About

ಶ್ರೀ ದೇವಿ ಅನುಗ್ರಹ

ಭಕ್ತಿ ಗೀತೆಗಳು ಹಾಗೂ ದೇವರ ಸ್ತೋತ್ರಗಳು ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜೀವನದ ಅಮೂಲ್ಯ ನಿಧಿಗಳಾಗಿವೆ. ಭಕ್ತರ ಹೃದಯವನ್ನು ದೇವರೊಂದಿಗೆ ಸಂಪರ್ಕಿಸುವ ಸೇತುವೆಯಂತೆ ಕಾರ್ಯನಿರ್ವಹಿಸುತ್ತವೆ. ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ, ಜೀವನಕ್ಕೆ ಸಕಾರಾತ್ಮಕ ದಿಕ್ಕನ್ನು ನೀಡುತ್ತವೆ. ಮನಸ್ಸಿಗೆ ಆನಂದವಾಗಿ ಶಾಂತಿಯು ಲಭಿಸುತ್ತದೆ.

ಪ್ರತಿದಿನ ದೇವರ ನಾಮಸ್ಮರಣೆಗಳನ್ನು ಪಠಣ ಅಥವಾ ಶ್ರವಣ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗಿ, ಆಧ್ಯಾತ್ಮಿಕ ಪ್ರಗತಿಯ ದಾರಿ ಸಿಗುವುದು.

ನಾನು ಭಕ್ತಿಗೀತೆಗಳನ್ನು ರಚಿಸಿ ದೇವರಿಗೆ ಸಮರ್ಪಿಸಿದ್ದೇನೆ. ದೇವರ ಭಕ್ತರಿಗಾಗಿ ವೆಬ್‌ಸೈಟ್‌ ಅನ್ನು ಮಾಡಲಾಗಿದೆ.

ಧನ್ಯವಾದಗಳು