವಿಯನ್ನು ಮುಚ್ಚಿದರು || ೧೬ ||
ಕಾಳಿಯ ಮೇಲೆ ಮಹಾಸುರನು
ಎಸೆದಿರುವ ಅನೇಕ ಚಕ್ರಗಳು
ಕಾಳಿಯ ಮುಖ ಪ್ರವೇಶಿಸುವಾಗ
ಸೂರ್ಯನ ಅನೇಕ ಬಿಂಬಗಳು
ಮೋಡಗಳ ಒಳಗೆ ಹೊಕ್ಕಂತಿದ್ದವು || ೧೭ ||
ಭಯಂಕರ ಘರ್ಜನ ಶಕ್ತಿಯುಳ್ಳ
ನೋಡಲಾಗದ ಕರಾಳ ಮುಖವು
ಭೀಕರ ಕಾಂತಿಯ ಹಲ್ಲುಗಳುಳ್ಳ
ಕಾಳಿಯು ಅತ್ಯಂತ ಕೋಪದಿಂದ
ಭಯಂಕರ ಅಟ್ಟಹಾಸ ಮಾಡಿದಳು || ೧೮ ||
ಕಾಳಿ ದೇವಿಯು ಕೋಪದಿಂದ
ಮಹಾ ಖಡ್ಗವ ಹಿಡಿದುಕೊಂಡು
ಚಂಡಾಸುರನ ಬಳಿಗೆ ಧಾವಿಸಿ
ಅವನ ಜುಟ್ಟನ್ನು ಹಿಡಿದು ಬಗ್ಗಿಸಿ
ಖಡ್ಗದಿಂದ ಶಿರವ ಕತ್ತರಿಸಿದಳು || ೧೯ ||
ಕಾಳಿ ದೇವಿಯಿಂದ ಚಂಡನ
ಶಿರಶ್ಛೇದನವಾಗುವಾಗ
ಭಯಂಕರ ಘರ್ಜನೆ ಮಾಡಿದನು
ಆ ಘರ್ಜನೆಯ ದೊಡ್ಡ ಧ್ವನಿಯಿಂದ
ಮೂರು ಲೋಕಗಳೂ ಬೆದರಿದವು || ೨೦ ||
ಚಂಡನು ವಧೆಯಾದದ್ದು ಕಂಡು
ಮುಂಡಾಸುರನು ಕೋಪದಿಂದ
ಕಾಳಿ ದೇವಿಯ ಬಳಿಗೆ ನುಗ್ಗಿದ
ಕಾಳಿಯು ರೋಷದಿಂದ ಅವನನ್ನು
ಖಡ್ಗದಿಂದಲೆ ಹೊಡೆದು ಕೊಂದಳು || ೨೧ ||
ಮಹಾವೀರ್ಯಶಾಲಿಗಳಾದ
ಚಂಡನನ್ನು ಮತ್ತು ಮುಂಡನನ್ನು
ಕಾಳಿಯು ವಧೆ ಮಾಡಿದ್ದನ್ನು ಕಂಡು
ಉಳಿದ ಸೈನ್ಯವೆಲ್ಲ ಭಯದಿಂದ
ದಿಕ್ಕು ದಿಕ್ಕುಗಳಿಗೆ ಓಡಿ ಹೋಯಿತು || ೨೨ ||
ಚಂಡ ಮುಂಡರ ಶಿರಗಳನ್ನು
ಹಿಡಿದುಕೊಂಡು ಕಾಳಿದೇವಿಯು
ಚಂಡಿಕಾಂಬೆಯ ಬಳಿಗೆ ಬಂದು
ಪ್ರಚಂಡವಾದ ಅಟ್ಟಹಾಸದಿಂದ
ಒಡಗೂಡಿದ ಮಾತಲ್ಲಿ ಹೇಳಿದಳು || ೨೩ ||
ಯುದ್ಧ ಯಜ್ಞದಲ್ಲಿ ಬಲಿಕೊಟ್ಟಂತಹ
ಮಹಾಪಶು ಚಂಡ ಮುಂಡರನ್ನು
ನಾನೀಗ ನಿನ್ನ ಬಳಿ ತಂದಿರುವೆ
ಆ ಶುಂಭ ನಿಶುಂಭಾಸುರರ
ಸಂಹಾರವನ್ನು ನೀನೇ ಮಾಡು || ೨೪ ||
ಋಷಿಯೆಂದ ಮಹಾಸುರರಾದ
ಚಂಡ ಮುಂಡರನ್ನು ಸಂಹರಿಸಿ
ಶಿರಗಳ ತಂದ ಕಾಳಿಯ ಕಂಡು
ಕಲ್ಯಾಣರೂಪಿ ಚಂಡಿಕಾಂಬೆಯು
ಮಧುರವಾದ ಮಾತನ್ನಾಡಿದಳು || ೨೫ ||
ಶ್ರೀದೇವಿಯೆಂದಳು ಕಾಳಿಗೆ
ಚಂಡ ಮುಂಡರ ಸಂಹರಿಸಿ
ಶಿರಗಳ ನನ್ನ ಬಳಿ ತಂದಿರುವ
ನೀನು ಇನ್ನು ಮುಂದೆ ಲೋಕದಲ್ಲಿ
ಚಾಮುಂಡಿ ಎಂದು ಖ್ಯಾತಿ ಹೊಂದುವೆ || ೨೬ ||
ಋಷಿಯೆಂದ ಚಂಡ ಮುಂಡರು
ದೈತ್ಯರೂ ಶುಂಭನಾಜ್ಞೆ ಪಡೆದು
ಚತುರಂಗ ಬಲದ ಸೈನ್ಯದ ಸಹಿತ
ತಮ್ಮ ಆಯುಧಗಳನ್ನು ಎತ್ತಿ ಹಿಡಿದು
ಧಾವಿಸಿದರು ದೇವಿಯು ಇರುವಲ್ಲಿಗೆ || ೧ ||
ಸುವರ್ಣಮಯವಾಗಿರುವಂತ
ಹಿಮಾಲಯ ಪರ್ವತ ಶಿಖರದಲ್ಲಿ
ಸಿಂಹವಾಹನವನ್ನೇರಿ ಕುಳಿತ
ಮಂದಹಾಸವನ್ನು ಬೀರುತ್ತಿರುವ
ದೇವಿಯನ್ನು ಕಂಡರು ಅವರೆಲ್ಲರು || ೨ ||
ದೇವಿಯನ್ನೆತ್ತಿಕೊಂಡು ಹೋಗಲು
ಚಂಡ ಮುಂಡರು ಮತ್ತು ಅಸುರರು
ಹೆದೆಯೇರಿಸಿದ ಬಿಲ್ಲನ್ನು ಕತ್ತಿಯನ್ನು
ಮತ್ತು ಮುಂತಾದ ಆಯುಧಗಳನ್ನು
ಹಿಡಿದು ದೇವಿಯ ಬಳಿಗೆ ಹೋದರು || ೩ ||
ಅಸುರರು ಮುತ್ತಿಗೆ ಹಾಕಿದಾಗ
ಅಂಬಿಕೆಯು ಅಸುರರ ಮೇಲೆ
ಅತ್ಯಂತ ಕೋಪವನ್ನು ತಾಳಿದಳು
ಕೋಪದಿಂದ ದೇವಿಯ ವದನವು
ಕಪ್ಪು ವರ್ಣವಾಯಿತು ಮಸಿಯಂತೆ || ೪ ||
ಹುಬ್ಬನ್ನು ಗಂಟಿಕ್ಕಿದ ದೇವಿಯ
ವಿಶಾಲವಾದ ಹಣೆಯಿಂದ
ಕತ್ತಿಯನ್ನು ಪಾಶವನ್ನು ಧರಿಸಿರುವ
ಕರಾಳ ವದನೆಯಾಗಿರುವಂತ
ಕಾಳಿಯು ಕ್ಷಣದಲ್ಲಿ ಹೊರಬಂದಳು || ೫ ||
ವಿಚಿತ್ರ ಖಟ್ವಾಂಗವ ಧರಿಸಿ
ಕಾಳಿಯು ನರರ ರುಂಡಗಳ
ಮಾಲೆಯಿಂದ ಭೂಷಿತಳಾಗಿ
ಚಿರತೆ ಚರ್ಮ ಧರಿಸಿ ಶುಷ್ಕವಾಗಿ
ಅತ್ಯಂತ ಭಯಂಕರಳಾಗಿದ್ದಳು || ೬ ||
ಅತ್ಯಂತ ವಿಸ್ತಾರ ಬಾಯಿಯುಳ್ಳ
ನಾಲಿಗೆಯನ್ನು ಅಲ್ಲಾಡಿಸುತ್ತ
ಭೀಕರಳಾಗಿ ಇರುವಂತವಳು
ಗುಳಿ ಇಳಿದ ಕೆಂಪು ಕಣ್ಣುಳ್ಳವಳು
ಘರ್ಜಿಸಿ ದಿಕ್ಕುಗಳ ಮೊಳಗಿಸಿದಳು || ೭ ||
ಕಾಳಿದೇವಿಯು ತನ್ನೆದುರಿಗೆ
ಬಂದಿರುವ ಮಹಾಸುರರನ್ನು
ವೇಗದಿಂದ ವಧೆಯ ಮಾಡುತ್ತ
ದೇವ ಶತ್ರು ಸೈನ್ಯದ ಮಧ್ಯಕ್ಕೆ ನುಗ್ಗಿ
ಸೇನಾ ಬಲವನ್ನೆಲ್ಲ ತಿನ್ನುತ್ತಿದ್ದಳು || ೮ ||
ಕಾಳಿಯು ಪಾರ್ಶ್ವ ರಕ್ಷಕರನ್ನು
ಅಂಕುಶಧಾರಿಗಳನ್ನು ಮತ್ತು
ಘಂಟೆಗಳ ಸಹಿತ ಆನೆಗಳನ್ನು
ಒಂದೇ ಕೈಯಿಂದ ತೆಗೆದುಕೊಂಡು
ಬಾಯೊಳಗೆ ಹಾಕಿ ನುಂಗಿದಳು || ೯ ||
ನಂತರ ಕಾಳಿಕಾ ದೇವಿಯು
ಕುದುರೆಗಳೊಡನೆ ಯೋಧರನ್ನು
ಸಾರಥಿಗಳೊಡನೆ ರಥಗಳನ್ನೂ
ಬಾಯಲ್ಲಿಟ್ಟುಕೊಂಡು ಹಲ್ಲುಗಳಿಂದ
ಭಯಂಕರವಾಗಿ ಅಗಿಯುತ್ತಿದ್ದಳು || ೧೦ ||
ಕಾಳಿ ದೇವಿಯು ಅಸುರ ಸೈನ್ಯದ
ಒಬ್ಬನ ಕೂದಲನ್ನು ಹಿಡಿದು ಜಗ್ಗಿ
ಮತ್ತೊಬ್ಬನ ಕತ್ತನು ಹಿಡಿದೆಳೆದಳು
ಇನ್ನೊಬ್ಬನನ್ನು ಕಾಲಿನಿಂದ ತುಳಿದು
ಮಗದೊಬ್ಬನ ಎದೆಗೆ ಗುದ್ದಿಕೊಂದಳು || ೧೧ ||
ರಾಕ್ಷಸರೆಲ್ಲಾ ಪ್ರಯೋಗಿಸಿದ
ಶಸ್ತ್ರಗಳನ್ನು ಮಹಾಸ್ತ್ರಗಳನ್ನು
ಕಾಳೀ ದೇವಿಯು ಕೋಪದಿಂದ
ಬಾಯಿಯಿಂದಲೇ ಕಚ್ಚಿ ಹಿಡಿದು
ಹಲ್ಲುಗಳಿಂದ ಪುಡಿ ಮಾಡಿದಳು || ೧೨ ||
ಬಲಿಷ್ಠರಾದ ನೀಚ ಅಸುರರ
ಸೈನ್ಯದ ಕೆಲವರನ್ನು ಮರ್ದಿಸಿದಳು
ಕೆಲವರನ್ನು ತಿಂದು ಹಾಕಿದಳು
ಇನ್ನು ಕೆಲವರನ್ನು ಪ್ರಹರಿಸುತ್ತ
ಸೈನ್ಯವ ಸಂಹರಿಸಲು ತೊಡಗಿದಳು || ೧೩ ||
ಕೆಲವರು ಖಟ್ವಾಂಗದಿಂದ
ಹೊಡೆಯಲ್ಪಟ್ಟು ಅಲ್ಲೇ ಬಿದ್ದು ಸತ್ತರು
ಕತ್ತಿಯಿಂದ ಸತ್ತರು ಅನೇಕರು
ಕೆಲವರು ಕೋರೆ ಹಲ್ಲುಗಳಿಂದ
ಚುಚ್ಚಲ್ಪಟ್ಟು ಅಲ್ಲೇ ನಾಶವಾದರು || ೧೪ ||
ಸ್ವಲ್ಪ ಹೊತ್ತಿನಲ್ಲಿಯೇ ರಾಕ್ಷಸರ
ಭಾರಿಯಾಗಿರುವ ಸೈನ್ಯವೆಲ್ಲಾ
ಕೆಡವಲ್ಪಟ್ಟಿದ್ದನ್ನು ಕಂಡ ಚಂಡನು
ಅತ್ಯಂತ ಭಯಂಕರಳಾಗಿರುವ
ಆ ಕಾಳಿಯ ಬಳಿಗೆ ನುಗ್ಗಿದನು || ೧೫ ||
ಮಹಾಸುರನಾದ ಚಂಡನು
ಬಾಣಗಳ ಮಳೆಯನ್ನು ಸುರಿಸಿ
ಮುಂಡನು ಸಹಸ್ರ ಚಕ್ರಗಳ ಎಸೆದು
ಭಯಂಕರವಾದ ಕಣ್ಣುಗಳುಳ್ಳ
ಆ ಕಾಳಿ ದೇವಿಯನ್ನು ಮುಚ್ಚಿದರು || ೧೬ ||
ಕಾಳಿಯ ಮೇಲೆ ಮಹಾಸುರನು
ಎಸೆದಿರುವ ಅನೇಕ ಚಕ್ರಗಳು
ಕಾಳಿಯ ಮುಖ ಪ್ರವೇಶಿಸುವಾಗ
ಸೂರ್ಯನ ಅನೇಕ ಬಿಂಬಗಳು
ಮೋಡಗಳ ಒಳಗೆ ಹೊಕ್ಕಂತಿದ್ದವು || ೧೭ ||
ಭಯಂಕರ ಘರ್ಜನ ಶಕ್ತಿಯುಳ್ಳ
ನೋಡಲಾಗದ ಕರಾಳ ಮುಖವು
ಭೀಕರ ಕಾಂತಿಯ ಹಲ್ಲುಗಳುಳ್ಳ
ಕಾಳಿಯು ಅತ್ಯಂತ ಕೋಪದಿಂದ
ಭಯಂಕರ ಅಟ್ಟಹಾಸ ಮಾಡಿದಳು || ೧೮ ||
ಕಾಳಿ ದೇವಿಯು ಕೋಪದಿಂದ
ಮಹಾ ಖಡ್ಗವ ಹಿಡಿದುಕೊಂಡು
ಚಂಡಾಸುರನ ಬಳಿಗೆ ಧಾವಿಸಿ
ಅವನ ಜುಟ್ಟನ್ನು ಹಿಡಿದು ಬಗ್ಗಿಸಿ
ಖಡ್ಗದಿಂದ ಶಿರವ ಕತ್ತರಿಸಿದಳು || ೧೯ ||
ಕಾಳಿ ದೇವಿಯಿಂದ ಚಂಡನ
ಶಿರಶ್ಛೇದನವಾಗುವಾಗ
ಭಯಂಕರ ಘರ್ಜನೆ ಮಾಡಿದನು
ಆ ಘರ್ಜನೆಯ ದೊಡ್ಡ ಧ್ವನಿಯಿಂದ
ಮೂರು ಲೋಕಗಳೂ ಬೆದರಿದವು || ೨೦ ||
ಚಂಡನು ವಧೆಯಾದದ್ದು ಕಂಡು
ಮುಂಡಾಸುರನು ಕೋಪದಿಂದ
ಕಾಳಿ ದೇವಿಯ ಬಳಿಗೆ ನುಗ್ಗಿದ
ಕಾಳಿಯು ರೋಷದಿಂದ ಅವನನ್ನು
ಖಡ್ಗದಿಂದಲೆ ಹೊಡೆದು ಕೊಂದಳು || ೨೧ ||
ಮಹಾವೀರ್ಯಶಾಲಿಗಳಾದ
ಚಂಡನನ್ನು ಮತ್ತು ಮುಂಡನನ್ನು
ಕಾಳಿಯು ವಧೆ ಮಾಡಿದ್ದನ್ನು ಕಂಡು
ಉಳಿದ ಸೈನ್ಯವೆಲ್ಲ ಭಯದಿಂದ
ದಿಕ್ಕು ದಿಕ್ಕುಗಳಿಗೆ ಓಡಿ ಹೋಯಿತು || ೨೨ ||
ಚಂಡ ಮುಂಡರ ಶಿರಗಳನ್ನು
ಹಿಡಿದುಕೊಂಡು ಕಾಳಿದೇವಿಯು
ಚಂಡಿಕಾಂಬೆಯ ಬಳಿಗೆ ಬಂದು
ಪ್ರಚಂಡವಾದ ಅಟ್ಟಹಾಸದಿಂದ
ಒಡಗೂಡಿದ ಮಾತಲ್ಲಿ ಹೇಳಿದಳು || ೨೩ ||
ಯುದ್ಧ ಯಜ್ಞದಲ್ಲಿ ಬಲಿಕೊಟ್ಟಂತಹ
ಮಹಾಪಶು ಚಂಡ ಮುಂಡರನ್ನು
ನಾನೀಗ ನಿನ್ನ ಬಳಿ ತಂದಿರುವೆ
ಆ ಶುಂಭ ನಿಶುಂಭಾಸುರರ
ಸಂಹಾರವನ್ನು ನೀನೇ ಮಾಡು || ೨೪ ||
ಋಷಿಯೆಂದ ಮಹಾಸುರರಾದ
ಚಂಡ ಮುಂಡರನ್ನು ಸಂಹರಿಸಿ
ಶಿರಗಳ ತಂದ ಕಾಳಿಯ ಕಂಡು
ಕಲ್ಯಾಣರೂಪಿ ಚಂಡಿಕಾಂಬೆಯು
ಮಧುರವಾದ ಮಾತನ್ನಾಡಿದಳು || ೨೫ ||
ಶ್ರೀದೇವಿಯೆಂದಳು ಕಾಳಿಗೆ
ಚಂಡ ಮುಂಡರ ಸಂಹರಿಸಿ
ಶಿರಗಳ ನನ್ನ ಬಳಿ ತಂದಿರುವ
ನೀನು ಇನ್ನು ಮುಂದೆ ಲೋಕದಲ್ಲಿ
ಚಾಮುಂಡಿ ಎಂದು ಖ್ಯಾತಿ ಹೊಂದುವೆ || ೨೬ ||
ಗೀತೆ ಗೊಂಚಲು
32 Songs